ಪುಟ:Chirasmarane-Niranjana.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"ದೇವಕೀದು." "ದೇವಕಿ?" "ಹೂಂ.ಬಾ....." ಕಣ್ಣ ಬಲಕ್ಕೆ ಹೊರಳಿ ಬಿರಬಿರನೆ ನಡೆದ.ಅಪ್ಪುವೂ ಅಷ್ಟೇ ಚುರುಕಾಗಿ ಅವನನ್ನು ಹಿಂಬಾಲಿಸಿದ.ಮೆದುಳು ಧಿಮಿಗುಡುತ್ತ ಯೋಚಿಸಿತು.ದೇವಕಿ-ಯಾರು ದೇವಕಿ?ಕಳೆದ ವರ್ಷ ವಿಷಮ ಜ್ವರದಿಂದ ಸತ್ತ ಬಡ ರೈತನ ಹೆಂಡತಿ.ಎಳೆಯ ಮಗುವಿನ ತಾಯಿ."ನಮ್ಮಮ್ಮನ ಜತೇಲಿ ದೇವಕೀಂತಲೂ ಒಬ್ಬಳು ಕಾಯಿಪಲ್ಯ ಮಾರೋಕೆ ಹೋಗ್ತಾಳೆ...."ಹಾಗೆಂದು ಸ್ವಲ್ಪ ಕಾಲದ ಹಿಂದೆ ಕಣ್ಣನೇ ಅಪ್ಪುವಿಗೆ ಹೇಳಿದ್ದ.ಹಾಗಾದರೆ,ಆ ದೇವಕಿಯನ್ನು ಜರೆದು ನುಡಿಯುವ ಗಂಡಸು ಯಾರಿರಬಹುದು?....ಒಮ್ಮೆಲೆ,ಪರಿಸ್ಥಿತಿ ಏನಿರಬೇಕೆಂಬುದರ ಅರಿವಾಗಿ ಅಪ್ಪುವಿನ ರಕ್ತ ತಣ್ಣಗಾಯಿತು.ಆದರೆ ಮರುಕ್ಷಣವೇ ರಕ್ತ ಹಿಂದಿಗಿಂತಲೂ ಹೆಚ್ಚು ವೇಗದಿಂದ ಧುಮುಧುಮಿಸಿ ಹರಿಯಿತು. ಕಣ್ಣ ಆ ಕತ್ತಲೆಯಲ್ಲೂ ಹಾದಿಯನ್ನು ಗುರುತಿಟ್ಟು ಮೆಲ್ಲಮೆಲ್ಲನೆ ಓಡಿದ.ಅಪ್ಪು ಆತನನ್ನೇ ಹಿಂಬಾಲಿಸಿದ.ಆ ಗುಡಿಸಲು ಮತ್ತು ಹಿತ್ತಿಲು ಸಮೀಪಿಸಿದೊಡನೆ,ಅವರು ತಡೆದು ನಿಂತರು.ಅಲ್ಲಿಗೆ ಮಾತುಗಳು ಸ್ಪಷ್ಟವಾಗಿ ಕೇಳಿಸಿದವು. ಕಣ್ಣ ಪಿಸು ಮಾತನಾಡಿದ: "ಅವನು ನಂಬಿಯಾರರ ಚಾಕರ,ಸ್ವರ ಗುರುತು ಹಿಡಿದ್ಯಾ?" "ಹೂಂ." "ಕುಡಿದಿದ್ದಾನೆ." "ಹೂಂ." "ಕುಡಿದಿದ್ದ ಆ ಮನುಷ್ಯ,ಬಡಗುಡಿಸಲಿನ ಬಿದಿರುತಡಿಕೆಯ ಬಾಗಿಲಿಗೆ ಒದೆಯುತ್ತಿದ್ದ."ಇದು ಮುರ್ದಾಕೋದೇನೂ ದೊಡ್ಡ ವಿಷಯ ಅಲ್ಲ.ನೀನಾಗಿ ಕರಕೊಂಡ್ರೆ ಚಂದ-ಒಡೆಯ ಏಳ್ಪಿಟ್ಟಿದ್ದಾರೆ.ಅವರ ಸೇವೆ ನೀನು ಮಾಡಾಕ್ಮುಂಚೆ....ಹಿಕ್..." ಒಳಗೆ,ತಾಯಿ ಎದೆಗವಚಿಕೊಂಡಿದ್ದ ಹಸುಳೆ ಅಳುತ್ತಿತ್ತು.ದೇವಕಿ ಗಟ್ಟಿಯಾಗಿ ಹೇಳುತ್ತಿದ್ದಳು:"ದೇವರು ನಿನಗೆ ಶಿಕ್ಷೆ ಕೊಡದೆ ಇರಲಾರ ಪಾಪಿ!" "ಇಷ್ಟು ದಿವಸ...ನೀನಾಗಿಯೇ ಹಾದಿಗ್ಬರ್ತೀಂತ ಕಾದದ್ದಾಯ್ತು....ಹಿಕ್...