ಪುಟ:Chirasmarane-Niranjana.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯೭ ಚಿರಸ್ಮರಣೆ  "ನಮ್ಮ ಇಬ್ಬರು ಆಳುಗಳನ್ನು ಕರಕೊಂಡು ಹೋಗ್ತೀರೇನು?" ಎಂದರು

ನಂಬಿಯಾರರು. ತಮ್ಮ ಮಾತಿನಲ್ಲಿ ವ್ಯಂಗ್ಯವಿತ್ತೇ ಇಲ್ಲವೇ ಎನ್ನುವುದನ್ನು ಅವರೇ 

ಹೇಳಲಾರದ ಸ್ಥಿತಿಯಲ್ಲಿದ್ದರು.

"ಬೇಡ! ಯಾಕೆ? ಸುಮ್ಮನೆ ಹೋಗ್ಬರ್ತೆನೆ. ಸರಕಾರ ಬದುಕಿದೆ ಅನ್ನೋದು
ಅವರಿಗೆ ಗೊತ್ತಾಗಲಿ!" 

"ಆಗಲಪ್ಪ, ಹೋಗ್ಬನ್ನಿ."

ಸುಬ್ಬಯ್ಯ ಹೊರಕ್ಕಿಳಿದು ಮೆರವಣಿಗೆಯ ಬೆನ್ನು ಹಿಡಿಯಲೆಂದು ವೇಗವಾಗಿ
ನಡೆದ.ಸೊಂಟದಲ್ಲೊಂದು ಕೈಪಿಸ್ತೂಲು ಇದ್ದಿದ್ದರೆ ನೋಡಲು ಎಷ್ಟು

ಚೆನ್ನಗಿರುತ್ತಿತ್ತು-ಎನಿಸಿತು ಸುಬ್ಬಯ್ಯನಿಗೆ.ಆದರೆ ಪಿಸ್ತೂಲು ಸಿಗಲು ಆತ

ಪೋಲೀಸ್ ಅಧಿಕಾರಿಯಾಗಬೇಕು; ಅಧಿಕಾರಿಯಾಗಲು ಪ್ರಯಾಸ  ಪಡಬೇಕು. 

ಸುಬಯ್ಯ ಅವಸರವಾಗಿ ಮುಖದ ಮೇಲೆ ಕೈಯಾಡಿಸಿ ಮೀಸೆ ತಿರುವಿದ.

ಮುಖಕ್ಕಿಷ್ಟು ನೀರು ಕೂಡ ಹನಿಸಿರಲಿಲ್ಲ;ಕನ್ನಡಿ ನೋಡುವುದೂ ಆಗಿರಲಿಲ್ಲ.

"ಥೂ ನನ್ಮಕ್ಕಳು! ಇವರಮ್ಮನ–!" ಎಂದು ಶಪಿಸಿದ.

ಪೋಲೀಸರವನ್ನು ಹಿಂಬಾಲಿಸಿ ಬರುತ್ತಿದ್ದಾನೆಂದು ಮೆರವಣಿಗೆಯ ಉದ್ದಕ್ಕೂ ಸುದ್ದಿ ಹೋಯಿತು. ಎಲ್ಲರೂ ಕತ್ತು ತಿರುಗಿಸಿ ನೋಡಿದರು.
"ನೇರಕ್ಕೆ ನೋಡಿ!" ಎಂದು ಅಬೂಬಕರ್ ಅನುಜ್ಞೆ ಇತ್ತು ತಾನೇ
"ಇಂಕ್ವಿಲಾಬ್!"ಎಂದ. "ಜಿಂದಾಬಾದ್!"ಎಂದು ಅಲ್ಲಿದ್ದ ನಾಲ್ಪತೈದು ಜನರು
ಒಂದಾಗಿ ಉತ್ತರವಿತ್ತರು.ಈಗ ಘೋಷಗಳು ಮತ್ತಷ್ಟು ಗಟ್ಟಿಯಾಗಿ ಹೊರಟುವು.

ಒಬ್ಬ ಪಿಸುಗುಟ್ಟಿದ: "ಮುಂದೆ ಕೆಂಪು ಬಾವುಟ,ಹಿಂದೆ ಕೆಂಪು ಟೋಪಿ." ಅದು ಕೇಳಿಸಿದವನು ಕಿಸಕ್ಕನೆ ನಕ್ಕ. ಸ್ವಯಂಸೇವಕರ ಶಿಸ್ತು ಸಮವಸ್ತ್ರಗಳನ್ನು ಕಂಡಂತೂ ಸುಬ್ಬಯ್ಯನ ಮೈ

ಉರಿಯಿತು. ಆ ಮೆರವಣಿಗೆಯ ಬಾಲವಾಗಿ ತಾನು ನಡೆಯುವುದು ಹೇಸಿಕೆ

ಎನಿಸಿತು. ಹೊಲಗಳು ಬಂದೊಡನೆ ಆತ,ಬೇರೊಂದು ಏರಿಯ ಮೇಲೆ

ಮೆರವಣಿಗೆಗೆ ಸಮಾನಾಂತರವಾಗಿ ನಡೆದ. ಆಗಲಾದರೂ ರಾಜಪ್ರತಿನಿಧಿಯಾದ 

ತನ್ನನ್ನು ಕಂಡು ಆ ರೈತರು ತಣ್ಣಗಾಗಬಹುದು–ಎಂದು ಆತ ಭಾವಿಸಿದ. ಆದರೆ ಈಗಲೂ,ಅವನು ಅಪೇಕ್ಷಿಸಿದ ಯಾವ ಪರಿಣಾಮವು ಆಗಲಿಲ್ಲ.ಬದಲು "ಪೋಲೀಸ್ ದಬ್ಬಾಳಿಕೆಗೆ ಧಿಕ್ಕಾರ!"ಎಂಬ ಹೊಸ ಘೋಷವನ್ನು ಸ್ವಯಂಸೇವಕರು ಕೂಗಿದರು.