ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಚಿರಸ್ಮರಣೆ ೨೨೫
ತಮ್ಮೆಡೆಗೆ ಬರುತ್ತಿದ್ದ ಇಬ್ಬರು ಬಾಂಧ್ಹವರನ್ನು ನೋಡಿದರು. ಅಪ್ಪು ಮತ್ತು
ಅಬೂಬಕರ್ ಇಬ್ಬರೊ ಜೇವಂತರಾಗಿರುವರೆಂಬು ಅವರ ಸಮಾಧಾನದೊಡನೆ,
ಇಲ್ಲಿಗೆ ತಮ್ಮ ಅಸಹಾಯಕತೆಯ ಚಿತ್ರ ಪೊರ್ಣವಾಯಿತು ಎಂಬ ತೀವ್ರ
ಅಸಮಾಧಾನ ಬೆರೆಯಿತು. ಎಲ್ಲರನ್ನೊ ನೋಡುತ್ತಾ,ಆ ಗುಂಪಿನಲ್ಲಿ
ತಂದೆಯನ್ನರಸುತ್ತಿದ್ದ ಅಪ್ಪುವಿನ ಕಣ್ನುಗಳು ಮೊದಲು ಕಂಡುದು ಮಾಸ್ತರನ್ನು-
ಎಂದಿನಂತೆಯೇ ಶಾಂತವಾದ ಮುಖಮುದ್ರೆ; ನೋವು ತುಂಬಿದ್ದರೊ
ಆತ್ಮೀಯತೆಯನ್ನು ಸೊಸುತ್ತಿದ್ದ ನೋಟ.ಅವರು ಪಕ್ಕದಲ್ಲಿ ಚಿರುಕಂಡನಿದ್ದ.
ಶುಭ್ರವಾಗಿದ್ದ ಉಡುಗೆ ಮಲಿನವಾಗಿತ್ತು;ಅದರೆ ನಿಲುವಿನ ಗಾಂಭೀ ಕ್ಕೆ ಚ್ಯುತಿ
ಬಂದಿರಲಿಲ್ಲ- ಎಳ್ಳಿನಪ್ಪು. ಸುತ್ತಮುತ್ತಲೆಲ್ಲ ಇದ್ದ ಓಂದೊಂದು ಮುಖ,
ಸಂಕಟವಾಗಿ ಮಾರ್ಪಟ್ಟಿದ್ದ ಕ್ರೋಧ, ಒಡೆದು ತೋರುತ್ತಿದ್ದ ಕಾತರ.....
ಅವರೆಲ್ಲರ ಪರವಾಗಿಯೇ ಎಂಬಂತೆ ಮಾಸ್ತರು ಮೃದುಧ್ವನಿಯಲ್ಲಿ ಕರೆದರು:
"ಬಾ ಅಪ್ಪು, ಬಾ ಅಬೂಬಕರ್, ಬನ್ನಿ."
ಕೊಡುದೊಡ್ಡಿಯ ಬಾಗಿಲು ಮುಚ್ಚಿಕೊಂಡಿತು, ಬೀಗ ಬಿತ್ತು.
ಒಳಗಿದ್ದವರೆಲ್ಲ, ಬಂದ ಇಬ್ಬರ ಸುತ್ತಲೂ ನೆರೆದರು. ಎಲ್ಲರಿಗೊ ಕಯ್ಯೊರಿನ
ವಾರ್ತೆ ಕೇಳುವ ಅತುರ,ಅಪ್ಪು ಭಾವೋದ್ವೇಗದಿಂದ ಮಾತನಾಡಲಾರದೆ ಹೋದ.
ಕಂಥದ ನರಗಳು ಬಿಗಿದುಬಂದವು. ಅಲ್ಲೆ, ಮೂಲೆಯಲ್ಲಿ, ಎಲ್ಲರಿಗಿಂತ ಹಿಂದೆ,
ಅಪ್ಪುವಿನ ತಂದೆ ನಿಂತಿದ್ದ.ನಿಶ್ಚಲವಾದ ನಿರ್ಮಿಕಾರವಾದ ಅವನ ದೃಷ್ಟಿ ಮಗನನ್ನೇ
ನೋಡಿತು.
ಒಬ್ಬೋಬ್ಬರಾಗಿ ಅವರೆಲ್ಲ ಕುಳಿತುಕೊಂಡರು.ಆ ನೀರವತೆಯನ್ನು ಭೇದಿಸಿ
ಎಳೆಯ ಕುಟ್ಟಿಕೃಷ್ಣ ಬಿಕ್ಕುತ್ತ ಅತ್ತ. "ಅಳಬೇಡ" ಎಂದರು ,ಹುಡುಗನ
ಬದಿಯಲ್ಲಿದ್ದವರು ಯಾರೋ.
ನಿಧಾನವಾಗಿ ಸುಧಾರಿಸಿಕೊಂಡು ಅಪ್ಪು ಉರಿಯುತ್ತಿದ್ದ ಕಯ್ಯೂರಿನ ಕರುಣ
ಕಥೆಯನ್ನು ಹೇಳಿದ. ಅಲ್ಲಿ ಇಲ್ಲಿ ಅಬೂಬಕರ್ ತಾನೂ ಒಂದೆರಡು ಮಾತು
ಸೇರಿಸಿ, "ಅದು ಹೀಗೆ" ಎಂದು ಸೃಷ್ಟೀಕರಿಸಿದ. ತಂಡತಂಡವಾಗಿ ಬೇರೆಬೇರೆ
ದಿನಗಳಲ್ಲಿ ಬಂದಿದ್ದ ಕೈದಿಗಳಿಂದ ಹೆಚ್ಚಿನ ವಿಷಯವೆಲ್ಲ ಅಗಲೆ ಎಲ್ಲರಿಗೊ
ತಿಳಿದಿತ್ತು. ಅಪ್ಪುವಿನ ಮಾತಿಗೆ ಕಿವಿಗೊಟ್ಟು 'ಅದೆಲ್ಲ ನಿಜ' ಎಂಬ ಅರಿವನ್ನು
ಅವರು ಮತ್ತೊಮ್ಮೆ ಮಾಡಿಕೊಂಡರು.
"ಈಗಲಾದರೊ ತೃಪ್ತಿಯಾಯಿತಂತೇನು ನಾಯಿಗಳಿಗೆ?" ಎಂದನು ಯಾರೋ
ಒಬ್ಬ ಕಟುಧ್ವನಿಯಲ್ಲಿ.
15