ಪುಟ:Abhaya.pdf/೩೧೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೩೦೫
ಅಭಯ

"ನಾನೇ ಹೋಗಿ ಕರಕೊಂಡು ಬರಿತ್ತೀನಿ."
....ಅಷ್ಟು ಹಿಂದಿನ ದಿನ ಸಂಜೆ__ರಾತ್ರೆಯ ಘಟನೆಗಳು.
...............
ಬೆಳಕು ಹರಿಯುತಿತ್ತು. ತುಂಗಮ್ಮ ಪೂರ್ತಿ ಕಣ್ಣು ಬಿಟ್ಟು ಸುತ್ತಲೂ
ನೋಡಿದಳು. ಹುಡುಗಿಯರು ಒಬ್ಬೊಬ್ಬರಾಗಿ ಏಳುತಿದ್ದರು ಸ್ವತಃ
ದೊಡ್ಡಮ್ಮನೇ ತಮ್ಮ ಕೊಡಿಯಿಂದ ಹೊರಬಂದು ಗಂಟೆ ಬಾರಿಸಿದರು.
ಅಲ್ಲಿ ಹಾಗೆ ನಿಂತು ಅವರು ತುಂಗಮ್ಮನನ್ನು ನೋಡಿ ಅಂದರು:
"ಎದ್ದಿಯಾ ತುಂಗ?"
ಏಳುತ್ತ ತುಂಗಮ್ಮ ಉತ್ತರವಿತ್ತಳು:
"ಹೂಂ.ದೊಡ್ಡಮ್ಮ."
ಪ್ರಾತರ್ವಿಧಿಗಳು ಮುಗಿದುವು ಸರಸಮ್ಮ ಜಲಜೆಯೊಡನೆ, ಲಲಿತೆಯನ್ನು
ಕರೆತರಲು ಆಸ್ಪತ್ರೆಗೆ ಹೋದರು ತರಗತಿಗಳು ಆರಂಭವಾದುವು.
ತುಂಗಮ್ಮ ಅದೇನು ವಾ ಹೇಳಿದಳೊ ಆದಿನ! ಹುಳು ಕೊರೆದಂತೆ
ಒಂದೇ ವಿಷಯ ಆಕೆಯನ್ನು ಬಾಧಿಸುತಿತ್ತು : ತಾನು ಒಪ್ಪಿಕೊಂಡಿದ್ದು
ತಪ್ಪಾಯಿತು; ಇದು ಸಾಧ್ಯವಿಲ್ಲವೆಂದು ಸೋಮಶೇಖರನಿಗೆ ತಿಳಿಸಬೇಕು;
ಇವರನ್ನೆಲ್ಲ ಬಿಟ್ಟು, ಈ ಅಭಯಧಾಮವನ್ನು ಬಿಟ್ಟು, ತಾನು ಹೋಗುವು
ದೆಂದರೇನು?....ಹಾಗೆ ಹೃದಯವನ್ನು ಕಲ್ಲಾಗಿ ಮಾರ್ಪಡಿಸಿದಾಗ
ತುಂಗಮ್ಮನಿಗೆ ತುಸು ಸಮಾಧಾನವೆನಿಸಿತು.
ಸೊರಗಿದ ಸುಂದರಿಯಾಗಿ ಬಂದ ಲಲಿತೆಗೆ ಅಪೂರ್ವ ಸ್ವಾಗತ ದೊರೆಯಿತು.
"ವಕೀಲರು ಬರಲಿಲ್ವಾ"
__ಎಂದು ಲಲಿತಾ, ಜಲಜೆಯನ್ನು ನೋಡಿ ಕಣ್ಣು ಮಿಟಿಕಿಸುತ್ತಾ ತುಂಗಮ್ಮನೆದುರು ಅಂದಳು.
"ಯಾರು__ರಾಜಕುಮಾರರೆ?"
__ಎಂದಳು ಏನೂ ತಿಳಿಯದ ಜಲಜ, ತಮಾಷಗೆ.
ಆದರೆ ತುಂಗಮ್ಮ ನಗಲಿಲ್ಲ. ಆಕೆಯ ಗಂಭೀರ ಮುಖಮುದ್ರೆ ಲಲಿತ ಜಲಜೆಯನು ಸುಮ್ಮನಾಗುವಂತೆ
ಮಾಡಿತು.
20