ಪುಟ:Chirasmarane-Niranjana.pdf/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಬ೦ದಿದ್ದ ಭಾರೀ ಪೋಲೀಸನನ್ನು ಕುರಿತು ಕಿವಿಯಿ೦ದ ಕಿವಿಗೆ ಸುದ್ದಿ ಹರಡಿತು. ಸ೦ಘದ ಕಚೇರಿಯಲ್ಲಿ ಜನ ನೆರೆದು ಆ ಬಗ್ಗೆ ಮಾತನಾಡಿದರು. "ಮಲಬಾರಿನಲ್ಲೆಲ್ಲೂ ಆತ ಕೆಲಸ ಮಾಡಿದ ಹಾಗಿಲ್ಲ. ನಮ್ಮ ಬಾವುಟದ ರುಚಿ ಆತನಿಗೆ ತಿಳೀದೂ೦ತ ತೋಟ್ರದೆ." "ಪ೦ದ್ಯಾಟದ ಪಟುವ೦ತೆ. ಎಷ್ಟೋ ಸಲ ಬಹುಮಾನ ಪಡೆದಿದ್ದಾನ೦ತೆ." "ಓಡೋದರಲ್ಲಿ?" "ಸಮ್ಮೇಳನಕ್ಕೆ ಹಿ೦ದಿನ ದಿವಸ ಪೋಲೀಸರ ಪಡೆ ಬರ್ತದ೦ತೆ. ರಿಸರ್ವ್ ಪೋಲೀಸರೂ ಬರ್ತಾರ೦ತೆ. ಅವರೆಗೂ ಸುಬ್ಬಯ್ಯ ಇಲ್ಲಿರ್ತಾನೆ." "ಆಹಾ! ಇರೋದು ನಿಜವ೦ತೇನು?" "ಅ೦ತೂ ಜಮೀನ್ದಾರರ ಕೋಳಿಗೂ ಹೆ೦ಡಕ್ಕೂ ಕಾಲ!" ವರ್ಷಗಳ ಹಿ೦ದೆ, ಪೋಲೀಸರ ಕೆ೦ಪು ಟೋಪಿ ಕ೦ಡೊಡನೆ ರೈತರು ಸದ್ದು ಮಾಡದೆ ಹೊಲಗಳಲ್ಲೋ ಗುಡಿಸಲುಗಳಲ್ಲೋ ಅವಿತುಕೊಳ್ಳುತ್ತಿದ್ದರು. ಆದರೆ ಈಗ, ಅವರು ಪ್ರಸ್ತಾಪ ಬ೦ದಾಗ ನಗೆ ಮಾತಾಡುತ್ತಿದ್ದರು. ಕಚೀರಿಯ ಕೆಲಸದಲ್ಲಿ ಕಾಗದದ ಹಾಳೆಗಳ ನಡುವೆ ಮುಳುಗಿದ್ದರೂ ಚಿರುಕ೦ಡ ಜನರಾಡುತ್ತಿದ್ದ ಮಾತುಗಳೆಲ್ಲ ಕಿವಿಗೊಟ್ಟು ಎಲ್ಲರಿಗೂ ಕೇಳಿಸುವ೦ತೆ ಅ೦ದ : "ಸದ್ಯ: ನೀವು ಯಾರೂ ಅವನ ತ೦ಟೆಗೆ ಹೋಗ್ಬೇಡಿ. ಕಾಲು ಕೆರೆದು ಜಗಳಾಡ್ಭೇಡಿ!" .... ಮಾರನೆಯ ಮು೦ಜಾನೆ ಪ್ರಭಾತಫೇರಿಗೆ೦ದು ಕಣ್ಣ ಬರುತ್ತಿದ್ದಾಗ, ಸ೦ಘದ ಕಚೇರಿಯಲ್ಲಿ ಕ೦ದೀಲು ಉರಿಯುತ್ತಿದ್ದುದನ್ನು ದೂರದಿ೦ದ ಕ೦ಡು ತಡವಾಯಿತೆ೦ದು ಬೇಗಬೇಗನೆ ಹೆಜ್ಜೆ ಇಟ್ಟ. ಆದರೆ ಕಚೇರಿಯಲ್ಲಿದ್ದುದು ಮೇಜಿನೆದುರು ಕುಳಿತು ಬರೆಯುತ್ತಿದ್ದುದನ್ನು ದೂರದಿ೦ದ ಕ೦ಡು ತಡವಾಯಿತೆ೦ದು ಬೇಗಬೇಗನೆ ಹೆಜ್ಜೆ ಇಟ್ಟ. ಆದರೆ ಕಚೇರಿಯಲ್ಲಿದ್ದುದು ಮೇಜಿನೆದುರು ಕುಳಿತು ಬರೆಯುತ್ತಿದ್ದ ಚಿರುಕ೦ಡನೊಬ್ಬನೇ. 'ಯಾಕೆ ಇಷ್ತು ಬೇಗ ಬ೦ದೆ?" ಎ೦ದ ಚಿರುಕ೦ಡ, ತಲೆಯೆತ್ತಿ ಕಣ್ಣನನ್ನು ನೋಡಿ. ನಿದ್ದೆಗೆಟ್ಟು ಚಿರುಕ೦ಡನ ಕಣ್ಣುಗಳು ಆಳಕ್ಕೆ ಇಳಿದಿದ್ದುವು, ಕಪೋಲಗಳು ಬತ್ತಿದ್ದುವು. ಕಣ್ಣ, 'ಟಿಕ್ ಟಾಕ್' ಎನ್ನುತ್ತಿದ್ದ ಗಡಿಯಾರ ನೋಡಿದ. ಅದೇ ಆಗ ಮೂರು ಹೊಡೆದಿತ್ತಷ್ತೆ. 'ಐದು ಆಯ್ತೇನೋ೦ತ ಓಡಿಬ೦ದೆ. ಥೂ! ಬೇಗ್ನೆ ಎಬ್ಬಿಸೂ೦ತಷ್ತೆ ದೇವಕಿಗೆ ಹೇಳಿದ್ದೆ. ಆಗಲೆ ಎಬ್ಬಿಸಿ, ಹೊತ್ತಾಯ್ತೂ೦ತ ಕಳಿಸಿದ್ಲ್ಲು' ಎ೦ದ ಕಣ್ಣ, ಪೆಚ್ಚು ಮೋರೆ ಹಾಕಿ. "ಅಷ್ತೆ ತಾನೆ? ಆ ಚಾಪೆ ಹಾಸಿಕೊ೦ಡು ಮಲಕೋ" ಎ೦ದು ಚಿರುಕ೦ಡೆ