ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಕಲೆಗಾರ-ಕನಸು Each man kills the thing he loves ಏಳು ಸುತ್ತಿನ ಕೋಟೆ -OSCAR WILDE- ಚಂದ್ರಕಿರಣವನು ಏರಿ ಬಂದಳು ಕೊಟಡಿ ಕಿಟಕಿಯೊಳು ತೂರಿಬಂದಳು ಕಂಬಿಗಳ ನೆರಳ ಪಂಜರದ ನಡುವೆ ಮಲಗಿದವನ ಬಳಿ ನಿಂತಳು. ಗಾಳಿಯೊಳು ತೇಲಿ ಬಳಿ ಬರುವ ಗಾನದಂತೆ ಅರಿವುಗೊಡದೆ ಎದೆಹೊಸ್ತಿಲಿಗೆ ಬರುವ ಹದಿನಾರರೊಲವಿನಂತೆ ಇರುಳ ಹರವಿನೊಳು, ನಿದ್ದೆ ಮರೆವಿನೊಳು ಕರೆಯಿತೆನೆ ಮನಸು ಬರುವಂತೆ ಕನಸು, ಕನ್ಯ ಒಲಿದು ಬಂದಳಿಳೆಗಿಳಿದು ಬಂದಳು ನಿಶ್ಯಬ್ದ ಮುಗ್ಧ ಸಿರಿಚೆಲುವ ಮುದ್ದೆ, ಧನ್ಯ, ನೀನೆ ಅವನ ಮನದನ್ನೆ ನೀನಲ್ಲ ಅನ್ಯ! ಬಾಳಿನಾ ದಿನಗಳಲ್ಲಿ ಹರುಷ ಹೊಳೆಯೆ ಹರಿಯುತ್ತಿತ್ತು. ವರುಷದುದ್ದ ಚೈತ್ರವಧುವ ದಣಿವರಿಯದ ಕುಣಿತವಿತ್ತು. ಹರೆಯ ಕಂಡ ಕನಸ ಕೆಂಪ ಕಂಡು ಸಂಜೆ ಬಾನಿನಂಚು ನಾಚಿ ಅಂಥ ದಿನಗಳಲ್ಲಿ ಒಂದು...... ಮೇಜ ನಾಲ್ಕು ಮೂಲೆಯಲ್ಲು ಸಿಗರೇಟಿನ ಹೊಗೆಯ ಬಗೆ; ಕಾಫಿ ಲೋಟ ಕಂಬಗಳನ್ನು ಸುತ್ತಿ ಕುಣಿಯುತ್ತಿತ್ತು ನಗೆ ಕೆಂಪೇರುತಿತ್ತು!