ಪುಟ:Chirasmarane-Niranjana.pdf/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ಚಿರಸ್ಮರಣೆ

  ಆ ರಾತ್ರೆ ಮಾಸ್ತರು ಬಹಳ ಹೊತ್ತು ಮಾತನಾಡಿದರು. ಅದು ಗಣಿತದ ಪಾಠವಾಗಿರಲಿಲ್ಲ, ಭೂಗೋಳ-ಚರಿತ್ರೆಯಾಗಿರಲಿಲ್ಲ.ಆದರೆ ಅವರ ಮಾತಿನಲ್ಲಿ ಶತಶತಮಾನಗಳಿಂದ ರೈತರಿಗೆ ಆದ ಅನ್ಯಾಯದ ಲೆಕ್ಕಾಚಾರವಿತ್ತು.ಕಯ್ಯೂರನ್ನೂ ಒಳಗೊಂಡ ಇಡೀ ಭೂಲೋಕದ ವೃತ್ತಾಂತವಿತ್ತು; ಅನಾದಿ ಕಾಲದಿಂದಲೂ ಮಾನವ ಒಳ್ಳೆಯ ಬದುಕಿಗಾಗಿ ನಡೆಸಿದ ಹೋರಾಟದ ಇತಿಹಾಸವಿತ್ತು. ಆ ಇತಿಹಾಸದ ಒಂದಂಶವಾಗಿತ್ತು, ಕೃಷ್ಣನ್ ನಾಯರ್ ಹೊಲದಲ್ಲಿ ಬೆಳೆಸಿದ ಪೈರನ್ನು ರಕ್ಷಿಸುವುದಕ್ಕೋಸ್ಕರ ನಡೆದ ಯತ್ನ ಕೂಡ. ಎನು ಬೇಕು ನಮ್ಮ ಜನಕ್ಕೆ? ದಾಸ್ಯದ ಬೇಡಿ ಕಳಚಬೇಕು; ಗುಲಾಮಗಿರಿಯ ನೊಗ ಕೆಳಕ್ಕಿಸಬೇಕು;ನಮ್ಮ ಭೂಮಿಯ ಮೇಲೆ ಸ್ವತಂತ್ರರಾಗಿ ನಾವು ನಡೆಯುವ ಹಾಗಾಗಬೇಕು....
   ....ಅದಕ್ಕೋಸ್ಕರ ಕಯ್ಯೂರಿನ ರೈತರು ವಹಿಸಬೇಕಾದ ಪಾತ್ರ....
   "ಸಂಘಟನೆಯೇ ಪ್ರಥಮ ಹೆಜ್ಜೆ. ಮೊದಲು ಕಯ್ಯೂರು ರೈತ ಸಂಘ ಸ್ಥಾಪಿಸಬೇಕು."
   ಹೊಸತಾದುದೇನನ್ನೂ ಮಾಸ್ತರು ಹೇಳಿದಂತೆ ಅಲ್ಲಿದ್ದ ಯಾರಿಗೂ ತೋರಲಿಲ್ಲ. ತಮ್ಮೆಲ್ಲರ ಮನಸ್ಸಿನೊಳಗಿದ್ದ ವಿಚಾರಗಳಿಗೆ ಮಾಸ್ತರು ರೂಪು ಕೊಟ್ಟಹಾಗಿತ್ತು.
    ಆ ಮಾರು ಮುಗಿದಾಗ ಅಪ್ಪುವಿನ ತಂದೆ ಕೇಳಿದ:
    "ಯಾವಾಗ ಶುರು  ಮಾಡೋಣ? ಯಾವಾಗಲೂ ಇದೇ ರೀತಿ ರಾತ್ರೆ ಹೊತ್ತು ನಾವು ಸೇರ್ರ್ತಿರ್ರ್ಬೇಕೇನು?"
    "ಎನೂ ಬೇಕಾಗಿಲ್ಲ. ಬಹಿರಂಗವಾಗಿಯೇ ಸಬೆ ನಡೆದು ಸಂಘ ಸ್ಥಾಪನೆಯಾಗಲಿ" ಎಂದರು ಮಾಸ್ತರು.
    ಚಿರುಕಂಡನ ತಂದೆ ಮೊದಲೇ ಗೊತ್ತಾಗಿದ್ದಂತೆ, ಕೃಷ್ಣನ್ ನಾಯರ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಕರ್ತವ್ಯವೇನೆಂಬುದನ್ನು ಸೂಚಿಸಿದ. ನಾಯರ್ ಈ ವರ್ಷವೂ ಜಮೀನ್ದಾರರಿಂದ ಸಾಲ ಪಡೆಯದ ಹಾಗೆ, ಆತನಿಗೆ ಧಾನ್ಯದ ವಂತಿಗೆ ಕೊಟ್ಟು ಎಲ್ಲರೂ ನೆರವಾಗಬೇಕೆಂಬ ಸಲಹೆ ಸರ್ವಮಾನ್ಯವಾಯಿತು.
     ಅದಾದ ಮರುದಿನವೇ ನಂಬಿಯಾರರು ಶಾಲೆಯತ್ತ ಬಂದು, ಕೈಯಲ್ಲಿದ್ದ 'ಮಾತೃಭೂಮಿ' ಪತ್ರಿಕೆಯನ್ನಾಡಿಸುತ್ತ ಕಠೋರ ಸ್ವರದಲ್ಲಿ ಹೇಳಿದರು:
      "ನೋಡಿದಿರಾ ಮಾಸ್ತರೆ? ತಳಿಪರಂಬದ ಹತ್ತಿರ ರೈತ ಸಮ್ಮೇಳನವಾಯ್ತಂತ! ಓದಿದಿರೋ ಇಲ್ವೋ? ಸಾಮ್ರಾಜ್ಯಶಾಹಿಯೂ ನಾಶವಾಗ್ಬೇಕು; ಜಮೀನ್ದಾರಿ ಶಾಹಿಯೂ ನಾಶವಾಗ್ಬೇಕೊಂತ ಅಲ್ಲಿ ಕೂಗಾಡಿದರಂತೆ. ನಿಜ ಹೇಳಿ ಮಾಸ್ತರೆ,