ಪುಟ:Chirasmarane-Niranjana.pdf/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 ಚಿರಸ್ಮರಣೆ

"ಯಾಕೆ ಗಾಬರಿಯಯ್ತೆ?" ಎಂದರು ನಂಬಿಯಾರರು;ಸ್ವತಃ ತಮ್ಮ ಹ್ರುದಯದೊಳಗಿನ ಅವ್ಯವಸ್ಥೆಯನ್ನು ಹತೋಟಿಗೆ ತಂದುಕೊಳ್ಳುತ್ತ.
"ಇಲ್ವಲ್ಲ! ಕರೆದುದ್ದು ತಾವೂಂತ ತಕ್ಷಣ ತಿಳೀತು."
 ಮಾಸ್ತರು ಉತ್ತರ ಕೊಟ್ಟರೇ ಹೊರತು ನಂಬಿಯಾರರನ್ನು ತಮ್ಮ ಕೊಠಡಿಗೆ ಕರೆಯಲಿಲ್ಲ.ನಿಂತಲ್ಲಿಂದಲೇ ನಂಬಿಯಾರರೊಮ್ಮೆ ಅತ್ತ ಇಣಿಕಿ ನೋಡಿದರು.
"ಎಲ್ಲಿ,ನಿಮ್ಮ ರಾತ್ರಿ ಶಾಲೆ ನಿನ್ನೆ ಇರ್ಲ್ಲಿಲ್ವಂತೆ!"
"ಹೌದು.ಎಲ್ಲಾ ತಳಿಪರಂಬ ಜಾತ್ರೆಗೆ ಎದ್ದಿಟ್ಟಿದ್ದಾರೆ."
"ಹಾಗೇಂತ ಬೆಳಿಗ್ಗೆ ತಿಳೀತು.ಮೊದಲೆಲ್ಲ ನಮ್ಮಲ್ಲಿ ಹೇಳದೆ ಕೇಳದೆ ಯಾರೂ ಎಲ್ಲಿಗೂ ಹೋಗ್ತಿರಲಿಲ್ಲ;ಹೂಂ....ನಿಮಗಾದರೂ ವಿಷಯ ಗೊತ್ತಿರ್ತಿದೇನೋಂತ ಬಂದೆ."
 "ಇಲ್ಲ;ಹಾಗೆ ಹೊರಟಿದ್ದಾರೆ ನೋಡಿ."
 ಶಾಲೆಯ ಛಾವಣೆಯ ಒಂದು ಬೊಂಬನ್ನು ಹಿಡಿದು,ಗಟ್ಟಿಯಾಗಿದೆಯೇ ಎಂದು ಅಲುಗಿಸಿ ನೋಡಿ,ನಂಬಿಯಾರರೆಂದರು:
 "ಹಾಗೇ ಹೊರಡದೇನು ಮಾಡಿಯಾರು?ನಿನ್ನೆ ಏನಾಯ್ತೂಂತ ನಿಮಗೆ ಗೊತ್ತಿದ್ದೀತು."
 ವಿಷಯ ತಿಳಿದಿದ್ದರೂ ಮಾಸ್ತರರೆಂದರು:
"ಇಲ್ಲ,ಏನಾಯ್ತು?"
ಮಾಸ್ತರ ಮಾತನ್ನು ನಂಬಬೇಕೋ ಬೇಡವೋ ಎಂದು ಕ್ಷಣ ಕಾಲ ಅನುಮಾನಿಸಿ ನಂಬಿಯಾರರು,ಹಿಂದಿನ ದಿನದ ಘಟನೆಯನ್ನು ತಮ್ಮ ದೃಷ್ಟಿಯಿಂದ ಸೂಕ್ಷ್ಮವಾಗಿ ವಿವರಿಸಿ ಅಂದರು:
"....ಆ ಕೃಷ್ಣನ್ ನಾಯರ್-ಅವನನ್ನು ಅವತ್ತೇ ಜೈಲಿಗೆ ಕಳಿಸ್ಬೇಕಾಗಿತ್ತು.

ಈಗ ನೋಡಿ ಅಹಂಕಾರ!ಕಯ್ಯೂರಿನಲ್ಲಿನ್ನು ಈ ಬಡ್ಡಿಮಕ್ಕಳಿಗೆ ಬುದ್ದಿ ಕಲಿಸೋರೆ ಇಲ್ವಾಂತಾಯ್ತೆ ಹಾಗಾದರೆ? ಮನಸ್ಸು ಮಾಡಿದರೆ ಅಷ್ಟೂ ಜನರ ಮೇಲೆ ಕೇಸು ಹಾಕಿಸಿ ಅವರನ್ನೆಲ್ಲ ಅರೆಸ್ಟ್ ಮಾಡಿಸ್ಬಹುದು.ಇಷ್ಟಾದರೂ ಅರ್ಥವಾಗದೇನು ಅವರಿಗೆ?"

 ರಾತ್ರಿ ಮತ್ತೇನಾಯಿತೆಂಬುದು ಮಾಸ್ತರಿಗೆ ಗೊತ್ತಿರಲಿಲ್ಲ .ಅಲ್ಲೇನಾದರೂ ಅನಾಹುತವಾಯಿತೆ ಎಂದು ತಿಳಿಯುವ ಆತುರ ಅವರಿಗಿತ್ತು.ಸುದ್ದಿ ಮುಟ್ಟಿಸುವವರಿಲ್ಲದೆ ಅವರು ವಿವಂಚೆನೆಗೆ ಒಳಗಾಗಿದ್ದರು.ನಂಬಿಯಾರರ ಬಾಯಿಂದಲೇ ಏನಾದರೂ ತಿಳಿಯೋಣವೆಂದು ಮೆಲ್ಲನೆ ಅವರೆಂದರು: