ಪುಟ:Chirasmarane-Niranjana.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ

ಉಡುಗಿ ಹೋಗಿತ್ತು.ಆತ ಆ ದಿನ ಅತ್ಯಂತ ಸುಖಿಯೂ ಆಗಿದ್ದ; ಅತ್ಯಂತ ದುಃಖಿಯೂ ಆಗಿದ್ದ. ಒಂದು ದೃಷ್ಟಿಯಲ್ಲಿ ಆತನಿಗೆ ಅವಮಾನವಾಗಿತ್ತು.ಆದರೆ, ನೆರೆದಿದ್ದ ರೈತರು ಯಾರೂ ಅದು ಆತನಿಗಾದ ಅವಮಾನವೆಂದು ಭಾವಿಸಿರಲಿಲ್ಲ.ತಮ್ಮನ್ನೇ ಯಾರೋ ಜರೆದ ಹಾಗೆ ವರ್ಶಿಸಿದರು.

 ಆ ದಿನ ನಡೆದುದೆಲ್ಲವನ್ನೂ ಸ್ಮರಿಸಿಕೊಳ್ಳುತ್ತ ಕೃಷ್ಣನ್ ನಾಯಕರ ಕಣ್ಣುಗಳಿಂದ ಕಣ್ಣೀರು ಧಾರಾಕಾರವಾಗಿ ಸುರಿಯಿತು.ಆತನ ವೃದ್ದೆ ತಾಯಿ ನಡೆಗೋಲನ್ನೂರಿಕೊಂಡು ಬಂದು,ಕಣ್ಣೆದುರು ನಡೆಯುತ್ತಿದ್ದುದನ್ನೆಲ್ಲ ನಂಬಬೇಕೆ ಬಾರದೆ ಎಂಬ ಶಂಕೆ ಬಾಧಿಸುತ್ತಲಿದ್ದರೂ,"ಕೂತ್ತೊಳ್ಳೀಪ್ಪಾ, ಕೂತ್ತೊಳ್ಳೀಪ್ಪಾ...." ಎಂದಳು.
  ಹೆಚ್ಚಿನವರು ಒಬ್ಬೊಬ್ಬರಾಗಿ ತೆರಳಿದರು. ಸಮ್ಮೇಳನಕ್ಕೆ ಹೋಗಬೇಕಾಗಿದ್ದವ್ರಷ್ಟೇ ಉಳಿದರು.
" ಮುಂದೇನು?"ಎಂದ ಅಪ್ಪುವಿನ ತಂದೆ.
ಕೋರ ಮತ್ತೂ ಹೇಳಿದ:
"ಜಮೇನ್ದಾರರ ಕಡೆಯೋರು ಪುನಃ ಇಲ್ಲಿಗೆ ಬರೋದು ಖಂಡಿತ.ಇವತ್ತು ರಾತ್ರೆಯೋ ನಾಳೆ ಬೆಳಗ್ಗೆಯೋ.ಬರೋದಂತೂ ಖಂಡಿತ."
"ಹಾಗಾದರೆ ನಾವು ಹೋಗೋದು ಬೇಡ.ಇಲ್ಲೇ ಇದ್ಬಿಡೋಣ" ಎಂದ ಚಿರುಕಂಡನ ತಂದೆ.
"ಯಾಕೆ,ಜಮೀನ್ದಾರರ ಕೈಲಿ ಜಗಳಾಡ್ಬೇಕೂಂತ ಆಸೆಯಾಗ್ತದೇನು?"  ಎಂದು,ಆವರೆಗು ಸುಮ್ಮನೆ ಇದ್ದವನೊಬ್ಬ ಹೇಳಿದ.
  ಮೂಲೆಯಲ್ಲಿ ಪ್ರತ್ಯೇಕವಾಗಿಯೇ ಇದ್ದ ಅಪ್ಪು ಮತ್ತು ಚಿರುಕಂಡರನ್ನು ಅಪ್ಪುವಿನ ತಂದೆ ಕೇಳಿದ:
 "ಏನ್ರೋ ಸುಮ್ಮನಿದೀರಲ್ಲ.ಏನ್ಮಾಡೋಣ ಈಗ?"
  ಚಿರುಕಂಡ ಸಮಾಧಾನವಾಗಿ ಹೇಳಿದ:
 "ಪ್ರಯಾಣ ನಿಲ್ಲಿಸ್ಬಾರ್ದು."
 "ಏನ್ಮಾಡೋದೂಂತ ಮಾಸ್ತರನ್ನು ಕೇಳಬಾರ್ದಾ?ಬೇಕಾದರೆ ನಾನೇ ಅವರಲ್ಲಿಗೆ ಹೋಗ್ಬರ್ತೇನೆ" ಎಂದ ಕೋರ.
ದೃಢವಾದ ಸ್ವರದಲ್ಲಿ ಚಿರುಕಂಡನೆಂದ:
 "ಕತ್ತಲಾಗೋಕ್ಮುಂಚೆ ಯಾರೂ ಅವರನ್ನು ನೋಡ್ಕೂಡ್ದು!" ಕೃಷ್ಣನ್ ನಾಯರ್  ಕಂಪಿಸುವ ಧ್ವನಿಯಲ್ಲಿ ಹೇಳಿದ: