ಪುಟ:Abhaya.pdf/೨೦೪

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ಸರಸಮ್ಮ ಮೇಜಿನ ಮೇಲಿನಿಂದೊಂದು ಸಣ್ಣ ಪುಸ್ತಕವನ್ನೆತ್ತಿಕೊಂಡು ಬರೆಯತೊಡಗುತ್ತ ಕೇಳಿದರು:

"ಇವರಿಬ್ಬರ ಹೆಸರು ಹೇಳ್ತೀರಾ?

ಇರುಳಿನ ನೀರವತೆಯಲ್ಲಿ ಸ್ವರ ವಿಕಟವಾಗಿ ಪ್ರತಿಸದ್ವನಿಸುವ ಹಾಗೆ ಒಬ್ಬ ಪೋಲಿಸರವನೆಂದ:

"ಏನ್ರೇ ನಿಮ್ಹೆಸ್ರು? ಹುಂ ಹೇಳಿ!"

ಆ ಹುಡುಗಿಯರು ಉತ್ತರನೀಯಲಿಲ್ಲ

ಅವರನ್ನು ಉದ್ದೇಶಿಸಿ ಸರಸಮ್ಮನೇ ಕೇಳಿದರು:

"ಹೆಸರು ಹೇಳ್ತಿರೇನಮ್ಮ? ಇಲ್ಲಿ ಬರಕೋಬೇಕು"

ಮತ್ತೂ ಮತನಾಡಲಿಲ್ಲ ಹುಡುಗಿಯರು.

ಪ್ರಶ್ನೋತ್ತರಕ್ಕೆ ತಕ್ಕ ವಾತಾವರಣ ಏರ್ಪಡಬೇಕೆಂದು ಸರಸಮ್ಮ

"ಇದೇನು ಪೋಲೀ‍ಸ್‍ಸ್ಟೇಷನ್ನೂಂತ ತಿಳಕೊಂಡ್ರಾ? ಅವರ ಕೈಗೆ ಕಟ್ಟಿದ್ದನ್ನ ಬಿಚ್ಚಿ!" ಎಂದರು.ಆ ಸ್ವರದಲ್ಲಿ ನಯವಿನಯವಿರಲಿಲ್ಲ.

ವಯಸ್ಸಾಗಿದ್ದ ಇನ್ನೊಬ್ಬ ಪೋಲೀಸರವನು ಕಟ್ಟಿದ್ದ ಕರವಸ್ತ್ರವನ್ನು ಬಿಚ್ಚಿದ. ದೊಡ್ಡವಳು ಕೈ ಕೊಸರಿಕೊಂಡು ಸೆಟೆದು ನಿಂತಳು. ಚಿಕ್ಕವಳು ಎರಡು ಕೈಗಳನ್ನೆತ್ತಿ ಸೆರಗಿನಿಂದ ಮುಖ ಮುಚ್ಚಿಕೊಂಡಳು.

ಮತ್ತೊಮ್ಮೆ ಹೆಸರು ಕೇಳಿದರು ಸರಸಮ್ಮ. ಆದರೆ ಆ ಹುದುಗಿಯರು ಮಾತನಾಡುವ ಲಕ್ಷಣ ಕಾಣಿಸಲಿಲ್ಲ.

ಗದರಿಕೆಯ ಧ್ವ್ವನಿಯಿಂದ ಮಾತನಾಡಿದ್ದ ಪೋಲೀಸರವನು,ವ್ಯಂಗ್ಯ ಬೆರೆತ ಸ್ವರದಲ್ಲಿ ಹೇಳಿದ:

"ಪೋಲೀಸ್ ಸ್ಟೇಷನ್ನಲ್ಲಾದ್ರೇ ಬಾಯಿ ಬಿಚ್ತವೆ!"

ಸರಸಮ್ಮನಿಗೆ ಪೋಲೀಸರ ಸಹವಾಸವೇನೂ ಪ್ರಿಯವಾಗಿದ್ದಂತೆ ತೋರಲಿಲ್ಲ.

"ಇವರ್‍ನ ಇಲ್ಲಿಗೆ ಯಾತಕ್ಕೆ ಕರಕೊಂಡು ಬಂದಿದೀರಾ?"

"ಏನಮ್ಮ ಹೀಗೆ ಹೇಳ್ತೀರಾ? ಇದೇನು ಹೊಸತೆ? ಹುಂ.ಏನಾದರೂ ಹೆಸರು ಬರಕೊಂಡ್ಬಿಡಿ ನಮಗೆ ಹೊತ್ತಾಯ್ತು"

ಸರಸಮ್ಮನಿಗೆ ರೇಗಿತು.