నింగి ವನ್ನು ತಿಳಿದು ತಾನು ಧನ್ಯ ಎಂದುಕೊಂಡರು. 29 ಬಳಿಕ ಕೊನೆಯಲ್ಲಿ ಮಾರ್ಮಿಕವಾದ ಸಾಲುಗಳಿದ್ದುವು. ಅಕ್ಕನನ್ನು ಕುರಿತು ತಂಗಿಯ ಕೊರಗು. ಅದನ್ನೇ ಮುತ್ತಲಿದ್ದಂತೆ ಆನಂದ ಬಾಷ್ಪ ಸಂಕಟದ ಕಂಬನಿ ಮಾಯಿತು. ಉಸಿರಾಡುವುದೆ ಕಷ್ಟವೆನಿಸಿತು ಒಂದು ಕ್ಷಣ. ಮಗು ತಮಾಷೆಯಾಗಿ ಬರೆದಿದ್ದ ಕಾಗದವನ್ನು ಓದಿ ಕೇಳಿ ತಾಯಿಯ ಸಂತೋಷದಿಂದ ಅತ್ತರು. ಅನಂತರ ಆ ದಿನವೆಲ್ಲ, ವಿಜಯಾ ತಮ್ಮೊಡನೆಯೇ ಸುಳಿದಾಡುತ್ತಿದ್ದಂತೆ ಅವ ರೆಲ್ಲರಿಗೂ ಭಾಸವಾಯಿತು. ವಿಜಯಾ ಬರೆದ ಕಾಗದಗಳಿಂದಲೇ ಹೃದಯ ತುಂಬಿ ತೆಂದು ಹೆಚ್ಚು ಮಾತನ್ನೇ ಯಾರೂ ಆ ಹೊತ್ತು ಆಡಲಿಲ್ಲ. ಮಾರನೆಯ ದಿನವೇ ಸುನಂದಾ ತಂಗಿಗೆ ಮಾರೋಲೆ ಬಂದಳು. ಬಲು ದೀರ್ಘ ವಾದ ಓಲೆ, ಅದರಲ್ಲಿಯೂ ಆಕೆ ಹೃದಯ ತೋಡಿಕೊಳ್ಳಲಿಲ್ಲ. ಆ ವಿಷಯ ಈ ವಿಷಯ, ಬಲು ಸ್ವಾರಸ್ಯವಾಗಿ, ತಂಗಿ ಅದನ್ನೋದಿ ಮೆಚ್ಚುವಂತೆ ನಗುವಂತೆ ಬರೆದಳು, ಕೃಷ್ಣಪ್ಪನವರು ಆಶೀರ್ವಾದ ತಿಳಿಸಿದರು. ತಾಯಿಯಿಂದ ಆರೈಕೆಯ ವಿಷಯವಾಗಿ ಹಿತವಚನ... ಮತ್ತೆ ಎಂದಿನಂತೆಯೆ ದಿನಗಳು, ಹಗಲಿರುಳು... ನಡುವೆ ಕೆಲ ವರ್ಷ ಸುನಂದಾ ಅವರ ಮನೆಯಲ್ಲಿರಲಿಲ್ಲ, ಸರಸ್ವತಿ ಎಂಬ ಮಗು ಹಿಂದಿನಿಂದಲೂ ಅಲ್ಲಿರಲಿಲ್ಲ ಎಂದು ಯಾರಾದರೂ ಅಂದರೆ, ಕೃಷ್ಣಪ್ಪನವರೂ ಅವರ ಪತ್ನಿಯ ಆ ಮಾತನ್ನು ಖಂಡಿತ ನಂಬಲಾರರು ಎನ್ನುವಂತಾಯಿತು ಪರಿಸ್ಥಿತಿ ಆ ಮನೆಯ ಇರುವಿಕೆಯೊಡನೆ ಅಷ್ಟೊಂದು ಬೆರೆತು ಹೋಗಿದ್ದರು ಸುನಂದಾ ಮತ್ತು ಸರಸ್ವತಿ, ಆದರೂ ಒಳಗಿಂದೊಳಗೇ ವ್ಯಥೆಯ ಕೀಟವೊಂದು ಆ ವೃದ್ಧ ದಂಪತಿಯನ್ನು ಕೊರೆಯುತ್ತಿತ್ತು, ಸುನಂದೆಯನ್ನು ಕೊರೆಯುತ್ತಿತ್ತು. ಮುಂದೇನು? ಮುಂದೇನು? ಎನ್ನುವ ಪ್ರಶ್ನೆ ದಿನದಿಂದ ದಿನಕ್ಕೆ ಬೃಹದಾಕಾರ ಸುನಂದೆಯ ಒಡೆದು ಹೋಗಿದ್ದ ಸಂಸಾರದ ಪಾತ್ರೆಗೆ ಬೆಸುಗೆ ಹಾಕುವುದು ಸುಲಭವಾಗಿರಲಿಲ್ಲ. ಯತ್ನಿಸಿ ನೋಡಲು ಕೃಷ್ಣಪ್ಪನವರಿಗೆ ಮನಸ್ಸಿತ್ತು. ಆದರೆ ಆ ಯತ್ನ ವಿಫಲವಾಗುವುದೆಂಬ ಭಯದಿಂದ ಅವರು ಅಳುಕುತ್ತಿದ್ದರು. ಒಮ್ಮೊಮ್ಮೆ ನಿರಾಸೆಯ ಸುಂಟರಗಾಳಿ ಅವರ ಮನವನ್ನೆಲ್ಲ ಆವರಿಸಿದಾಗ “ಸುನಂದಾ ನನ್ನ ಪಾಲಿನ ಗಂಡು ಸಂತಾನ ಅಂತ ಭಾವಿಸ್ತೀನಿ' ಎಂದುಕೊಳ್ಳುತ್ತಿದ್ದರು ಕೃಷ್ಣಪ್ಪ, ಮತ್ತೆ ಒಮ್ಮೊಮ್ಮೆ, ತಮ್ಮ ಮೊದಲ ಅಲ್ಲಿಯ ಹಾದಿಗೆ ಬರಬಹುದು, ಸುನಂದೆಯ ಬದುಕಿನಲ್ಲಿ ಪುನಃ ಭಾಗ್ಯದಯವಾಗಬಹುದು ಎಂದು ಆಸೆ ನಂಬಿಕೆ ಗಳನ್ನು ಅವರು ರೂಪಿಸಿಕೊಳ್ಳುತ್ತಿದ್ದರು.
ಪುಟ:Ekaangini by Nirajana.pdf/೩೩
ಗೋಚರ