ಪುಟ:Duurada Nakshhatra.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಖಾಸಗಿಯಾಗಿ ಪಾಠ ಹೇಳಿಸಿಕೊಳ್ಳುವಂತೆ ಮಾಡಬೇಕಾದರೆ, ತರಗತಿಯಲ್ಲಿ ಚೆನ್ನಾಗಿ ಹೇಳಿಕೊಡಬಾರದು! ಶಾಲೆಯಲ್ಲಿ ದೊರೆಯುವ ಸಂಬಳಕ್ಕಿಂತಲೂ ಹೆಚ್ಚನ್ನು ಖಾಸಗಿ ಪಾಠಗಳಿಂದಲೇ ಸಂಪಾದಿಸುವ ಉಪಾಧ್ಯಾಯರೆಷ್ಟೊಂದು ಜನರಿಲ್ಲ!...ಜಯದೇವ ಇಂಟರ್ ಓದುತಿದಾಗ ಲೊಮ್ಮೆ ನಾಲಾರು ಹುಡುಗರ ಮುಂದೆ ಭೌತಶಾಸ್ತ್ರದ ಪ್ರಾಧಾಪಕರು ನಗೆಯಾಡುತ್ತ ಹೇಳಿದ್ದರು: ನಾವೆಲ್ಲ ನಿಶಾಂತಿ ತಗೋಳೋಕೆ ಇಲ್ಲಿಗೆ ಬಲ್ತಿವಿ. ನಾವು ಪಾಠ ಹೇಳೋದೆಲಾ ಕಾಸಿಗೆ ಬರೋಕುರಿಚೆ ಮತು శాసు నెుగిడిల్."

ಹಿಂದೆ ಜಯದೇವನೂ ಖಾಸಗಿಯಾಗಿ ಪಾಠ ಹೇಳಿಕೊಟ್ಟುದಿತ್ತು. ಆದರೆ ಶಾಲಾ ಉಪಾಧ್ಯಾಯಸಾಗಿ ಆತ ಹಾಗೆ ಮಾಡಿರಲಿಲ್ಲ.

ವೆಂಕಟರಾಯರಾದರೋ ತಾತ್ವಿಕ ಮಟ್ಟದಲ್ಲೇ ಇದ್ದರು :

“ವಿದ್ಯಾರ್ಥಿಗಳ ಸಂಖ್ಯೆ ಬೆಳೀತಾ ಇದೆ. ವೈಯಕ್ತಿಕವಾಗಿ ಒಬ್ಬೊಬ್ಬ ವಿದ್ಯಾರ್ಥಿಯ ವಿಷಯದಲ್ಲೂ ಗಮನ ಕೊಡೋದಕ್ಕೆ ಆಗೋದೇ ಇಲ್ಲ.”

“ಹೌದು, ಹೌದು."

ಆದರೆ ಅದಕ್ಕಿದ್ದ ಪರಿಹಾರವೇನು? ಹಣದ ದೃಷ್ಟಿಯಿಂದ ನಡೆಯುವ ಮನೆ-ಪಾಠಗಳೆ ?

ಹುಡುಗರೇನೋ ಬಂದು ಜಯದೇವನನ್ನು ಕೇಳಿದರು :

“ಸಾರ್, ಟ್ಯೂಷನ್ ಹೇಳ್ಕೊಡೋಕೆ ಆಗುತ್ಯೆ ಸಾರ್?”

“ನನಗೆ ಪುರಸತ್ತಿಲ್ಲ, ಕ್ಲಾಸ್ನಲ್ಲೇ ಕೇಳಿ, ಹೇಳ್ತೀನಿ. ಬೇಕಾದ್ರೆ ಶಾಲೆ ಬಿಟ್ಮೇಲೆ ಇಲ್ಲೇ ಕೇಳಿ."

...ಮಧಾಹ್ನದ ಬಿಡುವಿನಲ್ಲಿ ನಾಲ್ಕನೆ ತರಗತಿಯ ಪ್ರಭಾಮಣಿ ಬಂದಳು-ಪ್ರತಿಭಾವಂತೆ. ಅವಳಿಗೇನೂ ಮನೆ-ಪಾಠ ಬೇಕಾಗಿರಲಿಲ್ಲ. ಆದರೆ...

“ಮನೇಗ್ಬಂದು ಪಾಠ ಹೇಳ್ಕೊಡೋಕೆ ಆಗುತ್ಯೆ ಅಂತ ಇಂದಿರಾನ ತಾಯಿ ಕೇಳಿದ್ದು ಸಾರ್.”

ಇಂದಿರಾ–ದೊಡ್ಡ ಹುಡುಗಿ. ಆಕೆಯ ನೋಟದೆದುರು ಹಲವೊಮ್ಮೆ ಜಯದೇವ ಅಧೀರನಾಗಿದ್ದ, ಹಾಜರಿ ಪುಸ್ತಕದಲ್ಲಿ ಹುಡುಗಿಯರ ಹೆಸರುಗಳನ್ನು ಓದಬೇಕಾಗಿ ಬಂದಾಗಲೂ ಅಷ್ಟೆ, ಇಂದಿರೆಯ ಹೆಸರಿದ್ದುದು