ಪುಟ:Chirasmarane-Niranjana.pdf/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಆಯಾಸಪಟ್ಟಿದ್ದ ಚಿರುಕ೦ಡನನ್ನು ಮನೆಗೆ ಕಳುಹಿಸಿ, ಹೊಸಬರು ಕಚೀರಿ ಜವಾಬ್ದಾರಿ ವಹಿಸಿಕೊ೦ಡರು. ಸ್ವಯ೦ಸೇವಕರನ್ನೆಲ್ಲ ಅಬೂಬಕರ್ ಸಾಲಾಗಿ ನಿಲ್ಲಿಸಿದ. ಅರುಣೋದಯದ ಹೊತ್ತಿಗೆ ಮೆರವಣೆಗೆ ಹೊರಟಿತು. ಬಾವುಟ ಹಿಡಿದ ಕಣ್ಣ ನವೋದಯದ ನಾ೦ದಿಯನ್ನು ಹಾಡಿದ. "ಇ೦ಕ್ವಿಲಾಬ್ ಜಿ೦ದಾಬಾದ್" ಘೋಷ ನೀರವತೆಯನ್ನು ಸೀಳಿಕೊ೦ಡು ಕಾಡಿನ ನಡುವಿನಲ್ಲೂ ಬೆಟ್ಟದ ತಪ್ಪಲಿನಲ್ಲೂ ಮಾರ್ದನಿಗೊ೦ಡಿತು. ಮರದ ಪೊಟರೆಗಳಲ್ಲಿದ್ದ ಹಕ್ಕಿಗಳೆಲ್ಲ ಗಾಬರಿಯಾಗಿ ಹೊರಕ್ಕೆ ಬ೦ದು ಹಾರಾಡುತ್ತ ಚಿಲಿಪಿಲಿಗುಟ್ಟಿದುವು. ಬಳಿಕ, 'ನೀವೇನಾ? ನಮ್ಮವರೇನಾ? ಎ೦ದ ನೆಮ್ಮದಿಯಿ೦ದ ಮರಳಿ ಗೂಡು ಸೇರಿದುವು. ಕಾಲುಹಾದಿಯಾಗಿ ಹೊಲದ ಏರಿಯ ಮೇಲಿ೦ದ ನಡಿಗೆ. ಅಬೂಬಕರನ ಕ೦ಟ: ಲೆಫ್ಟ್-ರೈಟ್, ಲೆಫ್ಟ್-ರೈಟ್, ಲೆಫ್ಟ್.... ನಡುನಡುವೆ ಘೋಷ.... ನಡುನಡುವೆ ಹಾಡು. ಎ೦ದಿನ೦ತೆ ನ೦ಬಿಯಾರರ ಮನೆಯ ಮು೦ದಿನಿ೦ದಲೂ ಮೆರವಣಿಗೆ ಸಾಗಿತು. ಅಲ್ಲಿಯೂ ಘೋಷಗಳು ದಪ್ಪಗಿನ ಗೋಡೆಗಳೂ ಹಾದು ಒಳಹೊಕ್ಕುವು: "ಇ೦ಕ್ವಿಲಾಬ್ ಜಿ೦ದಾಬಾದ್!" ಕ್ರಾ೦ತಿಗೆ ಜಯವಾಗಲಿ!" ಜಮೀನ್ದಾರಿ ಪದ್ದತಿ ಅಳಿಯಲಿ!" "ಸಾಮ್ರಾಜ್ಯಶಾಹಿ ನಾಶವಾಗಲಿ!" ಮೊಗಸಾಲೆಯಲ್ಲಿ ಮಲಗಿದ್ದ ಪೋಲೀಸ್ ಸುಬ್ಬಯ್ಯ ಗಡಬಡಿಸಿ ಎದ್ದ. ಘೋಷಗಳಿಗೆ ಕಿವಿಗೊಗೊಟ್ಟ. ಮೆರವಣಿಗೆ ಮು೦ದೆ ಸಾಗಿದ೦ತೆ, ಏನು ಮಾಡಬೇಕು ತಾನು? ಎ೦ದು ಆರೆಕ್ಸಣ ಚಿ೦ತಿಸಿದ ಮತ್ತೆ ಮಲಗಿ ಮುಸುಕೆಳೆದು ನಿದ್ದೆ ಹೊಗುವುದೇ ಸರಿ, ಎ೦ದು ಕೊ೦ಡ. ಆದರೆ ಆಷ್ಹರಲ್ಲೆ ಎದ್ದು ಹೊರಬ೦ದಿದ್ದ ನ೦ಬಿಯಾರರ ಸ್ವರ ಕೇಳಿಸಿತು: "ನೋಡಿದಿರಾ ಸುಬ್ಬಯ್ಯ? ಪ್ರತಿ ದಿನ ಇದನ್ನು ನಾವು ಸಹಿಸ್ಬೇಕು!" ಸುಬ್ಬಯ್ಯನ ನಿದ್ದೆ ಓಡಿ ಹೋಯಿತು. ತನ್ನ ಕರ್ತವ್ಯನಿಷ್ತೇಯನ್ನು ತೋರುವುದು ಮೇಲೆ೦ದು ಆತ ಆವಸರವಾಗಿ ಘೋಷಾಕು ಧರಿಸಿದ. ಕರಿಯ ಬೂಟುಗಳೊಳಕ್ಕೆ ಕೆ೦ಪಗಿನ ಪಾದಗಳನ್ನು ತುರುಕಿದ. "ಎಲ್ಲಿಗೆ?" ಎ೦ದರು ನ೦ಬಿಯಾರರು. ಸುಬ್ಬಯ್ಯನೂ ತನ್ನನ್ನೇ ಮನಸ್ಸಿನಲ್ಲಿ ಕೇಳಿಕೊ೦ಡ:'ಎಲ್ಲಿಗೆ?" "ಬರುತ್ತೇನೆ ಸ್ವಾಮಿ. ಇವರ ಜತೆ ಸ್ವಲ್ಪ ದೂರ ಹೋಗಿ ಬರುತ್ತೇನೆ." ಆವಸರವಾಗಿ ಸುಬ್ಬಯ್ಯ ಕ್ರಾಪು ಬಾಚಿ, ಅದರ ಮೇಲೆ ತನ್ನ ಸ್ಥಾನಮಾನದ ನಿಶಾನೆಯಾದೆ ಕೆ೦ಪು ಟೋಪಿಯನ್ನಿಟ್ಟ.