ಪುಟ:Epigraphia carnatica - Volume I.djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

18 ಶಾಸನಗಳ ಸಂಗ್ರಹಣೆಯ ಜೊತೆಯಲ್ಲಿಯೇ ಪ್ರಾಚೀನ ಓಲೆಗರಿ, ಹಸ್ತಪ್ರತಿ ಗ್ರಂಥಗಳನ್ನೂ ಇವರು ಸಂಗ್ರಹಿಸಿದರು. ಈ ಗ್ರಂಥಗಳನ್ನು ಶೇಖರಿಸಿಟ್ಟು ಅವುಗಳನ್ನು ವ್ಯಾಸಂಗಮಾಡುವುದಕ್ಕಾಗಿಯೇ ಓರಿಯಂಟಲ್ ಲೈಬ್ರರಿಯು ಆರಂಭ ವಾಯಿತು. 1884ರಲ್ಲಿಯೇ “ ಬಿಬ್ಲಿಯೋಥಿಕಾ ಕರ್ನಾಟಕ' ಗ್ರಂಥಮಾಲೆಯನ್ನೂ ಇವರು ಆರಂಭಿಸಿದರು. ಈ ಮಾಲೆ ಯಲ್ಲಿ ಕರ್ಣಾಟಕ ಭಾಷಾಭೂಷಣ, ಕರ್ಣಾಟಕ ಶಬ್ದಾನುಶಾಸನ, ಪಂಪರಾಮಾಯಣ, ಪಂಪಭಾರತ, ಕವಿರಾಜಮಾರ್ಗ ಮತ್ತು ಕಾವ್ಯಾವಲೋಕನಗಳೆಂಬ ಅತ್ಯಮೂಲ್ಯವಾದ ಪ್ರಾಚೀನ ಗ್ರಂಥಗಳನ್ನು ಪ್ರಕಟಿಸಿದರು. - ಕೆಲಸದಿಂದ ನಿವೃತರಾದ ಮೇಲೆ ಭಾರತವನ್ನು ಬಿಟ್ಟು ಸ್ವದೇಶಕ್ಕೆ ತೆರಳಿ ಹ್ಯಾರೋ ನಗರದಲ್ಲಿ ನೆಲಸಿದರು. ಅಲ್ಲಿಂದಲೂ ಅವರು ಕರ್ನಾಟಕಕ್ಕೆ ಸಂಬಂಧಿಸಿದ ಅನೇಕ ವಿಷಯಗಳನ್ನು ಕುರಿತು ಲೇಖನಗಳನ್ನು ಬರೆಯುವುದನ್ನು ಮುಂದುವರೆಸಿದ್ದರು. 1914ರಲ್ಲಿ ಭಾರತ ಸರ್ಕಾರಕ್ಕಾಗಿ ಎಪಿಗ್ರಾಫಿಯ ಕರ್ನಾಟಕದ ಮೊದಲನೆಯ ಸಂಪುಟದ ಪರಿಷ್ಕತ ಆವೃತ್ತಿಯನ್ನು ಸಿದ್ಧ ಪಡಿಸಿದರು. 1927ರ ಜುಲೈ 10ರಂದು ತೊಂಬತ್ತರ ತುಂಬು ವಯಸ್ಸಿನಲ್ಲಿ ಅವರು ತೀರಿ ಕೊಂಡರು, ಎಲ್. ಡಿ. ಬಾರ್ನೆಟ್ ಅವರ ಮಾತುಗಳಲ್ಲಿ ಹೇಳುವುದಾದರೆ “ ಅವಿಶ್ರಾಂತ ದುಡಿಮೆ, ಅನಂತವಾದ ಅಭ್ಯಾಸ, ಸತ್ಯಾನ್ವೇಷಣೆಗಾಗಿ ಮನಃಪೂರ್ವಕವಾದ ಅರ್ಪಣೆ, ಇವುಗಳಿಂದ ರೈಸ್ ಅವರು ದಕ್ಷಿಣ ಭಾರತದ ಚರಿತ್ರೆ, ಸಾಹಿತ್ಯಗಳ ಅಭ್ಯಾಸಕ್ಕೆ ಉತ್ತೇಜನವನ್ನು ಕೊಟ್ಟು, ಜ್ಞಾನಾರ್ಜನೆಗೆ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ.”