ಪುಟ:Abhaya.pdf/೨೫೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

"ಏನು ಬೇಕಮ್ಮ ?" ಎಂದು ಕೇಳಿದರು ಸರಸಮ್ಮ. ಆ ಹೆಂಗಸು ತಮ್ಮ ಪುಟ್ಟ ಕೈ ಚೀಲವನ್ನು ತೆರೆದು,ಅದರಿಂದ ನೂರು ರೂಪಾಹಿಯ ಒಂದು ನೋಟನ್ನು ಹೊರೆತೆಗೆದು ಸರಸಮ್ಮನಿಗೆ ಕೊಡ ಬಂದರು. "ಆಭಯಧಾಮಕ್ಕೆ ವಂತಿಗೆಕೊಡ್ತೀರಾ? ದಯವಿಟ್ಟು ಸೆಕ್ರೆಟರಿಯವರ ಕೈಗೇ ಕೊಡಿ" "ಅದಲ್ಲ...ಇದು...ನಿಮಗೆ....? ಸರಸಮ್ಮನಿಗೆ ಬೇಸರವಾಯಿತು. "ಇದು ಆಸ್ಪತ್ರೆಯಲ್ಲವಮ್ಮ ನಾವುಯಾರು ಯಾವತ್ತು ಏನು ತಗೊಳೊಲ್ಲ ನಿಮ್ಮಲ್ಲೇ ಇಡ್ಕೊಂಡಿರಿ" "ಅಲ್ಲ ನನ್ನ ಕಾಣಿಕೆ ಯಾವಾಗಲು ಕೊನೇಲಿ ತಗೋತೀವಮ್ಮ...." "ನಮ್ಮ ಮಗೂಗೆ ಏನಾದರೆ ತಿಂಡಿ ತೀರ್ಥ....."

"ಅದೆಲ್ಲಾ ನಾವು ನೊಡ್ಕೋತೀವಿ ಯಾವ ಯೋಚ್ನೇನೂ ಬೇಡಿ ....ಸೆಕ್ರೆಟರಿಯವರು ಆಗಲೇ ಹೇಳಿದಾರೆ" ಮನಸಿಲ್ಲದ ಮನಸಿನಿಂದ ಆ ಹೆಂಗಸು ನೋಟನ್ನು ಮತ್ತೆ ತಮ್ಮ ಕೈಚಿಲದೊಳೊಗೆಕ್ಕೆ ತುರುಕಿದರು ಅಂತೂ ಕಾರು ಹೊರಟು ಹೋಯಿತು ಹುಡುಗಿಯರು ಯಾರು ಕಠಡಿಯತ್ತ ಸುಳಿಲಿಲ್ಲ ಬಂದಿದ್ದವಳು ಬಾಗಿಲು ಓರೆ ಮಾಡಿಕೊಂಡು ಬಿಟ್ಟಳು ಸ್ವಲ್ಪ ಹೊತ್ತಾದಮೇಲೆ ಸರಸಮ್ಮ ಹೆಸ್ರು ನೋಂದಾಯಿಸುವ ಪುಸ್ತಕದೊಡನೆ ತುಂಗಮ್ಮನ ಜತೆಗೂಡಿ ಆ ಲಕೊಠಡಿಗೆ ಬಂದರು.ಹುಡುಗಿ ಶೂನ್ಯ ಮನಸ್ಕಳಾಗಿ ಹಾಸಿಗೆಯಮೇಲೆ ಕುಳಿತು, ಬರುತ್ತ ತಂದಿದ್ದ ಬಣ್ಣದ ಬೀಸಣಿಕೆಯಿಂದ ಗಾಳಿ ಹಾಕಿಳ್ಳೊತಿದ್ದಳು. ಒಳಕ್ಕೆ ಬಂದ ಹೆಂಗಸು ....ಕಾರ್ಯದರ್ಶಿನಿಯವರ ಆಚಾತುರ್ಯ.