ಪುಟ:Abhaya.pdf/೨೯೭

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಆ ಉತ್ತರದಿಂದ ತೃಪ್ತಿಗೊಂಡವಳಂತೆ ತುಂಗಮ್ಮ ಸುಮ್ಮನಾದಳು.

"ನಾನು ಮೆಡಿಕಲ್ ಕಾಲೇಜಿಗೆ ಸ್ವಲ್ಪ ದಿವಸ ಮಣ್ಣು ಹೊತ್ತಿದ್ದೆ."

"ಓ!"

"ಇಷ್ಟರೊಳಗೆ ನಾನು ಈ ನಾಗರಜನಹಾಗೆ ಇಲ್ಲಿ ಹೌಸ್ ಸರ್ಜನ್

ಆಗಬೇಕಾಗಿತ್ತು ಆದರೆ ಅದೇನೋ ಅಂತಾರಲ್ಲ-ವಿಧಿ ಬರೆದಿರ್ರ್ಲಿಲ್ಲ

ಅಂತ!"

ತುಂಗಮ್ಮ,ಸೋಮಶೇಖರನನ್ನು ಡಾಕ್ಟರಾಗಿ ಚಿತ್ರಿಸಿಕೊಂಡಳು.

ಕಾಹಿಲೆಗಳನ್ನೆಲ್ಲ ಗುಣಮಾಡಬಲ್ಲ ವಿಚಕ್ಷಣ ಡಾಕ್ಟರು.ಕೆನ್ನೆಗಳು ಬಿರಿಯು

ವಂತೆ ತೋರುತಿದ್ದ ಆ ಮೋಹಕ ನಗೆಯೊಂದೇ ಸಾಕು, ರೋಗಿಗಳನ್ನು

ಹರ್ಷ ಚಿತ್ತರಾಗಿಮಾಡಲು.

"ಮೆಡಿಕಲ್ ಕಾಲೇಜು ಬಿಟ್ಬಿಟ್ರಾ?"

"ಹೂಂ ಕಣ್ರೀ. ಪ್ರಿ-ಮೆಡಿಕಲ್ನಲ್ಲೇನೋ ಪಾಸಾಯ್ತು ಫಸ್ಟ್

ಈಯರ್ ಆಗೋ ಹೊತ್ಗೆ ಬೇಜಾರಾಯ್ತು ನಂಗೆ-ಹೆಣ ಕುಯ್ದು ಕುಯ್ದು!"

ಪ್ರಿ-ಮೆಡಿಕಲೆಂದರೇನೋ ತುಂಗಮ್ಮನಿಗೆ ಗೊತ್ತಿರಲಿಲ್ಲ.ಏನೆಂದು

ಕೇಳಿ ತನ್ನ ಅಗನವನ್ನು ತೋರಿಸಿಕೊಲಳ್ಳುವುದಕ್ಕೂ ಆಕೆ ಸಿದ್ದಳಿರಲಿಲ್ಲ.

ಆದರೆ ಹೆಣಕೊಯವ ಆ ವಿಶಯ! ಅವಳ ಮೈ ಜುಮ್ಮೆಂದಿತು

"ಆಮೇಲೆ?ಕಾಲೇಜು ಬಿಟ್ಬಿಟ್ರಾ?"

-ವಿಷಾದದ ಛಾಯೆಯಿತ್ತು ಆ ಪ್ರಶ್ನೆಯಲ್ಲಿ.

"ಹೂಂ. ಅದಾದ್ಮೇಲೆ ಜಾಸ್ತಿ ಶ್ರಮವಹಿಸಿದ್ದೇನೆ ಬಿ ಎ ಮಾಡ್ಕೊಂಡೆ.

ವಕೀಲನಾಗೋದು ವಾಸಿ ಅನಿಸ್ತು.ಪೂನಾಗೆ ಹೋಗಿ ಎಲ್ ಎಲ್.ಬಿಗೆ

ಕೂತೆ. ಆದರೆ ಜತೇಗೆ ಎಂ ಎ.ನೂ ಮಾಡ್ಕೊಂಡೆ"

ಈ ಸೋಮಶೇಖರ್ ವಕೀಲ ಹಾಗಾದರೆ....ಕರಿಕೋಟು ಹಾಕಿ

ಕೊಂಡು ನ್ಯಾಯಾಸ್ಥಾನದಲ್ಲಿ ವಾದಿಸುವ ಚಿತ್ರ....ತುಮಕೂರಿನಲ್ಲಿ

ಯಾವುದೋ ತಮೀಳು ಸಿನಿಮಾದಲ್ಲಿ ನೋಡಿದ ಹಾಗೆ.

ಆಸ್ಪತ್ರೆಯ ಹೆಬ್ಬಾಗಿಲ ಬಳಿ ಸೋಮಶೇಖರ ಕೇಳಿದ:

"ನೀವು ಬಸ್ನಲ್ಲಿ ಹೋಗ್ತೀರಾ?"

"ಹೌದು.ನೀವು?"