ಈ ಪುಟವನ್ನು ಪರಿಶೀಲಿಸಲಾಗಿಲ್ಲ.
(Coup d'etat) ಮುಗಿಲ ಉಯ್ಯಾಲೆಯಲ್ಲಿ ಅಚ್ಚ ಬಿಳಿಯ ಮೋಡದುಪುಟಿ ಕವಿದ ಮೃದುಲ ಶಯ್ಕೆಯಲ್ಲಿ ಇಂದು ಮಲಗಿ ಆಷಾಢದ ಶುಕ್ಲಪಕ್ಷ ನವಮಿಯಂದು ಹುಣ್ಣಿಮೆಯನು ಬರೆಯುತಿದ್ದ ಸ್ವಪ್ನಪಟದ ಹರಹ ಮೇಲೆ! 'ಗಗನ ಸಾಮ್ರಾಜ್ಯಕೆ ನಾನೆ ನಾನೆ ಸಾರ್ವಭೌಮ!' ದನಿಯೆತ್ತಿತು ದೊರೆಯ ಮನಸು ಕನಸುಕನ್ನೆ ಕರೆಗೆ ಸೋಲೆ. “ನೀನೆ ಸಾರ್ವಭೌಮ, ನಿನಗೆ ಸಾಟಿಯಾರು ಚಂದ್ರಮ?' ಬಾನಿನಂಚಿನಿಂದ ಬಂದ ಬಿಳಿ ಮೋಡದ ಗೊಂಚಲು ಹೊಗಳು ನುಡಿಯ ನಜರನಿತ್ತು (ಮೊದಲೆ ಕೊರಳವರೆಗು ಕನಸು-ಕಳ್ಳು ಕುಡಿದ ದೊರೆಗೆ ಮತ್ತು!) ಮಂಕುಬೂದಿಯೆಸೆಯಿತು. ಚಂದ್ರ ಸಪ್ತವರ್ಣದೊಂದು ಮಂದಹಾಸವರವನಂದು ಕೈ ನೀಡಿದ ಆಷಾಢದ ಮೋಡಕೆಲ್ಲ ಹಂಚಲು ದುರ್ದೈವವು ದೂರದಲ್ಲಿ ತನ್ನ ಕತ್ತಿ ಮಸೆಯಿತು! 9 ಪಾತಾಳದ ಆಳದಿಂದ ನೆರಳ ಮೇಳ ಮೇಲೆ ಬಂದು ಗಗನದಂಚಿನಲ್ಲಿ ಕಪ್ಪು ಹೆಪ್ಪುಗಟ್ಟಿತು. ಗೂಢಚಾರ ಮೋಡವೊಂದು ಕರಿಯ ಮೊಗಕೆ ನಗೆಯ ತಂದು ಸ್ವಪ್ನಮುಗ್ಧ ದೊರೆಯ ಬಳಿಗೆ ಹೆಜ್ಜೆಯಿಟ್ಟಿತು. ಚಂದ್ರ ನಗೆಯ ನಗಲು OF