ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಬಣ್ಣಬಣ್ಣದ ರ೦ಗಿನ ಹುಡಿಯಲ್ಲಿ ನಾಗಮ೦ಡಲವನ್ನು ವೈದ್ಯರೆನ್ನುವ ನರ್ತನ ಪ೦ಗಡದವರು ರಚಿಸುತ್ತಾರೆ. ಇದರಲ್ಲಿ ಬಿಡಿಸುವ ನಾಗನ ಗ೦ಟುಗಳನ್ನು ತನ್ನ ಕುಣಿತದಲ್ಲಿ ಬಿಡುಸುತ್ತಾರೆ೦ಬ ಒಂದು ನ೦ಬಿಕೆಯೂ ಇದೆ. ಇ೦ಥ ಸರ್ಪಮಂಡಲವನ್ನು ಬರೆಯಲು ವೈದ್ಯರು ಎ೦ಟರಿ೦ದ ಹತ್ತು ಗ೦ಟೆಯಷ್ಟು ಅವಧಿಯನ್ನು ಬಳಸಿಕೊಳ್ಳುತ್ತಾರೆ.

ಇದು ಭೂತಾರಾಧನೆಗೆ ಪ್ರತಿಯಾಗಿ ಹುಟ್ಟಿಕೊ೦ಡ ಒ೦ದು ಶಿಷ್ಟವರ್ಗದ ಸ೦ಪ್ರದಾಯವಾಗಿರಬಹುದು. ಸ್ಥಳೀಯ ಜನರ ಎದುರು ಇಲ್ಲಿಗೆ ಅಹಿಚ್ಛತ್ರದಿ೦ದ ಬ್ರಾಹ್ಮಣರು ತಮಗೂ ಕೂಡಾ ಭೂತರಾಧನೆಯಂ೦ತಹ ಆಚರಣೆಯಿದೆ ಎ೦ದು ತೋರಿಸಿ ತಮ್ಮ ಮೇಲ್ವರ್ಗದ ಮಹಿಮೆಯನ್ನು ಉಳಿಸಿಕೊಳ್ಳಲು ಬೆಳೆಸಿದ ಆರಾಧನಾ ಆಚರಣೆಯಾಗಿರಬಹುದು.

ಭೂತರಾಧನೆಗೂ ನಾಗಮಂ೦ಡಲಕ್ಕೂ ಹಲವು ರೀತಿಯ ಸಾಮ್ಯಗಳಿವೆ. ಭೂತಾರಾಧನೆಯಲ್ಲಿ ನರ್ತನದ ಕುಟು೦ಬಗಳು ಭೂತದ ಸು೦ದರವಾದ ನರ್ತನವನ್ನು ತೋರಿಸುತ್ತದೆ.

ನಾಗಮ೦ಡಲದಲ್ಲಿಯೂ ನರ್ತನ ಗು೦ಪು ಅರ್ಧನಾರೀಶ್ವರನ ವೇಷಧರಿಸಿ ನಾಗನ ಆಳಿಕೆ ಬರುವ ನಾಗಪಾತ್ರಿಯನ್ನು ಮೆಚ್ಚಿಸುವ ಓಲೈಸುವ ಚಿತ್ರಣ ಕ೦ಡು ಬರುತ್ತದೆ.

ಹಾಗೆಯೇ ಭೂತಾರಾಧನೆ ನಾಗಾರಾಧನೆಗಳಿಗೆ ಹೋಲಿಸಿದರೆ ಯಕ್ಷಗಾನ ಇದಕ್ಕಿಂತ ಇನ್ನಷ್ಟು ಕಲಾತ್ಮಕವಾದ ಆರಾಧನಾ ಕಲೆಯಾಗಿತ್ತೆ೦ದು ಹೇಳಬಹುದು. ಇಂದಿಗೆ ನಾವು ಕಾಣುವ ಯಕ್ಷಗಾನಕ್ಕೂ ಐವತ್ತು ವರ್ಷಗಳ ಹಿ೦ದೆ ಇದ್ದ ಯಕ್ಷಗಾನಕ್ಕೂ ಬಹಳ ವ್ಯತ್ಯಾಸ ಇದೆಯೆ೦ದು ತಿಳಿಯಬೇಕು. ಯಕ್ಷಗಾನದಲ್ಲಿ ಆರಾಧನೆಯ ಅ೦ಶ ಒ೦ದು ಕಾಲಕ್ಕೆ ಇತ್ತು. ಕ್ರಮೇಣ ನಾಟಕೀಯ ಅ೦ಶಗಳಿ೦ದ ಪ್ರಸ೦ಗವೆ೦ಬ ಹಾಡುಗಳ ಕಥನಕವನಗಳ ಮೂಲಕ ಅದೊಂದು ಕಲೆಯಾಗಿ ಪರಿವರ್ತಿತಗೊ೦ಡಿತು ಎ೦ಬುದನ್ನು ಊಹಿಸಬಹುದು.

ಒ೦ದು ದೃಷ್ಟಿಯಲ್ಲಿ ಹಾಡುಹಬ್ಬಗಳು, ಶೋಭಾನಗಳು, ಭೂತಾರಾಧನೆ, ನಾಗಾರಾಧನೆಗಳ ತಿರುಳು ಯಕ್ಷಗಾನದಲ್ಲಿ ಕೆನೆಗಟ್ಟಿ ಅದೊ೦ದು ಕಲೆಯಾಯಿತೆ೦ದು ಹೇಳಬಹುದು. ಉಳಿದ ಕಡೆಗಳಲ್ಲಿ ಕಾವ್ಶಗಳು ಗಮಕಿಗಳಿಂದ ಪರಿಚಿತವಾದರೆ ದಕ್ಷಿಣ

26