ಪುಟ:Abhaya.pdf/೨೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಕ್ಷಣಾರ್ಧದಲ್ಲೆ ಬದಲಾದ ಬಯಕೆ. ತನ್ನ ಬಸಿರಲ್ಲಿ ಮಿಸುಕಾಡಿದಂತೆ ಕಂಡ

ಮಗುವಿನ ಆರ್ತನಾದವನ್ನು ಕೇಳಿದವಳಂತೆ ಭ್ರಮೆಗೊಂಡು ತುಂಗಮ್ಮ,

ತಾನೇ ಅತ್ತಿದ್ದಳು-ಪ್ರತಿಸಾರೆಯೂ.

ಬಿಳಿಯದು,ಹಾಲು,ಎಂದು ಒಪ್ಪಿಕೊಂಡಿದ್ದಳು ತುಂಗಮ್ಮ. ಆದರೆ

ಆ ಹಾಲು ನೋಡು ನೋಡುತ್ತಿದ್ದಂತೆಯೇ ಒಡೆದು ಹೋಯಿತು. ಕುಸಿದು

ಬಿತ್ತು ಆಕೆ ಕಟ್ಟಿದ್ದ ಕನಸಿನ ಮನೆ.

ಆ ನೆನಪೊಂದೂ ಅವಳ ಪಾಲಿಗೆ ಸಿಹಿಯಾಗಿರಲಿಲ್ಲ...

ಹೆಬ್ಬಾಗಿಲನ್ನೂ ಆ ವೃತ್ತವನ್ನೂ ದಾಟಿ ಬೀದಿಯುದ್ದಕ್ಕೂ ತುಂಗಮ್ಮ

ನಡೆದು ಹೋದಳು.

ತುಂಬಿದ ಗರ್ಭಿಣಿ ಒಬ್ಬಂಟಿಗಳಾಗಿ ಹಾಗೆ ಸಾಗುತ್ತಿದ್ದರೆ ಆಸಕ್ತಿ

ತೋರದವರು ಯಾರು? ಹಲವು ನೋಟಗಳು ತನ್ನನ್ನು ಮುಟ್ಟುತಿದ್ದುದರ ಅನುಭವವಾಗುತ್ತಿತ್ತು ತುಂಗಮ್ಮನಿಗೆ ಆಗ ಅವಳು ಅಧೀರಳಾಗುತ್ತಿದ್ದಳು.ಮುಖ ಮೈಯೆಲ್ಲ ಸುಡುತ್ತಿದ್ದ ಹಾಗೆ ಭಾಸವಾಗುತ್ತಿತ್ತು ಹೆಜ್ಜೆಗಳು ಅಸ್ಥಿರವಾಗುತ್ತಿದ್ದವು

ಹಾಗೆ ಅಸ್ಥಿರವಾದರೂ ಆಕೆ ಚೇತರಿಸಿಕೊಂಡು ಮುನ್ನಡೆದಳು.

ಅದು ಈಸ್ಟ್-ಎಂಡ್ ರಸ್ತೆ ಎಡಕ್ಕೆ ಹೊರಳಿಕೊಂಡರೆ ಲಾಲ್ಬಾಗ್ ಕೆರೆಯ ಏರಿ ಸಿಗುವುದು ಅಲ್ಲೆ ಬಲಬದಿಯಲ್ಲಿ ಉದಿಸಿಬರುತ್ತಿತ್ತು ಹೊಸ ವಿಸ್ತರಣವಾದ ಜಯ ನಗರ.

ಆ ಹಾದಿಯಾಗಿಯೆ ತುಂಗಮ್ಮ ಬಂದಳು.

ಅಲ್ಲೆ ತಡೆದು ನಿಂತಳಾಕೆ ನಾಲ್ಕು ನಿಮಿಷ ಹೂ ಬಾಡಿದ ಹಾಗೆ

ವಾತಾವರಣ ಕಪ್ಪಿಟ್ಟಿತ್ತು. ಕತ್ತಲಾಗಿತ್ತು ಆಗಲೆ. ಶೀತಲಗಾಳಿಯ ಚಳಿಯೂ,ಹೃದಯದ ನೋವಿನ ನಡುಕವೂ, ದೇಹದಾದ್ಯಂತ ಕಂಪನವಾಯಿತು ತುಂಗಮ್ಮನಿಗೆ.

ಮುಂದೇನು? ಮುಂದೆ ಹೇಗಿನ್ನು?

ಆಕೆಗೆ ವಿವರವಾಗಿ ಗೊತ್ತಿದ್ದುದು ಅಷ್ಟೇ ಜಾಗ. ಅದನ್ನೂ ಆಕೆ

ಕೇಳಿ ತಿಳಿದಿದ್ದುದು ತನಗೆ ಅನ್ನ ನೀಡಿದ್ದ ಗೃಹಿಣಿಯಿಂದ. ಯಾವ ಸಂದೇಹಕ್ಕೂ ಆಸ್ಪದ ಬರದ ಹಾಗೆ ಯಾವು ಯಾವುದೋ ಸಂದರ್ಭದಲ್ಲಿ ಸ್ಥಳದ