ಪುಟ:Elu Suthina Kote.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2 ತಾಯಿ-ಮಗ ಸುಡುಮಸಾಲೆಯ ಕಂಡು ಅವನ ಕೊರಳುರಲಾಯ್ತ; ಜೋಡಿ ಕಣ್ಣನು ಕಿಟಕಿ ಬಳಿಗೆಳೆಯಿತು. ಕಂಡ ಕನಸಿನ ಸವಿಗೆ ದೀನ ಮನ ಮರುಳಾಯ್ತು. ಮೈಯುದ್ದ ಹರಿದ ಸೆಳೆಮೀಂಚ ಪ್ರತಿಬಿಂಬಿಸಿದ ಮಾನಮುಖ ಹೊಳೆಯಿತು. ತಿನದ ದೋಸೆಯನಗಿದು ಬಾಯಿ ಚಪ್ಪರಿಸಿತ್ತು; ಹೊಟ್ಟೆಕಿಚ್ಚಿನೊಳವನ ಹೊಟ್ಟೆ ಅಣಕಿಸಿತದನು, ಬಿರಿವವೊಲು ತೇಗಿತು. ಚಿಕ್ಕೆ ಮುಟ್ಟಿದ ಹಕ್ಕಿ ರೆಕ್ಕೆ ಸುಟ್ಟುದನರಿತು ಬುವಿಗೆ, ದೊಪ್ಪನೆ ಬಿತ್ತು ಸತ್ತು! 9 “ಕಲಕತ್ತ, ಪ್ಯಾರಿಸ್ತು, ಲಂಡನ್ನು, ನ್ಯೂಯಾರ್ಕು, ಕಡಲ ವಿಸ್ತರಲದಲ್ಲಿ ಹನಿಯೊಂದ ಹುಡುಕಲೆ? ನಿನ್ನ ಮನೆಯ ವಿಳಾಸ?

  • ಶೆಟ್ಟಿಯಂಗಡಿ ಜಗುಲಿ, ಪಾರ್ಕಿನೊಳಗಿನ ಬೆಂಚು

ಬೀದಿಯಂಚು. ಮಾರ್ಗದರಡೂ ಕಡೆಗೆ ಮುರುಕು ಗೊಂಬೆಗಳಾಟ ನೋಟದೂಟ. ಜೊಳ್ಳು ಮಾಟದ ಕೋಟಿ ಕೀಟಗಳ ಮೆರಣಿಗೆ ರಾಜಬೀದಿಗಳಲ್ಲಿ.