ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಏಳು ಸುತ್ತಿನ ಕೋಟೆ. ಏಳು ಸುತ್ತಿನ ಕೋಟೆ ಸರ್ಪಕಾವಲು ಅದಕ್ಕೆ ಹೊರಗೆ ಒಳಗೆ! ನಡುವಿನರಮನೆ ಕೆಳಗೆ ನೆಲಮಾಳಿಗೆ! ಅಲ್ಲಿ ರೋದಿಸುತಿಹಳು ಚೆಲುವೆ ರಾಜಕುಮಾರಿ. ಮಾನಸಂರಕ್ಷಣೆಗೆ ಇರುವುದೊಂದೇ ದಾರಿ, ಹೊಳೆ ಬೆಂಕಿ ವಿಷ ಚೂರಿ! ಅರೆಘಳಿಗೆಯಂತರವೆ ಬದುಕು ಬಯಲಿನ ನಡುವೆ? ಏಳು ಸುತ್ತನು ದಾಟಿ ನೂರು ಭಟರನು ತರಿದು ಕತ್ತಿ ಹಿರಿದು ನುಗ್ಗಿ ಬಾರನೆ ರಾಜಕುವರ ನಲ್ಲೆಯ ಬಳಿಗೆ? ಅದೂ ಹೆಜ್ಜೆ ಸಪ್ಪಳ! ಕಣ್ಣ ನಂಬಲೆ ತಂದೆ? ಯಾರಿವನು ಕಣ್ಮುಂದೆ! ಹಗಲಿರುಳ ಸವಿಗನಸು ಇಳೆಗಿಳಿದು ಬಂತೆ? 'ಮನದನ್ನೆ ಇದೊ ಬಂದೆ. ಖಳನಾಯಕನ ಕೊಂದೆ ನಿನಗೆಂದೆ!' ಮುಗುಳ ಮೆರೆಯಿತು ಮೊಗವು; ಕುಶಲ ಕೇಳಿತು ಕಣ್ಣು: ನಂಜ ನುಂಗಿತು ನೆಲವು ನೂರು ವರುಷದವರೆಗೆ ಸುಖವಾಗಿ ಬಾಳಿದವು ಒಲವು ಚೆಲುವು! ಅಜ್ಜಿಕತೆ ಜೊತೆಜೊತೆಗು ಬುಗುರಿ ಚಿಣ್ಣೀದಾಂಡು ಕವಣೆ ಗಾಜಿನ ಗೋಲಿ ಕಲ್ಲಾಂಟಿ ಚೆಂಡು. 2F