30 ಒಂದು ಸಂಜೆ ಕೃಷ್ಣಪ್ಪನವರು, ಮಗಳೊಡನೆ ಮಾತನಾಡಲು ನಿರ್ಧರಿಸಿದರು. ಆದರೆ ಹೇಗೆ ಮೊದಲು ಮಾತನಾಡಬೇಕೆನ್ನುವುದೆ ಅವರಿಗೆ ತಿಳಿಯಲಿಲ್ಲ. ಯಾವುದೋ ಹಳೆಯ ಪುಸ್ತಕವನ್ನು ಕೈಯಲ್ಲಿ ಹಿಡಿದುಕೊಂಡು ನಡು ಮನೆಗೆ ಬಂದರು. ಹೆಂಡತಿಯ ಎದುರಲ್ಲಿ ಈ ಪ್ರಸ್ತಾಪ ಸರಿಯಲ್ಲವೆಂದು ಮತ್ತೆ ಜಗಲಿಗೆ ಹೋದರು. ಪುಸ್ತಕವನ್ನು ಅಲ್ಲಿಯೇ ಬಿಟ್ಟು, ಅಂಗಳಕ್ಕಿಳಿದರು. ಅಲ್ಲೇ ನಿಂತರು. ತಂದೆಯನ್ನೇನೋ ಯೋಚನೆ ಬಾಧಿಸುತ್ತಿದೆ, ಎನಿಸಿತು ಸುನಂದೆಗೆ, ಮೊಗ್ಗೆಯಿಂದ ಮತ್ತೆ ಕಾಗದ ಬರಲಿಲ್ಲವೆಂಬ ಕಾತರವಿರಬಹುದು, ಎಂದು ತನ್ನಷ್ಟಕ್ಕೆ ಅಂದಳು. ತನ್ನ ವಿಷಯವೇ ಇದ್ದೀತೆಂದು ಒಪ್ಪಲು ಆಕೆ ಇಷ್ಟ ಪಡಲಿಲ್ಲ. ಅಷ್ಟರಲ್ಲಿ ತಂದೆಯ ಧ್ವನಿ ಕೇಳಿಸಿತು: “ಸರಸ್ವತಿ ಎಲ್ಲಿದಾಳೆ, ಸುನಂದಾ?
- ಒಳಗಿದ್ದಾಳೆ.”
“ಇಲ್ಲಿಗೆ ಕರಕೊಂಡ್ಯಾ.” ಮಗಳನ್ನೆತ್ತಿಕೊಂಡು ಸುನಂದಾ ಹೊರಕ್ಕೆ ಬಂದಳು. ಮೊಮ್ಮಗಳನ್ನು ತಾವೆತ್ತಿಕೊಳ್ಳುತ್ತ ಕೃಷ್ಣಪ್ಪನವರು ಕೇಳಿದರು: “ಬೆಂಗಳೂರಿನಲ್ಲಿ ನಿಮ್ಮನೆ ಪಕ್ಕದಲ್ಲಿ ಒಬ್ಬರಿದ್ದಾರಲ್ಲಾ ಅವರ ಹೆಸರೇನು?” ಸುನಂದೆಯ ಎದೆ ಗುಂಡಿಗೆ ತೀವ್ರವಾಗಿ ಬಡಿಯತೊಡಗಿತು. “ಯಾರು ರಾಧಮ್ಮನೆ? ರಾಮಯ್ಯ ಅಂತ ಅವರ ಯಜಮಾನು." “ಅವರೇನ, ಸುನಂದಾ, ರಾಧಮ್ಮನಿಗೊಂದು ಕಾಗದ ಬರೀತೀಯಾ?'
- 3.30...
ಏನೆಂದು ಆಕೆ ಕೇಳಲಿಲ್ಲ. ಕೇಳುವ ಅಗತ್ಯವಿರಲಿಲ್ಲ. “ಬಹಳ ದಿವಸವಾಯ್ತು. ಒಮ್ಮೆ ಹೋಗಿಯಾದರೂ ಬರೆದು ಮೇಲ ಅನಿಸುತ್ತೆ. ಹೋಗೋಕ್ಕುಂಚೆ ವಿಷಯ ಏನೂಂತ ಸ್ವಲ್ಪವಾದರೂ ತಿಳಿದರೆ ಚೆನ್ನಾ ಗಿರುತ್ತೆ. ರಾಧಮ್ಮ ಉತ್ತರ ಬರೀಬಹುದು, ಅಲ್ವೆ?” “ಬರೀಬಹುದು.” ಆ ವಿಷಯ ಅಲ್ಲಿಗೆ ನಿಂತು, ದೊಡ್ಡ ಭಾರವಿಳಿಸಿದವರಂತೆ ಕೃಷ್ಣಪ್ಪನವರು ಪ್ರಸನ್ನ ರಾಗಿ, ಮೊಮ್ಮಗಳನ್ನು ಹೆಗಲ ಮೇಲೆ ಕೂರಿಸಿಕೊಂಡರು, ರಾಧಮ್ಮನ ಕಾಗದಕ್ಕೋಸ್ಕರ ಬಹಳ ದಿನ ಕಾದಿರಬೇಕಾದ ಅಗತ್ಯವಿರಲಿಲ್ಲ. ಅದು ಬೇಗನೆ ಬಂದು, ಉತ್ತರ ರಾಧಮ್ಮನದೆ. ಹೇಳಿ ಬರೆಸಿದ್ದು, ಅವರ ಹುಡುಗನ