ವಿಷಯಕ್ಕೆ ಹೋಗು

ಪುಟ:Elu Suthina Kote.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

29 ಯುಗಯುಗಾಂತರದುದ್ದ ಮನದ ಕಲ್ಪನೆ ಬರೆದ ಆಕಾರ ಸಾಕಾರವಾಗಿ ಬಂದ ಹೊನ್ನುಗಳಿಗೆಯೊಳೆದೆಯ ಮೂಲೆ ಮೂಲೆಯ ತುಂಬಿ ನಿಂತ ಮಹದಾನಂದ, ದಿಟ, ಅನಂತ ಏಳು ಸುತ್ತಿನ ಕೋಟೆ T ಚಂದ್ರಕಿರಣವನು ಏರಿ ಬಂದಳು ಕೊಟಡಿ ಕಿಟಕಿಯೊಳು ತೂರಿ ಬಂದಳು ಕಂಬಿಗಳ ನೆರಳ ಪಂಜರದ ನಡುವೆ ಮಲಗಿದವನ ಬಳಿ ನಿಂತಳು. ತರಳೆ ಕೈಬೆರಳು ಹಣೆಯ ಮುಂಗುರುಳ ನಡುವೆ ಸುಳಿದಾಡಿತು ನಿದ್ದೆ ಕದ್ದೋಡಿತು. ಸವಿಗನಸು ಎದೆಯ ಕದವನ್ನು ಇನಿಸು ಸದ್ದಿರದೆ ತೆಗೆದು ಬಂತು. ಕಣ್ಣಿದಿರು ನಿಂತು ಕನಸು ಕಳಕೊಂಡ ಮನಸು ಹುಡುಕಾಡುತಿರಲು ಹುಡುಗಾಟದಲ್ಲಿ ನಗೆಯಾಡಿತೆಂದೆ ನಕ್ಕವೋ ಮೇಜು ಕುರ್ಚಿಗಳು ಆನಂದದಲ್ಲಿ! 00 ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ ಮೈ ತಳೆದು ಇಳೆಗಿಳಿದ ಮಾಯಾವಿ ಕನಸಿದರು ಕಲೆಗಾರ ವಿನಯದೊಳು ತಲೆಬಾಗಿ ನಿಂತ ಅವನ ಕಣ್ಣಿನ ನೋಟ ಎದೆಯೆಡೆಗೆ ತಿರುಗಿತು: ಹೃದಯ ವಿಸ್ತರದಲ್ಲಿ ಚೈತ್ರಸಂಭ್ರಮದ ನಗೆ ಹೂವು ಹಣ್ಣಗಳೆಲ್ಲಿ? ಆನಂದವೆಲ್ಲಿ? ಹೃದಯ ಮರುಧರೆಯಲ್ಲಿ ಎಳೆ ಹಸುರ ಹೆಸರಿಲ್ಲ; ಜೀವದುಸಿರಿಲ್ಲ! ಮನ ಶುಷ್ಕ ಶುಷ್ಕ