ವಿಷಯಕ್ಕೆ ಹೋಗು

ಪುಟ:Ekaangini by Nirajana.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33 ಸ್ವಲ್ಪ ಹೊತ್ತು ಸುಮ್ಮನಿದ್ದ ಬಳಿಕ, ತಮ್ಮ ಹೆಂಡತಿಗೆ ಕೇಳಿಸುತ್ತಿಲ್ಲವೆಂದು ಖಚಿತಪಡಿಸಿಕೊಂಡು, ಕೃಷ್ಣಪ್ಪ ಪಿಸುದನಿಯಲ್ಲಿ ಅಂದರು: “ನಾನೊಮ್ಮೆ ಬೆಂಗಳೂರಿಗೆ ಹೋಗತ್ತೀನಿ, ಆಗದಾ?” "..." “ಮನೆ ಖಾಲಿ ಮಾಡಿದ ಅಂದರೆ ಏನರ್ಥ?” “ಹೋಟೆಲ್ನಲ್ಲೋ ಸ್ನೇಹಿತರ ಮನೇಲೂ ವಾಸವಾಗಿದಾನೇಂತ ತೋರುತ್ತೆ.” “ಇನ್ನೆಲ್ಲಿದ್ದಾರೆ? ” “ಅವನ ಆಫೀಸಿಗೆ ಶಾಖೆಗಳಂತೂ ಇಲ್ಲ ತಾನೆ?" “ಹಾಗಾದರೆ ವರ್ಗದ ಮಾತೇ ಇಲ್ಲ.” “ಬೆಂಗಳೂರಲ್ಲಿ ಎಲ್ಲಿ ಹುಡುತ್ತೀಯಾ ಅವರನ್ನು ?”

  • ಆತನ ಆಫೀಸಿಗೇ ಹೋಗ್ತಿನಿ. ಆಗದಾ?”

66-66 34 3530.... ಹೆಚ್ಚೇನನ್ನೂ ಹೇಳಲು ಸುನಂದಾ ಸಮರ್ಥಳಾಗಲಿಲ್ಲ. ಈ ಮೊದಲೇ ಹೋಗ ಬೇಕಾಗಿತ್ತು ಎನ್ನುವ ಸಂಕಟವೇನೂ ಆಕೆಯನ್ನು ಕೊರೆಯುತ್ತಿರಲಿಲ್ಲ. ದೀರ್ಘ ಕಾಲ ಸುಮ್ಮನಿರುವುದರಿಂದ ಗಂಡನ ಮನಸ್ಸಿನ ಮೇಲೆ ತನಗೆ ಅನುಕೂಲವಾಗಿ ಏನಾದರೂ ಪರಿಣಾಮವಾಗಬಹುದೆಂಬ ಆಸೆಯೊಂದು ಮಸಕು ಮಸಕಾಗಿ ಅವಳಿಗಿತ್ತು. ಅದು ಆಳಸಿಯೇ ಹೋಗಿತ್ತು. ಈಗ ನಿರ್ದಿಷ್ಟವಾದೊಂದು ಇಳಿಜಾರು ಹಾದಿಯಲ್ಲಿ ತನ್ನ ಬದುಕಿನ ರಥ ಉರುಳುತ್ತಿದೆ; ಕೆಳಗಿರುವ ಬಂಡೆಕಲ್ಲಿಗೆ ಬಡೆದು ಅದು ಪುಡಿಪುಡಿಯಾಗು ವುದೇ ನಿಶ್ಚಯ ಎಂದು ಸುನಂದೆಗೆ ಈಗ ಭಾಸವಾಗುತ್ತಿತ್ತು. “ಹಣೆಯಲ್ಲಿ ಏನು ಬರೆದಿದೆಯೋ ಹಾಗಾಗಲಿ,” ಎನ್ನುವುದೊಂದೇ ಆಕೆಯ ಪಾಲಿಗಿದ್ದ ಸಮಾಧಾನದ ತತ್ವಜ್ಞಾನ, ವಿಧಿಲಿಖಿತ ಎನ್ನುವ ಮಾತಿನಲ್ಲಿ ಆಕೆಗೆ ನಂಬುಗೆ ಇತ್ತೆಂದಲ್ಲ. ನಂಬುಗೆ ಗಿಂತಲೂ ಹೆಚ್ಚಾಗಿ, ಆ ರೀತಿಯ ಭಾವನೆಯಿಂದ ಒಂದು ತೆರನಾದ ನೆಮ್ಮದಿ ಸಿಗುತ್ತಿತ್ತು. ಯಾವುದೋ ಗವಿಯ ಆಳದಿಂದ ಬಂದಂತೆ ಕೃಷ್ಣಪ್ಪನವರ ಸ್ವರ ಕೇಳಿಸಿತು; “ನಾನು ಯಾವತ್ತು ಹೊರಡಲಿ?” ಪೂರ್ಣಬೋಧೆಯಿಲ್ಲದೆ ಪ್ರಶ್ನೆ ಅಸ್ಪಷ್ಟವಾಗಿ ಕೇಳಿಸಿದವಳಂತೆ ಸುನಂದಾ ಅಂದಳು. “ಏನಂದೆ, ಅಪ್ಪಾ?” “ನಾನು ಯಾವತ್ತು ಹೊರಟರಾದೀತಂತ?”

  • ನಾಳೆ ಮಂಗಳವಾರ.”