ಪುಟ:Chirasmarane-Niranjana.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೪ ಚಿರಸ್ಮರಣೆ

ಕರ್ತವ್ಯ ತಾನು ಮಾಡಬೇಕೆಂದು ಅಂದಳು:

  “ಅಪ್ಪ ಏನಂದ್ರು ನಿಮಗೆ ? ಬಿಸಿಲಲ್ಲಿ ಎಲ್ಲಿಗೂ ಹೋಗ್ಬೇಡಿ. ಮನೇಲಿ 

ಮಲಕ್ಕೊಳ್ಳಿ,ಅ೦ತಲ್ವ ಹೇಳಿದ್ದು?"

  "ಹೋಗಲಿ ಬಿಡಮ್ಮ. ಹಗಲು ಹೊತ್ತು ಯಾರು ಮಲಕೊಳ್ತಾರೆ? ರಾತ್ರೆ 

ನಿದ್ದೆ ಬರಬೇಕೋ ಬೇಡ್ವೋ?"

  "ಏನು ಬೇಕಾದರೂ ಮಾಡು.ಅವರ ಕೈಲಿ ಬೈಗಳು ಕೇಳೋದು, ಪೆಟ್ಟು 

ತಿನ್ನೋದು ನೀನು ತಾನೆ?"

  "ಅಲೆಯೋಕೆ ಹೋಗಿದ್ದೆ ಅಂತ ಅಪ್ಪನಿಗೆ ಹೇಳ್ಲೇ ಬೇಡ. ಈಗ್ಲೇ ವಾಪ್ಸು 

ಬ೦ದ್ಬಿಡ್ತೇನೆ."

  "ಹೂಂ ಹೋಗಪ್ಪ." 
  ತಾಯಿ ಹಾಗೆ ಹೇಳುತ್ತಿದ್ದಂತೆಯೇ ಹೊರಗಿನಿಂದ ಅಜ್ಜಿ ಕೇಳಿದಳು: 
  "ಅದೇನು ಕಲಿಸಿಕೊಡ್ತಿದ್ದೀಯೋ ತಾಯಿಗೆ?" 
  ಅಪ್ಪು ನಗುತ್ತ ಹೊರಬಿದ್ದು ಹೇಳಿದ: 
  "ಬೇಗ್ನೆ ಬರ್ತೇನೆ, ಅಜ್ಜಿ. ತ್ರಿಕರಪುರದ ವಿಷಯವೆಲ್ಲ ನೀನು ಹೇಳ್ಬೇಕು." 
  ಅಸಹಾಯಳಾಗಿ ಅಜ್ಜಿ, ಹೊತ್ತು ಕಳೆಯಲು ಉಳಿದಿದ್ದ ಕುಟ್ಟಿಯೊಬ್ಬನೇ 

ಗತಿಯೆಂದು ಆತನನ್ನು ತನ್ನೆಡೆಗೆ ಎಳೆದುಕೊಂಡಳು...

 ....ಹಾದಿ ಸೇರುವಾಗ ಅಪ್ಪು ಕೇಳಿದ: 
 "ನದಿ ಕಡೆ ಹೋಗೋಣ್ವೇನೋ?" 
 ತಾಯಿ-ತಂದೆ ಹೋಗಬಾರದು ಎಂದಿದ್ದರೂ ಆತನ ಮನಸ್ಸು ಆ ಕಡೆಗೇ 

ಹರಿಯುತ್ತಿತು. ಆದರೆ ಚಿರುಕಂಡ ಯಾವ ಉತ್ಸಾಹವನ್ನೂ ತೋರದೆ ಹೇಳಿದ:

 "ಬೇಡ ಅಪ್ಪು ತುಂಬಾ ಬೇಜಾರಾಗಿದೆ, ಇಲ್ಲೇ ಸ್ವಲ್ಪ ಹೊತ್ತು ಕೂತ್ಕೊ೦ಡು 

ಮಾತಾಡೋಣ."

  ತನ್ನ ಸ್ನೇಹಿತನಿಗೆ ಏನೋ ಆಗಿದೆ ಎ೦ದು ಅಪ್ಪು ಶ೦ಕಿಸಿದ. ಇ೦ಥದೇ ಎ೦ದು

ಊಹಿಸುವುದು ಅವನಿಂದಾಗಲಿಲ್ಲ. ಮನಸ್ಸು ಹೊಸ ವಿಚಾರಗಳಿಂದ ಒಪ್ಪಗೊಂಡಿದ್ದಾಗ ಉತ್ಸಾಹದಿಂದಿರಬೇಕೇ ಹೊರತು, ಸಪ್ಪಗಿರುವುದು ಸರಿಯಲ್ಲವೆಂದಿತು ಆತನ ಒಳದನಿ. ಚಿರುಕಂಡನನ್ನು ಬಾಧಿಸುವಂಥದು ಅದೇನಿರಬಹುದೋ ಎ೦ದು ಆತನಿಗೆ ಚಿ೦ತೆಯಾಯಿತು.

  ಇಬ್ಬರೂ ಸಮೀಪವೇ ಇದ್ದ ಬೆಟ್ಟದತ್ತ ನಡೆದರು. ಆ ಬೆಟ್ಟದ ಇಳಿಜಾರಿನಲ್ಲಿ 

ಅಲ್ಲೊಂದು ಇಲ್ಲೊಂದರಂತೆ ಗೋಡಂಬಿ ಮರಗಳಿದ್ದುವು. ಆ ಮರಗಳೆಲ್ಲ