ವಿಷಯಕ್ಕೆ ಹೋಗು

ಪುಟ:Elu Suthina Kote.pdf/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಲೆಗಾರ-ಕನಸು 00 ಮೋಹಜಾಲವ ಬೀಸಿ ಜಗಕೆ ತೆರೆಯೆಸೆದವಳು ಗಯ್ಯಾಳಿ! ರತಿಯಾಗಿ ಬಳಿ ಬಂದು ಮತಿಗೆ ಮಂಕನು ಕರೆದ ವೈಯಾರಿ! ನಗುವ ನಂದನವನವು ಬಂಜೆ ಸಹರವೆ ಇಂದು! ಕುರುಡು ಕಾಸಿನು ಬಿಡದೆ ಕಸಿದವಳು ನೆತ್ತರನು ಬಸದವಳು ರಸವೀಂಟಿ ಬಾಳಬ್ಬನೆಸೆದವಳು ಮೈಕೊಬ್ಬ ಮೆರೆಯ ಬಂದವಳಿವಳು ಮಾಯಾವಿ ರಕ್ಕಸಿ ರೋಷವುಕ್ಕಿತು. ಕಡಲ ಅಲೆಮೇಲೆ ಹೊಡೆತ ಮನದ ದಡ ಕುಸಿಯಿತು. ಪರಮಾಣು ಸಿಡಿಯಿತು. ಅಸುವ ನುಂಗುವ ಸೂರ್ಯ ಮುಗಿಲಡೆಗೆ ನೆಗೆದಿರಲು ನೂರು ತಲೆಮಾರುಗಳ ಬಯಕೆ ಕಟ್ಟಿದ ನಗರ ನಿರ್ನಾಮವಾಯಿತು. ಕಲೆಗಾರ ಕೈ ಬೀಸಿದನು ನಗುವ ರತಿಮುಖಕೆ ಕನಸೊಡೆದು ಬಿತ್ತು ಸತ್ತು!

28