ಪುಟ:Elu Suthina Kote.pdf/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

xviii ಮಾಡುವ ಯೋಚನೆಗಳೂ ಇಲ್ಲಿ ಸಂಧಿಸಿ ಒಂದಕ್ಕೊಂದು ಸಂಕೇತವಾಗಿ ಒಂದರೊಂದಿಗೊಂದು ಬೆರೆತು ಒಟ್ಟಿಗೆ ನೆಲಸುತ್ತವೆ. ನವ್ಯಕವಿ ಈ ಕಡಲಿನಲ್ಲಿ ಗಾಳಹಾಕುತ್ತಾನೆ. ಈ ಸಂಕಲನದ ಕವಿತೆಗಳಲ್ಲಿ ಅತ್ಯಾಧುನಿಕ ಜೀವನದ ಚಿತ್ರಗಳೂ ಬರುತ್ತವೆ. ಅತಿ ಪ್ರಾಚೀನ ವಾಕ್ಯಗಳೂ ಬರುತ್ತವೆ. ಇವು ಒಂದನ್ನೊಂದು ಸಮರ್ಥಿಸುತ್ತವೆ. ಇಲ್ಲವೆ ವ್ಯಂಗ್ಯಹಾಸ್ಯದಿಂದ ವಿರೋಧಿಸುತ್ತಿವೆ. ಉದಾಹರಣೆಗೆ “ತಾಯಿ-ಮಗ” ಎಂಬ ಕವಿತೆಯಲ್ಲಿ ಬರುವ ಬಡಭಿಕ್ಷುಕ ಜನದ ವರ್ಣನೆಯನ್ನು ನೋಡಿ: “ಕಲಕತ್ತ ಪ್ಯಾರಿಸ್ಸು ಲಂಡನ್ನು ನ್ಯೂಯಾರ್ಕು ಕಡಲ ವಿಸ್ತರದಲ್ಲಿ ಹನಿಯೊಂದ ಹುಡುಕಲೆ? ನಿನ್ನ ಮನೆಯ ವಿಳಾಸ?” `ಶೆಟ್ಟಿಯಂಗಡಿ ಜಗುಲಿ, ಪಾರ್ಕಿನೊಳಗಿನ ಬೆಂಚು ಬೀದಿಯಂಚು........” 'ದ್ಯಾವಾಪೃಥಿರದಮಂತರಂ ಹ ವ್ಯಾಪ್ತಂ ತ್ವಮೈಕೇನ ದಿಶಶ್ಚ ಸರ್ವಾಃ ಓ ವಿಶ್ವರೂಪಿ! ದೈವಿಕತೆಯ ಅಗ್ನಿಕಣ ಆತ್ಮದಲ್ಲಿದ್ದರೂ ಅನೇಕ ಕಾರಣಗಳಿಂದ ಪಶುವಿನಂತೆ ಬಾಳುವ ಈ ದರಿದ್ರ ನಾರಾಯಣರ ವಿಶ್ವವ್ಯಾಪ್ತಿಯಲ್ಲಿ, ವಿಶ್ವವನ್ನೆಲ್ಲ ವ್ಯಾಪಿಸಿ ಇನ್ನೂ ಮೀರಿ ನಿಂತ ಪರಮಮರುಷನೆಲ್ಲಿ? ಈ ಉದ್ಧತವಾಕ್ಯ ತನ್ನ ಮೇಲಿನ ಪಂಕ್ತಿಗಳನ್ನು ವಿರೋಧಿಸಿದರೂ ಆಳದಲ್ಲಿ ಅವುಗಳೊಡನೆ ಸ್ವಲ್ಪ ಸಾದೃಶ್ಯವನ್ನೂ ತೋರಿಸುತ್ತದೆ. ಕವನದಲ್ಲಿ ಮುಂದೆ ಭಿಕ್ಷುಕ ಜಾತಿಯ ಲಕ್ವ ಹೊಡದ ರಸಶೂನ್ಯವದನ' ವನ್ನು ಸ್ಥಿತಪ್ರಜ್ಞನ ವೀತರಾಗಭಯ ಕ್ರೋಧ ಸ್ಥಿತಿಗೆ ವ್ಯಂಗ್ಯವಾಗಿ ಹೋಲಿಸಿದೆ. ಇಲ್ಲಿ ವಿರೋಧ ಮಾತ್ರ ಧ್ವನಿತವಾಗುತ್ತಿದೆ. “ಗೌರಿ ಶಂಕರ” ಎಂಬ ಕವನದಲ್ಲಿ ಅತ್ಯುನ್ನತ ಶಿಖರಾರೋಹ ಗರ್ವಿಯ ಮನೋಭಾವಕ್ಕೆ ಪಡಿನುಡಿಯಾಗಿ “ಓ ಆನಂದಂ! ಪೇರಾನಂದಂ!” ಎಂಬ ವಾಕ್ಯ ಬರುತ್ತದೆ. ಆಶ್ವತ್ಥಾಮನ್ ಹುಚ್ಚಳಿದು ಪಶ್ಚಾತ್ತಾಪದಿಂದ ಅವಮಾನದಿಂದ ಸಂತಪ್ತವಾಗಿ ಆತ್ಮಹತ್ಯೆಗೆ ಮನ ಮಾಡುತ್ತಾನೆ. ಅದನ್ನರಿಯದೆ ಹುಚ್ಚು ಬಿಟ್ಟಿತೆಂಬ ಒಂದನ್ನು ಮಾತ್ರ ತಿಳಿದ ಮೇಳ "ಓ ಆನಂದಂ! ಪೇರಾನಂದಂ!' ಎಂದು ಹಾಡುತ್ತದೆ. ಭಮನಿರಸನವಾಗಿ ಸತ್ಯಸೂರ್ಯನ ಸಾಕ್ಷಾತ್ಕಾರವೇ ಪೇರಾನಂದವೆಂದು ಮೇಳದ ಅಭಿಪ್ರಾಯ. ಅಶ್ವತ್ಥಾಮನನ್ನು ಬಿಟ್ಟ ಹುಚ್ಚು ಪರ್ವತಾರೋಹಿಗೆ ಹಿಡಿದಿದೆ. ಮುಂದೆ ಅದು ಅವನನ್ನೂ ಬಿಟ್ಟು ಅವನಿಗೂ