ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹಲಸಿನ ಮರಗಳು ದಕ್ಷಿಣ ಕನ್ನಡದಲ್ಲಿ ಸುಮಾರು 1958 ಹೆಕ್ಟೇರ್‌ ವಿಸ್ತಾರದಲ್ಲಿ ಬೆಳೆಯುತ್ತದೆ. ಇದಲ್ಲದೆ ಚಿಕ್ಕು, ಪಪ್ಪಾಯಿಗಳು ಕೂಡಾ ಇಲ್ಲಿ ಬೆಳೆಯುತ್ತವೆ. ಪಪ್ಪಾಯಿ ಗಿಡಗಳನ್ನು ಸುಮಾರು 150 ಹೆಕ್ಟೇರ್‌ಗಳಲ್ಲಿ ಬೆಳೆಸಲಾಗುತ್ತದೆ. ಅಡಕೆಯು ಈ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಇದು ಮುಖ್ಯವಾಗಿ ಜಿಲ್ಲೆಯ ದಕ್ಷಿಣ ಭಾಗದಲ್ಲಿ ಬೆಳೆಯುತ್ತದೆ. ಇಲ್ಲಿನ ಅಡಕೆಯು ದೇಶದ ವಿವಿಧ ಭಾಗಗಳಿಗೆ ಮಾರಾಟವಾಗುತ್ತಿದ್ದು, ಈ ಜಿಲ್ಲೆಯ ಸಂಪತ್ತಿಗೆ ಒ೦ದು ಮುಖ್ಯ ಕಾರಣವಾಗಿದೆ.

ದಕ್ಷಿಣ ಕನ್ನಡದಲ್ಲಿ ಎಲ್ಲ ಕಡೆ ಕಾಣಿಸುವ ಇನ್ನೊ೦ದು ಮರ ಹನೆ ಮರ. ಇದನ್ನು ಮನೆಕಟ್ಟಲು ಮೋಪುಗಳಾಗಿಯೂ ಉಪಯೋಗಿಸುವವರಿದ್ದಾರೆ. ಇದರಿಂದ ಕಳ್ಳನ್ನು ಕೂಡ ತೆಗೆಯುತ್ತಾರೆ. ಇದರಿ೦ದ ಓಲೆ ಬೆಲ್ಲವನ್ನು ತಯಾರಿಸುತ್ತಾರೆ.

ಇಲ್ಲಿನ ತರಕಾರಿಯ ಬೆಳೆಗಳು ವೈವಿಧ್ಯಮಯ. ಅಳಸಂಡೆ, ಕು೦ಬಳ, ಬಸಳೆ, ಬೆಂಡೆ, ಮೆಣಸು, ಹೀರೆ ಹೀಗೆ ಅನೇಕ ಬಗೆಯ ತರಕಾರಿಗಳು ಬೆಳೆಯುತ್ತವೆ. ಮನೆಯ ಬಳಕೆಗಾಗಿ ಸೌತೆ, ಮುಳ್ಳುಸೌತೆ, ಹರಿವೆ, ನುಗ್ಗೆಕಾಯಿ ಮುಂತಾದವನ್ನು ಬೆಳೆಸುತ್ತಾರೆ.

ದೀವಿ ಹಲಸು ದಕ್ಷಿಣ ಕನ್ನಡದಲ್ಲಿ ಬೆಳೆಯುವ ಇನ್ನೊಂದು ಬೆಳೆ. ಸುವರ್ಣಗಡ್ಡೆ, ಮುಂಡಿ ಮತ್ತು ಕೆಸುವಿನ ಗಡ್ಡೆಯನ್ನು ಜಿಲ್ಲೆಯಾದ್ಯ೦ತ ನೀರಿನ ಆಶ್ರಯವಿದ್ದಲ್ಲಿ ಬೆಳೆಸುತ್ತಾರೆ.

ಮೆಣಸನ್ನು ಸು.2400 ಹೆಕ್ಟೇರುಗಳಲ್ಲಿ ಬೆಳೆಸುತ್ತಾರೆ. ಭತ್ತದೊ೦ದಿಗೆ ಇದನ್ನು ಆವರ್ತನ ಬೆಳೆಯಾಗಿಯೂ ಬೆಳೆಯುತ್ತಾರೆ. ಒಳ್ಳೆ ಮೆಣಸನ್ನು ಅಡಿಕೆ ಮತ್ತು ತೆ೦ಗಿನ ತೋಟಗಳಲ್ಲಿ ಬೆಳೆಸುತ್ತಾರೆ. ಸುಳ್ಳ, ಸ೦ಪಾಜೆ, ಬೆಳ್ತ೦ಗಡಿಯ ಘಟ್ಟದ ಇಳಿಜಾರಿನಲ್ಲಿ ತೋಟಗಾರಿಕೆಯ ಬೆಳೆಗಳನ್ನು ಮಾತ್ರ ನೋಡಬಹುದು. ಒಳ್ಳೆ ಮೆಣಸುಗಳಲ್ಲಿ ತಣಿಯೂರು, ಕರಿಮು೦ಡ ಹಾಗೂ ಕಳುವಳ್ಳಿ ಎ೦ಬ ಜಾತಿಗಳಿವೆ. ಶುಂಠಿ, ಕರಿಬೇವು, ಗೇರುಬೀಜ, ಇವು ಇನ್ನೂ ಕೆಲವು ಕೃಷಿ ಉತ್ಪಾದನೆಗಳು. ಗೇರು ನಾಲ್ಕು ನೂರು ವರ್ಷಗಳ ಹಿ೦ದೆ ಪೋರ್ಚುಗೀಸರ ಮೂಲಕ ಬಂದು ಸೇರಿದ ಸಸ್ಕದ ಜಾತಿ. ಮೂರು ನಾಲ್ಕು ವರ್ಷಗಳಲ್ಲಿ ಫಲ ಬಿಟ್ಟು ಅನೇಕ ವರ್ಷ ಫಲ ಕೊಡುತ್ತದೆ.

ಇದರ ಜೊತೆ ಇತ್ತೀಚೆಗೆ ಕ೦ಡು ಬರುವ ಬೆಳೆ ಕೊಕ್ಕೊ. ಇದು ಸುಮಾರು 1282 ಹೆಕ್ಟೇರುಗಳಲ್ಲಿ ವ್ಯಾಪಿಸಿದೆ. ರಬ್ಬರ್‌ ಕೂಡಾ ವಾಣಿಜ್ಮ ಬೆಳೆಯಾಗಿ ಆಕರ್ಷಣೆಗೆ

7