ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಏಳು ಸುತ್ತಿನ ಕೋಟೆ ರಣಪರಿಣತರೊಡನೆ ನನಗೆ ಸಮರ ಸಲ್ಲದು. ರಥವುರುಳಲಿ ನಗರದೆಡೆಗೆ. ಬೃಹನ್ನಡೆಗೆ ಮಿಸುನಿಗಡಿಗೆ, ಅಚ್ಚ ಹೊನ್ನಿನೊಳಗೆ ಹೂತ ವಜ್ರ ವೈಡೂರ್ಯ ಜೊತೆಗೆ!” “ಯುದ್ಧವಿರಲಿ ಬೃಹನ್ನಡೆಗೆ ರಥವನೇರು ಉತ್ತರ ಬನ್ನಿ ಮರದ ತುಟ್ಟತುದಿಗೆ ತೂಗುಚೀಲ ಹತ್ತಿರ. ಪಾಂಡುಸುತರ ಆಯುಧವದು; ಮರವನೇರಿ ಹೊರತೆಗೆ. ಹೆಣವಿದೆ. 'ಮರದ ತುಂಬ ಮುಳ್ಳು; ಮರದ ಮೇಲೆ ತೂಗು ಮುಟ್ಟಲಾರೆ ಹೆದರಿಕೆ! ಹೆಡೆ ಬಿಟ್ಟಿದೆ ಹಾವು ನೋಡು! “ಅದೇ ಗಾಂಡೀವವು. ಭಯವ ದೂಡು, ನನಗೆ ಕೊಡು. ಗಾಂಡೀವದ ಟಂಕಾರ ಧನಂಜಯನ ಶಂಖತೂರ್ಯ. ದೆಸೆದೆಸೆಯೊಳು ಮೊಳಗಿತು. ಶತ್ರು ಸೈನ್ಯ ನಿರ್ವೀಯ್ರ! ಎದುರಾಳಿಯ ಧ್ವಜದ ಮೇಲೆ ಕಾಗೆವಿಂಡು ಕುಳಿತಿತು, ಕುದುರೆ ಕತ್ತನಿಳಿಸಿತು! 98 ಅಧರ್ಮದಿದಿರು ಎದ್ದ ನೀವು ಗೆದ್ದು ಮನೆಗೆ ಬರುವಿರೆಂದೆ ನೆಚ್ಚಿರುವಳು ಪಾಂಚಾಲಿ. ಏಳಿ, ಏಳಿ ನುಗ್ಗಿ ಮುಂದೆ! ನನ್ನಿ ನಿಮ್ಮನೆರವಿಗಿರಲು ಒಲಿಯಳೇನು ವಿಜಯಲಕ್ಷ್ಮಿ? ಗಾಂಡೀವವ ತೋಟ್ಟು ಬನ್ನಿ ಬನ್ನಿಮರದ ದಿಕ್ಕಿನಿಂದ.