ಪುಟ:Abhaya.pdf/೩೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 "ಕೆಲವರು ಮೋಚಿಗಳನ್ನ ಕರಕೊಂಡ್ಬಂದು ಅಭಯಧಾಮದ ಎಲ್ಲರಿಗು ಹೊಲಿಸಿಬಿಡೋಣ, ಏನಂತೀರ?"
 "ಓಹೋ! ನಿಮ್ಮಂಧ ದಾನಶೀಲರು ಹಾಗೆ ಅಂದಾಗ ಬೇಡ ಅಂತೇವೆಯೆ?"
 ಅವರೆಲ್ಲೋ ಸುತ್ತು ಬಳಸಿಕೊಂಡು ಹೋದರು. ನಿರ್ಜನವಾದ ರಸ್ತೆಗೇ ಬಂದಿದ್ದ ಸೋಮಶೆಖರ, ಮಾತನಾಡಲು ಅನುಕೂಲವಾಗಲೆಂದು. ಆದರೆ ಅಲ್ಲಿಯೇ ಮಾತು ಹೃದಯದ ಚಿಲದೊಳಕ್ಕೆ ಸೇರಿಕೊಂಡಿತು.
 ಆ ಮೌನ ಆನಹನೀಯವಾಗಿತ್ತು ಇಬ್ಬರಿಗೂ.
 'ಥೂ! ನಾನು ಇಂಥ ಗುಗ್ಗು ಎಂದು ತಿಳಿದುಕೊಂಡಿಲಿಲ್ಲ"--- ಎಂದು ಸೋಮಶೆಖರ ತನ್ನನ್ನು ತಾನೆ ನಿಂದಿಸಿದ.
 ಆ ನಿಂದೆಗೆ ಬೆದರಿಯೋ ಏನೋ, ಒಮ್ಮೆಲೆ, ಏನು ಮಾತನಾಡುತ್ತಿದ್ದನೆಂದು ಊಹಿಸುವುದಕ್ಕೆ ಮುಂಚೆಯೇ, ಸ್ವರ ಹೊರಟಿತು.
 "ತುಂಗಾ, ಬಹಳ ದಿವಸದಿಂದ ನಿನಗೊಂದು ವಿಷಯ ಹೇಳ್ಬೇಕೊಂತಿದ್ದೆ."
 ತುಂಗಮ್ಮ ತಲೆ ಎತ್ತಲಿಲ್ಲ. ಎದೆ ಗುಂಡಿಗೆಯ ಬಡಿತ ತೀವ್ರವಾಯಿತು. ಸಲಿಗೆಯ ಸಂಬೋಧನೆ...ಕೊಳಲಿನ ಧ್ವನಿಯನ್ನೂ ಮೀರಿಸುವ ಸುಸ್ವರ.
 "ಒಂಟಿ ಬದುಕೇವಾಸೀಂತ ಇಷ್ಟುದಿನ ಭಾವಿಸಿದ್ದವನು ನಾನು. ಆದರೆ ನಿಮ್ಮ ಅಭಯಧಾಮದ ವಾರ್ಷಿಕೋತ್ಸವದ ದಿವಸದಿಂದ ನನ್ನ ಭಾವನೆ ಬದಲಾಗಿದೆ. ಅಲ್ಲಿ ಒಬ್ಬಳನ್ನ ನೋಡಿದ್ಮೇಲೆ, ಮದುವೆ ಮಾಡ್ಕೋ ಬೇಕು ಅನ್ನೋ ತೀರ್ಮಾನಕ್ಕೆ ಬಂದೆ ಆಕೆ ಯಾರು ಗೊತ್ತೆ ತುಂಗ?"
 ಎಷ್ಟೋ ಕಾಲವಾದಮೇಲೆ ತುಂಗಮ್ಮನ ಕಣ್ಣುಗಳು ತೇವಗೊಂಡು ಹೊರಕ್ಕೆ ಕಂಬನಿ ಪುಟಪುಟಯಿತು.
 "ಹೇಳು! ಗೊತ್ತೆ ನಿಂಗೆ?"
 ಆಕೆಗರಿಯದ ಯಾವುದೋ ವೇದನೆಯಿಂದ ಏನನ್ನೋ ಹೇಳ ಬೇಕೆಂದು ತುಟಿಗಳ ಚಲಿಸಿದುವು. ಅದರೆ ಸ್ವರ ಹೊರಡಲಿಲ್ಲ
 "ತುಂಗ! ಇಲ್ನೋಡು!"
 ತುಂಗಮ್ಮ ಮುಖವೆತ್ತಿ ಅರೆಕ್ಷಣ ಸೋಮಶೇಖರನನ್ನು ನೋಡಿದಳು.