ಸಾಲ ಎರಡನೆಯ ಸೂಚನೆ ಆಶ್ಚರ್ಯಕ್ಕೆ ಕಾರಣವಾಗಿತ್ತು. ಹಾಗೆಯೇ ಯಾವುದೋ ಆಸೆಯ ಕಿರಣ ಉದಿಸುವುದಕ್ಕೂ ಎಡೆಗೊಟ್ಟಿತ್ತು. ಸ್ವತಃ ಬಡವನಾಗಿದ್ದರೂ ಆತ ವರದಕ್ಷಿಣೆ ಕೇಳಿರಲಿಲ್ಲ. ಅಂತಹ ದೊಡ್ಡ ವೆಚ್ಚವಿರದೆ ಇದ್ದರೂ ಸಣ್ಣ ಪುಟ್ಟ ವಾಗಿತ್ತು, ಆ ವಿಷಯ ಅಳಿಯನಿಗೆ ತಿಳಿಯುವ ಸಂಭವವಿರಲಿಲ್ಲ. ಆದರೂ ಆತ ಊಹಿಸಿಕೊಂಡಿದ್ದನೋ ಏನೋ.... ಅಂತೂ ವಿಜಯಳ ದಾಂಪತ್ಯ ಜೀವನ ಸುಖಕರ ವಾಗುವ ಚಿಹ್ನೆಗಳು ತೋರಿದ್ದುವು. ಮದುವೆಗೆ ಮುಂಚೆಯೊಮ್ಮೆ, ಗೊತ್ತಾಗಿದ್ದ ಆ ಗಂಡನ್ನು ಕುರಿತು 'ಪಾಲಿಗೆ ಬಂದ ಪಂಚಾಮೃತ' ಎಂದು ವಿಜಯ ಆಡಿದ್ದಳು ನಿಜ, ಹಾಗೆ ಆಕೆಯ ಪಾಲಿಗೆ ಬಂದುದು ನಿಜವಾಗಿಯೂ ಅಮೃತವೇ ಎಂಬ ಆಸೆಯ ಭಾವನೆ ಈಗ ಮೂಡಿತ್ತು. “ಓ ದೇವರೆ, ಇದೇ ಸತ್ಯವಾಗಲಿ; ನಾನು ಅನುಭವಿಸಿದ ಸಂಕಟ ನನ್ನ ವಿಜಿಗೆ ಪ್ರಾಪ್ತವಾಗದಿರಲಿ' ಎಂದು ಸುನಂದಾ ಮನಸ್ಸಿನಲ್ಲೇ ದೇವರನ್ನು ಪ್ರಾರ್ಥಿಸಿದಳು. ಈ ಆಕೆ ಬೇರೆ ಸೀರೆಯುಟ್ಟು ಬಂದು ಕನ್ನಡಿಯಲ್ಲಿ ಮುಖ ನೋಡಿಕೊಂಡಳು. ಮನೆಯ ಹಿರಿಯಕ್ಕನಾದ ತಾನು ಸಂತೋಷದಿಂದ ಓಡಾಡಬೇಕಲ್ಲವೆ?...ತಂಗಿಯನ್ನು ಆಕೆ ಕೈಹಿಡಿದು ಎಳೆದು ತಂದು ಹೆರಳು ಹಾಕಿದಳು. ಸೀರೆ ಕುಪ್ಪಸಗಳನ್ನು ಎತ್ತಿ ಕೊಟ್ಟಳು. ಆಯ್ಕೆ ಏನೇನೂ ಕಷ್ಟದ್ದಾಗಿರಲಿಲ್ಲ. ವಿಶೇಷ ಸಮಾರಂಭಗಳಲ್ಲಿ ಉಡು ವುದಕ್ಕೆಂದು ಅಲ್ಲಿದ್ದುದು ಒಂದೇ ಜತೆ... ಸಿಂಗರಿಸಿ ಸಿದ್ಧವಾದ ತಂಗಿಯನ್ನು ನೋಡಿ ಸುನಂದೆಗೆ ಹೆಮ್ಮೆ ಎನಿಸಿತು. ಸುರ ಸುಂದರಿಯಲ್ಲದೆ ಹೋದರೂ ಸ್ಪುರದ್ರೂಪಿಣಿ, ಯೌವನದ ಗಾಂಭೀರ್ಯ ಘಾಸಿ ಗೊಳಿಸದೇ ಇದ್ದ ಮುಗ್ಧ ಸೌಂದರ್ಯ, ಸುನಂದಾ ವಿಜಯಾಗೆ ದೃಷ್ಟಿ ತೆಗೆದಳು. ಹಾಗೆ ಮಾಡಿದ ಬಳಿಕ, “ಓದಿರೋ ಆಧುನಿಕರು ಆನಿಸಿಕೊಂಡಿದ್ದೀವಿ. ಆದರೆ ಕಂದಾಚಾರ ಒಂದನ್ನೂ ಬಿಟ್ಟಿಲ್ಲ.” ಎಂದು ನಕ್ಕಳು. ವಿಜಯಳಿಗೂ ನಗು ಬಂತು, “ಪಾಪ ಮಲಕ್ಕೊಂತು", ಎಂದು ತೊದಲುತ್ತ ಬರಿಗೈಯಲ್ಲಿ ಸರಸ್ವತಿ ಬಂದಳು. “ಬಾ ಚಿನ್ನ”, ಎಂದು ವಿಜಯ ಕೈಚಾಚಿ ಕರೆದಳು. “ಎನ್ನೊ ಬೇಡ್ವ... ಸೀರೆಯಲ್ಲಾ ಕೊಳೆಯಾಗುತ್ತೆ. ಅವಳ ಲಂಗನಾದರೂ ಬದಲಾಯಿಸ್ತೀನಿ, ತಾಳು....” ಎಂದಳು ಸುನಂದಾ, ಆ ಮಾತು ಅರ್ಥವಾದವಳಂತೆ ಸರಸ್ವತಿ ರೇಗಿ ಪ್ರತಿಭಟಿಸಿ ರಾಗ ತೆಗೆದಳು. ಸುನಂದಾ, ಸರಸ್ವತಿಯ ಉಡುಗೆಗಳಿದ್ದ ಪೆಟ್ಟಿಗೆಯ ಕಡೆಗೆ ಸಾಗಿದಂತೆ ವಿಜಯಾ ಮಗುವನ್ನೆತ್ತಿಕೊಂಡಳು. ಎಲ್ಲಿ ಉಮ್ಮಕೊಡು," ಎಂದಳು, ಮಗು ಪ್ರೀತಿಯಿಂದ ಚಿಕ್ಕಮ್ಮನಿಗೆ ಉಮ್ಮ ಕೊಟ್ಟಿತು. “ಉಮ್ಮ ಕೊಡುವವರು ಬರೋತನಕ ಇನ್ನೆರಡು ನಿಮಿಷ ಕಾಕ
ಪುಟ:Ekaangini by Nirajana.pdf/೧೨
ಗೋಚರ