ವಿಷಯಕ್ಕೆ ಹೋಗು

ಪುಟ:Dakshina Kannada Mangalore matthu Udupi.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಂಪರ್ಕ ಸಾಧನಗಳ ದೃಷ್ಟಿಯಲ್ಲಿ ಮಂಗಳೂರು ಹಾಸನ ರೈಲ್ವೆಯು ಒಂದು ದೊಡ್ಡ ಸಾಧನೆಯಾಗಿದೆ. ಈ ರೈಲು ದಾರಿಯು ಬೆಂಗಳೂರು ಹಾಗೂ ಕರ್ನಾಟಕದ ಅನೇಕ ಪಟ್ಟಣಗಳನ್ನು ಸಂಪರ್ಕಿಸುತ್ತದೆ.

ವಾಯುಮಾರ್ಗದ ಬಗ್ಗೆ ಯೋಚಿಸಿದರೆ ಮಂಗಳೂರಿನ ಬಜಪೆಯಲ್ಲಿ ಒಂದು ವಿಮಾನ ನಿಲ್ದಾಣವಿದೆ. ಇಲ್ಲಿಂದ ದೇಶ ವಿದೇಶಗಳ ಪ್ರಯಾಣಕ್ಕೆ ಅನುಕೂಲವನ್ನು ಏರ್ಪಡಿಸಲಾಗಿದೆ. ಇದರ ಜತೆಗೆ ಭಾರತ ಸರಕಾರದ ಅಂಚೆ ಇಲಾಖೆ ಎಲ್ಲ ಕಡೆಯಂತೆ ಜಿಲ್ಲೆಯಲ್ಲೂ ಸಮರ್ಪಕವಾಗಿ ಸಂಪರ್ಕವನ್ನು ಏರ್ಪಡಿಸಿದೆ.

ಇದರ ಜೊತೆಗೆ ಮಂಗಳೂರಿನಲ್ಲಿ ಆಕಾಶವಾಣಿ ಕೇಂದ್ರವಿದೆ. ಹೀಗೆ ಸಾಂಪ್ರದಾಯಿಕತೆಯನ್ನು ಉಳಿಸಿಕೊಂಡು ಸಾಂಸ್ಕೃತಿಕವಾಗಿ ತನ್ನ ವೈಶಿಷ್ಟ್ಯವನ್ನು ತೋರಿಸಿಕೊಳ್ಳುತ್ತ ದಕ್ಷಿಣ ಕನ್ನಡ ಜಿಲ್ಲೆಯೂ ಎಲ್ಲ ದೃಷ್ಟಿಯಿಂದಲೂ ಮುಂದುವರಿದಿದೆ.

ಕೊಂಕಣ ರೈಲು

ದೂರಗಾಮಿ ಪರಿಣಾಮವುಳ್ಳ ಕೊಂಕಣರೈಲು ಯೋಜನೆಯು ಪೂರ್ಣಗೊಳ್ಳುವ ಹಂತದಲ್ಲಿದ್ದು, ಇದರಿಂದಾಗಿ ಜಿಲ್ಲೆಯ ಆರ್ಥಿಕತೆ, ಜನ ಜೀವನವು ಬಹಳವಾಗಿ ಪ್ರಭಾವಿತವಾಗಲಿದೆ. ಮಂಗಳೂರು ಮುಂಬಯಿಗಳೊಳಗಿನ ದೂರವನ್ನು ಸುಮಾರು ಹದಿನೈದು ಗಂಟೆಗಳಿಗೆ ಸೀಮಿತಗೊಳಿಸುವ ಈ ರೈಲು ಮಾರ್ಗವು ಕರಾವಳಿಯ ಉದ್ದಕ್ಕೂ ಮತ್ತು ದೇಶದ ಇತರ ಭಾಗಗಳಿಗೂ ಸಂಚಾರ ಅವಕಾಶಗಳನ್ನು ಬಳಪಡಿಸಲಿದೆ. ರಸ್ತೆ ಸಾರಿಗೆಯ ಮೇಲಿನ ಒತ್ತಡವೂ ಇದರಿಂದ ಕಡಿಮೆ ಆಗಲಿದ್ದು ಉದ್ಯಮ ಉದ್ಯೋಗಗಳ ಅಭಿವೃದ್ಧಿಗೆ ಪೋಷಕವಾಗಲಿದೆ.

ಯಕ್ಷಗಾನ

ಈ ಪ್ರದೇಶಕ್ಕೆ ಸಾಂಸ್ಕೃತಿಕ ವೈಶಿಷ್ಟ್ಯವನ್ನಿತ್ತ ಒಂದು ಮುಖ್ಯ ಸಂಗತಿ ಎಂದರೆ ಯಕ್ಷಗಾನ. ಭಾರತದ ಅತ್ಯಂತ ಜೀವಂತ ಸಾಂಪ್ರದಾಯಿಕ ರಂಗಭೂಮಿಯಾದ ಯಕ್ಷಗಾನ ಇಂದು ವಿಶ್ವಮಾನ್ಯತೆ ಗಳಿಸಿದೆ. ಕರಾವಳಿಯ ಜನಜೀವನದಲ್ಲಿ ಹಾಸುಹೊಕ್ಕಾಗಿ ನಿತ್ಯ ಜೀವನದ ಒಂದು ಭಾಗವಾಗಿರುವ ಯಕ್ಷಗಾನಶತಮಾನಗಳಿಂದ ರಂಜನೆ ಮತ್ತು ಶಿಕ್ಷಣಗಳನ್ನು ಒದಗಿಸುತ್ತ ಬಂದಿದ್ದು, ಜನರಲ್ಲಿ

41