ಏಕಾಂಗಿನಿ. ಆಗಲ್ವೇನೋ, ಎಂದು ಸುನಂದಾ ನಕ್ಕಳು. ಅಷ್ಟರಲ್ಲೆ ಜಟಕಾ ಮನೆಯ ಎದುರು ಬಂದು ನಿಂತ ಸದ್ದಾಯಿತು. “ಗಾಡಿ ಬಂತು ಕಣೇ, ಸುನಂದೆಯ ತಾಯಿ ಕರೆದು ಹೇಳಿದರು. “ವಿಜಯಾ, ಬಿಂದಿಗೆ ಬಿಸಿನೀರು ತಗೋ" ಎಂದು ಅವರೇ ನಿರ್ದೇಶ ಆರಾಮ ಕುರ್ಚಿ ಬೇಡವೆಂದು ಜಮಖಾನದ ಮೇಲೆಯೇ ದಿಂಬಿಗೊರಗಿ ಕುಳಿತ ಅಳಿಯ ದೇವರನ್ನೊಮ್ಮೆ ಬಾಗಿಲ ಬಳಿ ನಿಂತು ನೋಡಿ ಸುನಂದಾ, ಅಡುಗೆಮನೆಯಲ್ಲಿ ಅವಿತಿದ್ದ ವಿಜಯಳೆಡೆಗೆ ಬಂದಳು. ಬರುತ್ತ, “ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು." ಎಂದು ಗುಣಗುಣಿಸಿ ನಕ್ಕಳು. 'ಕೆಯ ತಾಯಿಗೆ ಹಾಡಿನ ಆ ಸಾಲು ಮೋಜೆನಿಸಿತು. “ರಾತ್ರಿ ಎಲ್ಲಿಂದ್ದಂತೆ? ಬೆಳಗಾಗಿತ್ತೂಂತ ಹೇಳು,” ಎಂದು ತಮ್ಮ ಹಾಸ್ಕೋಕ್ತಿಗೆ ತಾವೇ ತಲೆದೂಗುತ್ತ ಅವರು ಹಿರಿಯ ಮಗಳನ್ನು ನೋಡಿದರು. 66 “ಕೊನೇಲಿ ರಾಯರಿಗೇನಾಗುತ್ತೆ ಗೊತ್ತೆ ಅಮ್ಮ?” ಎಂದಳು ಸುನಂದಾ, ತುಂಟ ನಗೆ ಧ್ವಜ ನೆಟ್ಟಿತ್ತು ಆಕೆಯ ಮುಖದ ಮೇಲೆ. “ನನಗೇನಮ್ಮ ಗೊತ್ತು? ಮರೆತಿಟ್ಟಿದೀನಿ. ಅದೇನು ದೇವರ ನಾಮವೆ ನೆನಪಿಟ್ಕಳ್ಳೋಕೆ?” ಅಳಿಯ ದೇವರ ನಾಮ.!”
- ಉದ್ಧಾರವಾಯ್ತು.”
“ಕೊನೇಲಿ ರಾಯರು ಸಿಡಿಮಿಡಿಯಾಗ್ತಾರೆ.” “ಪದುಮ ಕಾಣಿಸ್ಕೊಳ್ಳಿಲ್ಲಾಂತ.” “ಎಲ್ಲಿಗೆ ಹೋಗಿದೆ ? “ಒಳಗಿಲ್ಲಾಮ್ಮ.” "ಮತ್ತೆ?” “ಅಯ್ಯೋ ಅಮ್ಮ! ಒಳಗಿಲ್ಲದ ಮೇಲೆ ಇನ್ನೆಲ್ಲಿದ್ದಾಳೆ ಹೇಳು.” ಹೊರಗೆ ಎಂಬ ಪದ ಮನಸ್ಸಿನಲ್ಲಿ ರೂಪುಗೊಂಡು ಸುನಂದೆಯ ತಾಯಿ