ವಿಷಯಕ್ಕೆ ಹೋಗು

ಪುಟ:Ekaangini by Nirajana.pdf/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

32 ಏಕಾಂಗಿಣ “ಕುಸುಮ ತವರು ಮನೆಗೆ ಹೋದಾಗ ನೀವು ಇಲ್ಲೇ ಇದ್ದಿರಿ, ಈಗ ಅವರು ವಾಪಸು ಬಂದಿದ್ದಾರೆ. ಒಂದು ತಿಂಗಳಾಯ್ತು. ಅವರ ಯಜಮಾನರಿಗೆ ಒಂದು ಗಂಡು ಮಗುವಿನ ಕಾಣಿಕೆ ಒಪ್ಪಿಸಿದ್ದಾರೆ. ಮಗು ತುಂಬಾ ಮುದ್ದಾಗಿದೆ. ಕುಸುಮಾ ನಿಮ್ಮ ವಿಷಯ ಬಹಳ ಕೇಳಿದರು. ಅವರು ಕಾಗದ ಬರೀತೀನೀಂತ ಹೇಳಿದ್ದವರು ತವರು ಮನೆಯಿಂದ ನಿಮಗೆ ಬರೆಯಲೇ ಇಲ್ಲವಂತೆ. ಈಗ ವಿಳಾಸ ಬೇಕು ಎಂದರು. ನಾಳೆ ಅವರಿಗೆ ಕೊಡುತ್ತೇನೆ ತುಂಬಾ ಒಳ್ಳೆಯವರು. ನಿಮ್ಮ ಸ್ನೇಹಿತೆ ಅಂದ ಮೇಲೆ ಕೇಳಬೇಕೆ? ಓದಿದವಳೊಂತ ಯಾವ ಜಂಭವೂ ಇಲ್ಲ....ಈಗ ಇಲ್ಲಿ ನೀವಿಲ್ಲದೆ ತುಂಬಾ ಬೇಸರ. ನೀವಿದ್ದ ಮನೆಗೆ ಬಿಡಾರ ಬಂದಿರೋದು ಹೈಸ್ಕೂಲು ಮೇಸ್ಟು, ಮನೆ ತುಂಬಾ ಸಂಸಾರ. ಅಲ್ಲಿ ಹ್ಯಾಗಾದರೂ ಇದ್ದಾರೋಂತ ಆಶ್ಚರ್ಯವಾಗದೆ, ಮನೆ ಯಜಮಾನಿತಿ ಜಗಳಗಂಟೆ ಏನಲ್ಲ. ಆದರೂ ಹುಡುಗರನ್ನು ಸಮಾಧಾನಪಡಿಸಿ ಸಾಕೋ ಸಾಕಾಗಿ ಸಂಕಟಪಡ್ತಾ ಇದ್ದಾರೆ.* ....ಮತ್ತೆ ಮುಕ್ತಾಯ.

  • ಈ ಪುರಾಣ ಎಷ್ಟು ಬರೆದರೂ ಮುಗಿಯುವಂಥಾದ್ದಲ್ಲ. ನೀವೊಮ್ಮೆ ಬನ್ನಿ,

ನಾಲ್ಕು ದಿವಸ ಹಗಲೂ-ರಾತ್ರೆ ಕೂತು ಹರಟೆ ಹೊಡೆಯೋಣ. ಪುನಃ ಹೇಳೇನೆ. ನೀವು ನಮ್ಮಲ್ಲೇ ಇಳೀಬೇಕು. ಯಾವತ್ತು ಬರೀರಿ ಅನ್ನೋದಕ್ಕೆ ಕಾಗದ ಬರೀರಿ.” ಉದ್ದನಾದ ಕಾಗದ, ಕೊನೆಯೇ ಇಲ್ಲದ ಕತೆಯ ಹಾಗೆ, ತನ್ನ ಬದುಕಿನಂಥದೇ, ಅವಸರವಾಗಿ ಒಮ್ಮೆ ಓದಿ, ನಿಧಾನವಾಗಿ ಮತ್ತೊಮ್ಮೆ ಓದಿ, ನಿಟ್ಟುಸಿರು ಬಿಟ್ಟು ಸುನಂದಾ ಸುಮ್ಮನಾದಳು. ಅಂಚೆಯವನು ಬಂದುದನ್ನು ಆಕೆಯ ತಾಯಿ ಕಂಡಿರಲಿಲ್ಲವೆಂದು, “ಕಾಗದ ಯಾರದೇ? ಎಂಬ ಪ್ರಶ್ನೆಯಿಂದ ಮಗಳು ತಪ್ಪಿಸಿಕೊಂಡಿ ದ್ದಳು. ಆದರೆ ಕಾಗದ ಹೊತ್ತು ತಂದಿದ್ದ ಬೇಸರದ ದಟ್ಟನೆಯ ಮೋಡಗಳ ಮುಸುಕಿ ನಿಂದ ಮಾತ್ರ ತಪ್ಪಿಸಿಕೊಳ್ಳುವ ಹಾಗಿರಲಿಲ್ಲ. ಸ್ನೇಹಿತರ ಮನೆಗೆಂದು ಹೊರ ಹೋಗಿದ್ದ ತಂದೆ ಹಿಂತಿರುಗಿ ಬರುವುದನ್ನೇ ಸುನಂದಾ ಕಾದು ಕುಳಿತಳು. ನೋಡುವ ಬಯಕೆಯೂ ಕೃಷ್ಣಪ್ಪನವರು ಬಂದಾಗ ಕಾಗದವನ್ನು ಅವರ ಕೈಗೆ ಆಕೆ ಹಾಕಿದಳು. ನೋದುತ್ತಿದ್ದ ಅವರ ಮುಖಭಾವವನ್ನು ಪರೀಕ್ಷಿಸಿ ಗಿರಲಿಲ್ಲ. ತಂದೆಯನ್ನೂ ಅವರ ಯೋಚನೆಗಳನ್ನೂ ಮಗುವನ್ನೆತ್ತಿಕೊಂಡು ಹಿತ್ತಲ ಕಡೆಗೆ ಹೋದಳು. d ಒಟ್ಟಿಗೆ ಬಿಟ್ಟು ಆದ ಸುನಂದ ಒತ್ತಟ್ಟಿಗೆ ಬಿಟ್ಟು ಸುನಂದ ಹಿಂದಿರುಗಿ ಬಂದಾಗ ತಂದೆ ಓದುವುದು ಮುಗಿದಿತ್ತು. ಆಕೆ ಕಂಡುದು ಚಿಂತಾ ಕ್ರಾಂತವಾದ ಮುಖಮುದ್ರೆ, ಕೃಷ್ಣಪ್ಪನವರು ಮಗಳನ್ನು ಅಸಹಾಯತೆಯ ದೃಷ್ಟಿ ಯಿಂದ ನೋಡಿದರು. ವೃದ್ಧಾಪ್ಯದೊಡನೆ ಹೆಚ್ಚು ಸ್ಪಟವಾಗಿದ್ದ ಮುಖದ ಮೇಲಿನ ಗೆರೆಗಳು ವ್ಯಥೆಯಿಂದ ಮತ್ತಷ್ಟು ಆಳವಾಗಿದ್ದುವು. ಆರಾಮ ಕುರ್ಚಿಯೊಳಗೆ ಆ ದೇಹ ಕುಗ್ಗಿದಂತೆ ತೋರಿತು.