ಪುಟ:Abhaya.pdf/೨೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಆಭಯ

"ನನ್ನ ಹೆ೦ಡ್ತಿ ಇಲ್ಲಿಗೆ ಬ೦ದವ್ಳಾ ?"

ತು೦ಗಮ್ಮನಿಗೆ ಆ ಪ್ರಶ್ನೆ ಕೇಳಿ ಸೋಜಿಗವೆನಿಸಿತು ಆಕೆ ಎ೦ದಳು: “ಒಳಗ್ಬನ್ನಿ"

ಆತ ಒಳಕ್ಕೆ ಬ೦ದೊಡನೆ ಎ೦ದಿನ೦ತೆ ತು೦ಗಮ್ಮ ಬಾಗಿಲಿಗೆ ಬೀಗ ತಗಲಿಸದಳು.

“ಕನಕಲಕ್ಷಮ್ಮ ಇಲ್ಲಿಗೆ ಬಂದವೈನ್ರಿ?”

"ಇಲ್ವಲ್ಲಾ!”

"ತಮಾಷೆ ಮಾಡ್ಬೇಡಿ. నిజ ಹೇಳಿ"

“ಇಲ್ಲ ಕಿಣ್ರಿ..!”

“ಅಯ್ಯೋ! ಇನ್ನೇನಪಾ. ಗತಿ?"


–ಎನ್ನುತ್ತ ಮಹಾಬಲ ಒರಗು ಬೆಂಚಿನಲ್ಲಿ ಕುಸಿಕುಳಿತ. ಗಂಡಸಿನ ಸ್ವರ ಕೇಳಿ ಹುಡುಗಿಯರು ಅತ್ತ ಬಂದರು ಮಹಾಬಲನನ್ನು ನೋಡಿ, ಆಫೀಸು ಕೊಠಡಿಯ ಬಾಗಿಲಲ್ಲೆ ಗುಂಪುಕಟ್ಟಿ ನಿಂತರು.

“ಆಮ್ಮ ఎల్లి ?"

"ಹೊರ ಹೋಗಿದಾರೆ.”

"అಯ್ಯೊ ಶಿವನೆ! ನನ್ನ ಗತಿ ಹೀಗಾಯ್ತುಲ್ಲಪೊ!”

ಲಲಿತೆಯೊಬ್ಬಳೇ ಹುಡುಗಿಯರ ಗುಂಪನ್ನು ದಾಟಿ ಒಳ ಬಂದಳು: “ಏನ್ರಿ ಅದು? ಏನುಗಲಾಟೆ?"

"ನನ್ನ ಹೆ೦ಡ್ತಿ ಓಡ್ಹೋದ್ಲಪೋ ಓಡ್ಹೋದ್ಲು."


ಹುಡುಗಿಯರಲ್ಲಿ ನಾಲಾರು ಜನ ಮಾತ್ರ ನಕ್ಕರು ಉಳಿದವರ ಮುಖಗಳು ಕಪ್ಪಿಟ್ಟವು, ಕನಕಲಕ್ಷಮ್ಮ ಓಡಿ ಹೋಗುವುದೆಂದರೆ ಅಭಯ ಧಾಮಕ್ಕೇ ಅವಮಾನವಾದ ಹಾಗೆ...


ಗದರಿಸುವ ಧ್ವನಿಯಲ್ಲಿ ಲಲಿತ ಅ೦ದಳು: "ಆಕೆ ಓಡ್ಹೋದ್ಲೂ?ನೀವೇ ಓಡ್ಸಿದ್ರೊ?" "ಅಯ್ಯೊ! ಒ೦ದಳೆ ಸರ ಮಾಡಿಸಿಹಾಕಿದ್ದೆ...ಒ೦ದು ಜತೆ ಚಿನ್ನದ ಬಳೆಗ್ಳು...ರೇಷ್ಮೆಸೀರೆ...ಎಲ್ಲಾ ಹೊಡ್ಕೊ೦ಡು ಹೋದಳಲ್ಲಪ್ಪೋ ಭಗವಂತಾ!”