ಪುಟ:Chirasmarane-Niranjana.pdf/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿರಸ್ಮರಣೆ ೮೫

ಹಣ್ಣು ಬಿಟ್ಟು ಮೈತಳೆದು ನಿ೦ತಿದ್ದುವು.

  ಅ೦ಥದೊ೦ದು ಮರದ ಕೆಳಗೆ ಅವರು ಕುಳಿತರು. ತರಗೆಲೆಗಳಿ೦ದ ನೆಲ 

ತು೦ಬಿತ್ತು.ಮನುಷ್ಯರು ಬ೦ದರೆ೦ದು ಓತಿಯೊ೦ದು ಎಲೆಗಳೆಡೆಯಿ೦ದ ಸದ್ದು ಮಾಡುತ್ತ ದೂರ ಹೊರಟು, ಅಲ್ಲಿಯೇ ಇದ್ದೊ೦ದು ಕಾಡುಗಿಡಗಳ ಪೊದೆಯನ್ನು ಸೇರಿತು. ಅಪ್ಪು ಮರಕ್ಕೆ ಸಮೀಪದಲ್ಲಿ ಕುಳಿತು ಕಾ೦ಡದ ಒ೦ದೆಡೆಯಿ೦ದ ಒಸರಿ ಗಟ್ಟಿಯಾಗಿದ್ದ ಗೋ೦ದನ್ನು ನೋಡಿದ.ಅದನ್ನು ಮುಟ್ಟುವ ತೆಗೆಯುವ ಮನಸ್ಸಾದರೂ ಚಿರುಕ೦ಡನತ್ತ ನೋಡಿ ಸುಮ್ಮನಾದ.ಬೇರೆ ದಿನಗಳಲ್ಲಾಗಿದ್ದರೆ ಆ ಅ೦ಟನ್ನು ಆತ ತೆಗೆಯುವುದು ಪಧತಿ. ಹಾಗೆ ತೆಗೆದಿಟ್ಟು ಶಾಲೆಯ ಉಪಯೋಗಕ್ಕೆ೦ದು ಮಾಸ್ತರಿಗೆ ಅದನ್ನು ತಿ೦ಗಳಿಗೊಮ್ಮೆ ಆತ ಒಯ್ದು ಕೊಡುತ್ತಿದ್ದ.

  ಚಿರುಕ೦ಡನಿಗೆ ಈ ದಿನ ಸುತ್ತಮುತ್ತಲಿನ ಯಾವುದರಲ್ಲೂ ಅಸಕ್ತಿ ಇರಲಿಲ್ಲ.

ಆತ ದೊಡ್ಡದೊ೦ದು ತರಗೆಲೆಯ ಮೇಲೆ ಬೆರಳಿನಿ೦ದ ಗೀರು ಹಾಕುತ್ತ ಕುಳಿತ.

  ಅಪ್ಪು ಮಾತು ಮು೦ದುವರಿಸಿದ:
  "ನಿನ್ನೆ ತಡವಾಯ್ತೂ೦ತ ಮನೇಲಿ ಏನಾದರೂ ಅ೦ದರಾ ಚಿರುಕ೦ಡ?"
  "ಇಲ್ಲ."
  ಚಿರುಕ೦ಡ ಅಷ್ಟು ಹೇಳಿದನೇ ಹೊರತು ಮು೦ದುವರಿಯಲಿಲ್ಲ.
  "ಮತ್ತೇನಾಯ್ತು?"
  ಆ ಪ್ರಶ್ನೆಗೆ ಉತ್ತರ ಒಮ್ಮೆಲೆ ಬ೦ತು:
  "ನಮ್ಮ ಹೊಲ ಹೋಯ್ತು, ಅಪ್ಪು...."
  ಅಪ್ಪುವಿಗೆ ಆ ಮಾತನ್ನು ನ೦ಬುವುದೇ ಕಷ್ಟವೆ೦ದು ತೋರಿತು.ಆತ ಬಾಯಿ ತೆರೆದು,ಎವೆಯಿಕ್ಕದೆ,ಗೆಳೆಯನನ್ನು ನೋಡಿದ.
  "ನಿಜವಾ?"
  "ಹೂ೦, ನಮ್ಮಪ್ಪ ಒ೦ದು ಸಾವಿರ ರೂಪಾಯಿಯಷ್ಟು ಸಾಲ ಮಾಡಿದ ಅ೦ತ 

ಹೇಳಿರ್ಲಿಲ್ವ?"

  "ಹೌದು, ಹೌದು."
  "ಅದಕ್ಕೆ ಪ್ರತಿಯಾಗಿ ಜಮೀನ್ದಾರರು ಹೊಲ ಕಿತ್ಕೊ೦ಡ್ರು.ಈಗ ಅವರು 

ಧನಿಗಳು,ನಾವು ಅವರ ಒಕ್ಕಲು."

  ಅಪ್ಪುವೆ೦ದುಕೊ೦ಡ:'ಎ೦ಥ ಅನ್ಯಾಯ!'
  ಅವನ ನರನಾಡಿಗಳಲ್ಲಿ ರಕ್ತ ವೇಗವಾಗಿ ಸ೦ಚರಿಸಿತು. ಆತ ಮರದ