ಏಳು ಸುತ್ತಿನ ಕೋಟೆ ಮುಗಿಲು ಬೆಂಗಲಿಗರ ಕಡೆಗೆ ಹೊರಳಿ ಸನ್ನೆ ಮಡಿತು. ಸುತ್ತುಗೆರೆಯ ತೊರೆದ ನೆರಳ ದಂಡು ಹತ್ತು ದಿಕ್ಕಿನಿಂದ ಮಧ್ಯಬಿಂದು ದಾಳಿ ಸುದ್ದಿ ಹೊತ್ತುಗಾಳಿ ದೆಸೆದೆಸೆಗೂ ಓಡಿತು. ದೊರೆಯ ಅಮಲು ತಗ್ಗಿತು. ಗುಣಹೀನನ ದಬ್ಬಾಳಿಕೆ ನೀಚ ದೊರೆಯ ಆಳಿಕೆ! ಇಂದುವೆಡೆಗೆ ಮುನ್ನುಗ್ಗಿತು. ಬೆದರಿಕೆ ನುಡಿ ಬಡಬಡಿಸಿತು ಎಡೆಬಿಡದೆಯೆ ಗುಡುಗು: ಬಾನ್‌ಸೆರಗೋಳು ಕೂರಲಗಿನ ಹೊಳೆ ಹರಿಸಿತು ಪಿಡುಗು! ಇಳೆ ತೊಳೆಯುವ ಮಳೆ ಸುರಿಯಿತು. ಕೊಳೆ ಕಳೆಯುವ ಮಳೆ ಸುರಿಯಿತು! ಹುಚ್ಚು ಮಳೆಗೆ ಸಿಕ್ಕ ಬುವಿಯು ದಯಾಭಿಕ್ಷೆ ಬೇಡಿತು. ಕಡಲ ಮಡಿಲೆ ಮಗುಚಿದಂತೆ ಪ್ರಲಯಕಾಲ ಒದಗಿದಂತೆ ನೀರು ಹರಿಯಿತು. ತರು ಲತೆಗಳು ಹೂವು ಹಣ್ಣು ಕೂಸು ಕುನ್ನಿ ಗಂಡು ಹೆಣ್ಣು ಅಲೆಮಲೆಗಳ ಆಘಾತಕ್ಕೆ ಸಿಕ್ಕಿ ನೂರಾದವು; ಕಣ್ಣೆ ಕಾಣದಾದವು! ಮಾತನಾಡಿ ಆಡಿ ಆಡಿ ಮೂಕನಾದ ಮನುಜನಂತೆ ಬಿಡದೆ ಸುರಿದ ಮಳೆಯು ಕೊನೆಗು ಸುಮ್ಮನಾಯಿತು. ಕೊಲುವ ಗೆಲವಿನಲ್ಲಿ ತನ್ನ ಹಂಸಗೀತೆ ಹಾಡಿತು! ದಬ್ಬಾಳಿಕೆ ನಿಂತ ಸುದ್ದಿ ಹೊತ್ತ ಗಾಳಿ ಓಡಿತು. 28 ಪ್ರಲಯಗರ್ಭದಾಳದಲ್ಲಿ ಜೀವನದಿಯ ಉದ್ದಮ! ಮತ್ತೆ ಎಚ್ಚೆತ್ತ ಪ್ರಾಣವೀಣೆ ನುಡಿಯ ಸರಿಗಮ ಎಳೆ ಮಗುವಿನ ತಿಳಿ ನಗುವಿಗೆ ಹಕ್ಕಿಯುಲಿಯ ಸಂಗಮ!
ಪುಟ:Elu Suthina Kote.pdf/೪೪
ಗೋಚರ