ಪುಟ:Abhaya.pdf/೩೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಆದರೆ ಯಾವ ಸಪ್ಪಳವೂ ಕೇಳಿಸುತ್ತಿರಲಿಲ್ಲ. ಜ್ವರದ ಗುಂಗಿನಲ್ಲಿ

ಹುಡುಗಿ ಕನವರಿಸುತ್ತಿರಬೇಕು-ಎಂದುಕೊಂಡರು ಸರಸಮ್ಮ ಧ್ವನಿಯನ್ನು ಮೃದುಗೊಳಿಸುತ್ತ ಅವರೆಂದರು:

"ಯಾವ ಸಪ್ಪಳವೂ ಇಲ್ವಲ್ಲೇ....ಕನಸು ಬಿದ್ದಿರ್ಬೇಕು ನಿಂಗೆ.

ಮಲಕೋಮ್ಮ...."

"ಊಹೂಂ ದೊಡ್ಡಮ್ಮ....ನಂಗ್ನಿದ್ದೆ ಬಂದಿಲ್ಲ ನೋಡಿ ಬೇಕಾದರೆ

ಬಂದಿದಾರೆ ಯಾರೋ "

ಜಲಜ ಹಟವಾದಿ. ಎದ್ದು ಬಾಗಿಲು ತೆರೆದು ನೋಡಿ ಬರದೇ

ಇದ್ದರೆ, ಆಕೆ ನಿದ್ದೆ ಹೋಗುವಳೇ ಅಲ್ಲ ಸರಸಮ್ಮನಿಗೆ ಅದು ತಿಳಿದಿತ್ತು.

ಹುಡುಗಿಯರು ಊಟ ಮುಗಿಸಿ ಒಬ್ಬೊಬ್ಬರಾಗಿ ಬಚ್ಚಲು ಮನೆಗೆ

ತಟ್ಟೆ ತೊಳೆಯಲು ಹೊರಟಿದ್ದರು.

ಸರಸಮ್ಮ, "ಹಟಮಾರಿ ಕಣೆ ನೀನು" ಎನ್ನುತ್ತ ನಸು ನಕ್ಕು,

ಕನ್ನಡಕವನ್ನೂ ಪುಸ್ತಕವನ್ನೂ ಮೇಜಿನ ಮೇಲಿರಿಸಿ, ಎದ್ದು ನಿಂತು ಒಳ ಆವರಣದ ಬಾಗಿಲಿನತ್ತ ಸಾಗಿದರು ಬೀಗ ಹಾಕಿದ್ದ ಬಾಗಿಲು ಆಕೆಯ ಸೊಂಟದಲ್ಲಿ ತೂಗಾಡುತಿದ್ದೊಂದು ಗೊಂಚಲಿನಿಂದ ಒಂದು ದೊಡ್ಡ ಕೈ ಆ ಬೀಗವನ್ನು ತೆಗೆಯಿತು ಸರಸಮ್ಮನ ಬೆರಳ ಸೋಂಕಿಗೆ ತೆರೆದುಕೊಂಡ ಬಾಗಿಲಿನೆಡೆಯಿಂದ, ಬಯಲಲ್ಲಿ ಸುತ್ತಾಡುತಿದ್ದ ತಣ್ಣನೆಯ ಗಾಳಿ ಒಳ ನುಗ್ಗಿತು.

ಸ್ವಾಭಾವಿಕವಾಗಿಯೇ ಮೆಟ್ಟಲುಗಳತ್ತ ಸರಿಯಿತು ಸರಸಮ್ಮನ

ದೃಷ್ಟಿ. ಸುಳ್ಳಾಡಿರಲಿಲ್ಲ ಜಲಜ!

....ಮೆಟ್ಟುಗಲ್ಲುಗಳ ಮೇಲೆ ಮುದಡಿ ಬಿದ್ದಿದ್ದ ಒಂದು ಹೆಣ್ಣು ಜೀವ.

ಬಲಗೈ ಬಾಗಿಲಿನತ್ತ ಚಾಚಿತ್ತು. ಮಣ್ಣನ್ನು ಅಪ್ಪಿಕೊಂಡಿತ್ತು ಮುಖ.

ಜಲಜಳ ಕ್ಷೀಣ ಸ್ವರ ಸರಸಮ್ಮನನ್ನು ಹಿಂಬಾಲಿಸಿ ಬಂತು.

"ದೊಡ್ಡಮ್ಮಾ, ಯಾರು ದೊಡ್ಡಮ್ಮ?"

ಸರಸಮ್ಮ ಉತ್ತರವೀಯಲಿಲ್ಲ ಅವರು ಬಾಗಿ, ಬಿದ್ದಿದ್ದ ಹೆಣ್ಣಿನ

ಮುಖವೆತ್ತಿ ಆ ಮೂಗಿಗೆ ಬೆರಳಿಟ್ಟು ನೋಡಿದರು. ಪ್ರಜ್ಞೆ ತಪ್ಪಿತ್ತು ಅಷ್ಟೆ. ಅವರು ಕೆಳಗಿಳಿದು ಆ ಹೆಣ್ಣು ಜೀವವನ್ನು ಎತ್ತಿ ಒಳಕ್ಕೊಯ್ಯಲು ಯತ್ನಿಸಿದರು. ಅದು ಅವರ ವಯಸ್ಸಾದ ಕೈಗಳಿಗೆ ಮೀರಿದ್ದ ಭಾರ.