ಪುಟ:Chirasmarane-Niranjana.pdf/೨೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ಈಸಾಡುತ್ತ, ಕೈದಿಗಳಿಗೆ ಹೃದಯ ಹಗುರವೆನಿಸಿತು.

   ಅಷ್ಟರಲ್ಲೆ ಆಜ್ಞೆ ಬಂತು:

"ಏಳಿರನ್ನು! ಏಳಿರಿ! ರೈಲಿಗೆ ತಡವಾಗ್ತದೆ!" .....ಮೂರನೇ ದರ್ಜೆಯ ಡಬ್ಬವೊಂದನ್ನು ತೆರವು ಮಾಡಿಸಿ ಕೈದಿಗಳನ್ನು ಅದರಲ್ಲಿ ತುಂಬಿದರು. ಕಟ್ಟಿಹಾಕಿದ್ದ ಅರವತ್ತು ಜನರಿಗೆ ಕಾವಲಾಗಿ, ಹಿರಿದ ಬಂದೂಕಿನ ನಾಲ್ವತ್ತು ಜನ ಪೋಲೀಸರೂ ಜತೆಯಲ್ಲಿ ಪ್ರಮಾಣ ಮಾಡಿದರು.

  ಆ ಗಾಡಿಯಿಂದ ಅಲ್ಲಿ ಇಳಿದ ಪ್ರಯಾಣಿಕರು, ಊರಿನವರು ಗುಂಪುಗುಂಪಾಗಿ ನಿಲ್ದಾಣದಲ್ಲಿ ನಿಂತರು.ಗೂಢಚಾರರು ಅವರ ನಡುವೆ ಸುಳಿದರು.'ಕಯ್ಯೂರು',ಕಯ್ಯೂರು' ಎಂಬ ಪಿಸುದನಿ ಗಾಳಿಯೊಡನೆ ನಿಲ್ದಾಣದ ಉದ್ದಗಲಕ್ಕೂ ಸಂಚಾರಮಾಡಿತು.ಮುಖಗಳ ಮೇಲೆ ಯಾವ ಭಾವನೆಯನ್ನೂ ತೋರಗೊಡದೆ ಜನ ಅಲ್ಲೇ ನಿಂತರು.
   ಅವರನ್ನೆಲ್ಲ ದಿಟ್ಟಿಸಿ ನೋಡಿದರು ಮಾಸ್ತರು ಮತ್ತು ಚಿರುಕಂಡ. ಮಾಸ್ತರಿಗೆ ಪರಿಚಯವಿದ್ದವರೂ ಅಲ್ಲಿದ್ದರು.ಆದರೆ ಪರಸ್ಪರ ಮಾತಿಗೆ- ಕಣ್ಣಿನ ಸಂಜ್ಞೆಗೆ ಕೂಡ- ಅಲ್ಲಿ ಅವಕಾಶವಿರಲಿಲ್ಲ.
  ಗಾಡಿ ಉತ್ತರಕ್ಕೆ ಚಲಿಸಿತು. ಪ್ರತಿ ಕ್ಷಣಕ್ಕೂ ಮತ್ತಷ್ಟು ದೂರವಾಯಿತು ಕಯ್ಯೂರು.ಒಂದೇ ರೀತಿಯ ಬೇಸರ ಎಲ್ಲರನ್ನೂ ಅವರಿಸಿ ಹಿಂಸೆ ಕೊಟ್ಟಿತು.ಬಿಸಿಲಿಗೆ ಬೆವರಿದ ಮೃಗಳು ಗಾಳಿಗೆ ಸೋತು, ಅವರಿಗೆ ಚೊಂಪು ಹತ್ತಿತು.ಪೋಲೀಸರನ್ನೂ ಬಾಧಿಸಿತು ತೂಕಡಿಕೆ,
  ಕಾಸರಗೋಡು ನಿಲ್ದಾಣ....ಮತ್ತೆ ಎಚ್ಚರ...

"ಮುಂದಕ್ಕಂತೂ ಮಲೆಯಾಳ ತೀರಾ ಕಡಿಮೆ" ಎಂದರು ಮಾಸ್ತರು. ಅಧಿಕಾರಿ ಬೇರೆ ವರ್ಗದಲ್ಲಿ ಸಂಚಾರ ಮಾಡುತ್ತಿದ್ದುದರಿಂದ ಧೈರ್ಯಗೊಂಡ ಪೋಲೀಸನೊಬ್ಬ ಪತ್ರಿಕೆ ಕೊಂಡು ಓದತೊಡಗಿದ.ಕೈದಿಗಳ ಕಣ್ಣುಗಳೆಲ್ಲ ಆ ಪತ್ರಿಕೆಯ ಮೇಲೆಯೇ ನೆಟ್ಟುವು.

  "ಎಲ್ಲ ಪತ್ರಿಕೆಯೋದೊದರಿಂದಲೇ ಶುರುವಾಯ್ತು ಅಲ್ವ ಚಿರುಕಂಡ?" ಎಂದ ಧಾಂಡಿಗ.

ಚಿರುಕಂಡ ಕೊಟ್ಟುದು ಸಣ್ಣ ಮುಗುಳು ನಗೆಯ ಉತ್ತರ ಮಾತ್ರ, ಆದರೆ ಪ್ರಭು ಹೇಳಿದ: "ಮಾಸ್ತರೆ, ಒಮ್ಮೆ ಆ ಪತ್ರಿಕೆ ಕೊಡೀಂತ ಕೇಳಿ, ನಮ್ಮ ವಿಷಯ ಏನಾದರೂ ಇದ್ದೀತು."