ಪುಟ:Duurada Nakshhatra.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನು ನಿಂತು ಪ್ರಯೋಜನವೂ ಇಲ್ಲ, ಟಾ ಟಾ ಬೈ ಬೈ ಎಲ್ಲಾ ಇಲ್ಲೇ! ಹೊರಡ್ತೀನಿ ಇನ್ನು.”

ವೇಣು ವ್ಯವಹಾರಕುಶಲನಾಗಿದ್ದ. ಅವನು ಹೇಳಿದುದು ಸರಿಯಾಗಿತ್ತು.

“ಹೌದು ವೇಣು. ಹೋಗಪ್ಪ ಇನ್ನು.”

“ಕಾಗದ ಬರೀತಿಯೇನಯ್ಯ ತಪ್ಪದೆ?”

“ಆ ಪ್ರಶ್ನೇನ ನಾನೇ ಕೇಳ್ಬೇಕೂಂತಿದ್ನಲ್ಲೋ!”

ವೇಣು ನಕ್ಕು, ಜಯದೇವನ ಭುಜ ಮುಟ್ಟೀ ಮೃದುವಾಗಿ ಅದುಮಿದ. ಅನಂತರ ಮಾತಿಗೆ ಆಸ್ಪದವಿರಲಿಲ್ಲ. ತಲೆಯಾಡಿಸಿ, ಕಿಟಿಕಿಯ ಮೂಲಕವೆ ಕೆಳಕ್ಕೆ ಧುಮುಕಿ, ವೇಣುಗೋಪಾಲ “ಬರ್ತೀನಿ ಜಯಣ್ಣ!” ಎಂದು ಅಲ್ಲಿಂದಲೇ ಅಂದು, ಹೊರಟು ಹೋದ.

ಆದರೆ ಹಾಗೆ ದೊರೆತಿದ್ದ ಜಾಗ, ಮೊದಲ ಜಯ ಮಾತ್ರ. ಜನರು ಒಳನುಗ್ಗಿದಂತೆ ಸಾಮಾನುಗಳು ಹೆಚ್ಚಿದುವು. ಯಾವನೋ ಇನ್ನೊಬ್ಬ ಮಲಗಿದ್ದ ಜಯದೇವನ ಎದುರುಗಡೆ. ಆತನೊಡನೆ ಪ್ರಯಾಣಿಕರು ಜಗಳವನ್ನೇ ಆರಂಭಿಸಿದರು. ಸ್ವಲ್ಪ ಕಾಲು ಮುದುಡಿಸಿಕೊಂಡು ಕೆಲವು ಸಾಮಾನುಗಳಿಗೆ ಜಯದೇವ ಜಾಗ ಮಾಡಿಕೊಟ್ಟ. ತಮಿಳುನಾಡಿನ ಕೂಲಿಯಾಳುಗಳ, ಅವರ ಹೆಂಗಸರು, ಮುದುಕರು, ಚಿಳ್ಳೆ ಪಿಳ್ಳೆಗಳ-ದೊಡ್ಡದೊಂದು ತಂಡವೇ ಒಳಬಂತು. ಮಾರವಾಡಿಗಳ ದೊಡ್ಕ ದೊಡ್ಡ ಟ್ರಂಕುಗಳು ಎರಡು ಮೂರು ಜಯದೇವನತ್ತ ಸುಳಿದಾಡಿದುವು.

ಯಾರೋ ಕೂಗಾಡಿದರು:

“ಆ ಜಾಗ ಇರೋದು ಮಲಗೋಕಲ್ಲ, ಏಳ್ರಿ !”

ಅವಕಾಶ ದೊರೆತಿದ್ದರೆ ಹಾಗೆ ಹೇಳಿದವರೇ ಆ ಜಾಗದಲ್ಲಿ ಮೊದಲು ಮಲಗುತ್ತಿದ್ದರೆಂಬುದು ಜಯದೇವನಿಗೆ ಗೊತ್ತಿರಲಿಲ್ಲವೆ?...ಅಂತಹ ಮಾತು ಕೇಳಿದಾಗ 'ಹಾಳಾಗಿ ಹೋಗಲಿ, ಇಳಿದು ಬಿಡೋಣ' ಎನ್ನಿಸಿತು ಅವನಿಗೆ. ಆದರೆ, ಹಾಗೆ ಇಳಿದುದು ಮುಂದೆ ತಿಳಿದಾಗ ವೇಣುಗೋಪಾಲ ಮಾಡಬಹುದಾದ ಪರಿಹಾಸ್ಯದ ನೆನಪಾಗಿ, ಜಯದೇವ ಇಳಿಯಲು ಇಷ್ಟಪಡಲಿಲ್ಲ. ನಿದ್ದೆ ಹೋದವನಂತೆ ನಟಿಸುತ್ತ ಆತ ಮಲಗಿದ. ಆಗಾಗ್ಗೆ ಕಳ್ಳ ನೋಟ