ಪುಟ:Hosa belaku.pdf/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಸಾಲ ಪರಿಹಾರ

೫೯

ಸೋಮನಿಗೆ ತನ್ನ ಚಿನ್ನಿಯ ನೆನಪಾಯ್ತು. ಭಟ್ಟರು ಬದುಕಿದ್ದು ತಮ್ಮ ಮಕ್ಕಳ ಸಲುವಾಗಿ. ಈಗ ತಾನು ಏನೋ ಮಾಡಹೊರಟಿರುವೆ.

"ಹಾಗಾದರೆ ಈ ಕೆಲಸ ಮಾಡಬೇಕೇ?”

"ಯಾವದೇನಯ್ಯ ವೃತ್ತಿ? ಎರಡು ಕಾಸು ಕೈಯಲ್ಲಿ ಆಡುತ್ತಿರುವವನಿಗೆ ಮಾನ! ಜನ ದುಡ್ಡನ್ನು ಕೂಡಿಸುವ ರೀತಿಯನ್ನು ನೋಡುವದಿಲ್ಲ, ಕೂಡಿದ ದುಡ್ಡಿನ ರಾಸಿಯತ್ತ ನೋಡಿ, ಮನುಷ್ಯನ ಬೆಲೆಯನ್ನು ಕಟ್ಟುತ್ತಾರೆ.”

ಸೋಮನ ವಿಚಾರಚಕ್ರ ತಿರುಗತೊಡಗಿತು, ರೀತಿಗೂ ನೀತಿಗೂ ಯಾವದೇ ಸಂಬಂಧವಿಲ್ಲ ಬದುಕಬೇಕಾದರೆ ವೃತ್ತಿ ಯಾವದಾದರೇನು? ನಾಲ್ಕು ಜನ ಮೊದಲು ಮೂರು ದಿನ ಮೂಗು ಮುರಿಯುತ್ತಾರೆ. ಮುಂದೆ ಎಲ್ಲವೂ ಸಮ.

"ಯಪ್ಪಾ, ಹೊತ್ತಾಯ್ತು ಬುದ್ಧಿ, ಬೇಗ ಮುಗಿಸಿ” ಗಿಡ್ಡ ಜೋಲಿ ಹೊಡೆಯುತ್ತಲೇ ನುಡಿದ.
"ನಾನು ಆಗಲೇ ಮುಗಿಸಿ ಬಿಟ್ಟೆ” ಸೋಮ ಉತ್ತರಿಸಿದ.
"ಮತ್ತೆ ತುಂಬಿದ್ದು ಹಾಗೇ ಐತಲ್ರ್ತಿ"
"ಅಯ್ಯೋ, ನೀ ಹೆಚ್ಚಾಗಿ ಕುಡಿದಿದ್ದಿ ಮಬ್ಬೇ, ಅದು ಖಾಲಿ ಬಾಟ್ಲಿ" ಎಂದು ಹೇಳಿ ಸೋಮ ಬಾಟ್ಲಿಯನ್ನು ಮರಳಿ ತೆಗೆದು ಕೊಳ್ಳುವದಕ್ಕೆ ಭಟ್ಟರಿಗೆ ಹೇಳಿದ. ಸೆರೆಯಂಗಡಿ ತೆಗೆದ ಭಟ್ಟರನ್ನು ನೋಡಿದ ಸೋಮನ ಮೊದಲ ನಿರ್ಧಾರ ಕಳಚಿಬಿಟ್ಟಿತ್ತು. ಅದರ ಬದಲು ಬೇರೊಂದು ಆಶೆಯ ಮಹಾಮಂದಿರ ನಿರ್ಮಾಣವಾಗಿತ್ತು.

"ಬರ್‍ತೇನೆ ಭಟ್ಟರೇ ” ಎಂದು ಸೋಮ ಗಿಡ್ಡನ ಜತೆಯಲ್ಲಿ ಗಡಂಗದಿಂದ ಹೊರಬಿದ್ದ.



ಸೋಮ ಮನೆಗೆ ಬಂದ. ಆಕಾಶ ದಾಳಿ ಮುಗಿಯಿತೆಂದರೆ, ನೆಲಮನೆಯಿಂದ ಹೊರಗೆ ಬಂದ ಸೈನಿಕನಂತೆ ಹಾಯಾಗಿ ಉಸುರಿಸಿದ. ಆ ಉಸಿರನ್ನು ಕೇಳಿ ಚಿನ್ನಿ ಒಳಗಿನಿಂದಲೇ ಹೊರಬಂದಳು. ಅಪ್ಪನನ್ನು ಒಂದುಸಲ ದೃಷ್ಟಿಸಿ