ಪುಟ:Chirasmarane-Niranjana.pdf/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ ೧೩೭ ಅವರು ಸಿದ್ಧರಿರಲಿಲ್ಲ. ಆತನನ್ನು ಕಳುಹಿಸಿಬಿಡುವುದು ಬಲಾಢ್ಯರಾದ ಅವರಿಗೇನೂ ಕಷ್ಟದ ಮಾತಾಗಿರಲಿಲ್ಲ. ಆದರೆ ಖಾಲಿಯಾದ ಆ ಜಾಗಕ್ಕೆ ಬೇರೆ ಯಾರನ್ನು ನೇಮಿಸಬೇಕು?- ನಂಬೂದಿರಿ ಸಾಮಾನ್ಯವಾಗಿ ಪರ ಊರುಗಳಿಗೆ ಪಟ್ಟಣಗಲಳಿಗೆ ಹೋಗುವ ವ್ಯಕ್ತಿಯಲ್ಲ.ಹೋದರೂ ಕೋರ್ಟು ಕಚೇರಿಗಳ ಕೆಲಸಕ್ಕೆ ಎಷ್ಟೋ ಅಷ್ಟೆ. ಒಮ್ಮೆಯೂ ಪತ್ರಿಕೆ ಮುಟ್ಟದ ಅವರು ,ಕಯ್ಯೂರಿನ ಹೊರಗೆ ಏನಗುತ್ತಿದೆ ಎಂದು ಸ್ಪಷ್ಟವಾಗಿ ತಿಳಿದವರಲ್ಲ.ನಂಬಿಯಾರರು ಭೇಟಿಯಾದಗ ಏನಾದರು ಹೇಳಿದರೆ," ಹಾಗೇನು ?" ಎಂದು ಹೇಳಿ , ಅದನ್ನು ಮರುಕ್ಷಣವೇ ಮರೆತುಬಿಡುತಿದ್ದರು. ಆದರೆ ಹೊರಗಿನ ವ್ಯವಹಾರವನ್ನು ತಕ್ಕ ಮಟ್ಟಿಗೆ ತಿಳಿದಿದ್ದ ನಂಬಿಯಾರರು,ಇಂತಹ ಸಮಸ್ಯೆಗಳನ್ನು ಕುರಿತು ಹೊರಗಿನವರೊಡನೆ ಚರ್ಚಿಸಿದ್ದವರು,ಎಲ್ಲ ಕಡೆಗಳಲ್ಲೂ ಈಗೀಗ 'ತಲೆಹೋಕ'ಉಪಾಧ್ಯಾಯರೇ ಇರುವವರೆಂದು ಕೇಳಿದ್ದರು. ಹಾಗಿರುತ್ತ,ಇರುವ ಮಾಸ್ತಾರನ್ನು ಕಳುಹಿಸಿ ಆತನಿಗಿಂತ ಹೆಚ್ಚು ಭಯಂಕರನಾದವನನ್ನು ಕರೆಸಲು ಅವರು ಸಿದ್ಧರಿರಲಿಲ್ಲ. ಅಲ್ಲದೆ, ಅವರ ಹುಡುಗ ಕರುಣಾಕರನಿಗೆ ಅಲ್ಲಿದ್ದುದು ಮತ್ತೊಂದು ವರ್ಷದ ವಿದ್ಯಾಭ್ಯಾಸ ಮಾತ್ರ,ಮುಂದೆ ನೀಲೇಶ್ವರಕ್ಕೆ ಅವನನ್ನು ಕಳುಹಿಸಬೇಕು.ಅಷ್ಟರವರೆಗೆ ಈ ಮಾಸ್ತರೇ ಇರಲಿ-ಎಂಬುದೂ ಅವರ ಯೋಚನೆಯಗಿತ್ತು. ಹೀಗಿದ್ದರೂ, ಒಮ್ಮೆ ಮಾತ್ರ ನಂಬಿಯಾರರಿಗೆ ತುಂಬ ದಿಗಿಲಾಯಿತು.ಕರುಣಾಕರನ ಪುಸ್ತಕಗಳ ಮೇಲೇ ಕಣ್ಣೋಡಿಸುತ್ತಿದಾಗ ಚರಿತ್ರೆಯ ಟಿಪ್ಪಣಿ ಪುಸ್ತಕದಲ್ಲಿದ್ದ ಕೆಲ ವಾಕ್ಯಗಳನ್ನೋದಿ,ಅವರು ದಂಗಾದರು.ಪ್ರಶ್ನೋತ್ತರಗಳ ರೂಪದಲ್ಲಿತ್ತು ಆ ಟಿಪ್ಪಣಿ. "ನಮ್ಮನ್ನಾಳುವವರು ಯಾರು ?" "ಪರಕೀಯರು." "ಅವರ ಊರು ಎಲ್ಲಿದೆ?" "ಅದು ಸಾವಿರ ಮೈಲುಗಳ ಆಚೆ" "ಆಳುವವರಿಗೆ ಏನೆನ್ನುತ್ತರೆ?" "ರಾಜರು." "ಆಳಲ್ಪಡುವವರಿಗೆ ಏನೆನ್ನುತ್ತರೆ"? "ಪ್ರಜೆಗಳು." ಈ ಪುಟದಲ್ಲೆ ಕೆಳಗೊಂದು ಸಾಲಿಯ್ಯು; "ಪರಕೀಯ ರಾಜರ ಪ್ರಜೆಗಳು ಗುಲಾಮರು.