ಈ ಪುಟವನ್ನು ಪರಿಶೀಲಿಸಲಾಗಿದೆ
94
ನಿರಂಜನ: ಕೆಲವು ಸಣ್ಣ ಕಥೆಗಳು
- ಆ ಚೀಲ ದಾಟಸಬೇಕು; ಪತ್ರಿಕೆಗಳಲ್ಲಿ ಅಚ್ಚಾಗದ ವಿಷಯಗಳ ಬಗ್ಗೆ
- ತುಸು ಮಾತನಾಡಬೇಕು. ಬಳಿಕ ಒಂದು ಸೈಕಲ್ ಆಚೆಗೆ; ಇನ್ನೊಂದು
- ನಗರದೊಳಗಿನ ಇಕ್ಕಟ್ಟಿನ ಸ್ಥಳಕ್ಕೆ.
- ಆ ವೃತ್ತದಲ್ಲಿ ಕುಳಿತಿದ್ದ ಒಂದೆರಡು ಸಲ 'ಕಾಣಿ'ಯನ್ನು ಹೋಲುವ
- ಒಬ್ಬಳು ಆ ಕಾಲುದಾರಿಯಲ್ಲಿ ಸುತ್ತುವುದನ್ನು ಕಂಡಿದ್ದೆ. ಒಬ್ಬಿಬ್ಬರು
- ಅವಳ ಜತೆ ಪೊದೆಗಳತ್ತ ಸಾಗಿದ್ದರು. ಒಮ್ಮೆ ಅವಳ ಕಿರಿಚಾಟ ಕೇಳಿ
- ಸಿತು. ಮೂಗರ ಪ್ರಲಾಪ...ಆ ಕಟ್ಟಿಯಲ್ಲಿ 'ಸಂಗಾತಿ'ಗಾಗಿ ಕಾಯುವ
- ಕೆಲಸ ನಿಂತಿತು. ಬಳಿಕ 'ಕಾಣಿ'ಯನ್ನು ನಾನು ಕಾಣಲಿಲ್ಲ.
- ಮನಸ್ಸು ಮೆದುಳಿನ ಯಾವ ಮೂಲೆಯಲ್ಲಿದೆಯೊ? ಆ ಘಟನೆ ಈಟ
- ಯಂತೆ ಅದನ್ನು ತಿವಿದಿತ್ತು. ಒಂದು ವರ್ಷ ಕಳೆದ ಮೇಲೆ ಚೌಕಟ್ಟು,
- ಹಿನ್ನಲೆ- ಎಲ್ಲವನ್ನೂ ಕಲ್ಪಿಸಿಕೊಂಡು 'ಕೊನೆಯ ಗಿರಾಕಿ' ಬರೆದೆ. ಆ
- ಜೀವಕ್ಕೆ 'ಕಾಣಿ' ಎಂದು ಹೆಸರಿಟ್ಟೆ. ಕತೆ ಬರೆದ ಮೇಲೆ ಅದಕ್ಕೆ ಪ್ರೇರಣೆ
- ಯಾದ ಸಂದರ್ಭವನ್ನು ನೆನಪಿನ `ಗವಿಯೊಳಕ್ಕೆ ತಳ್ಳಿದೆ.
- 'ಕತೆಗಾರ' ಮಾಸಪತ್ರಿಕೆಯಲ್ಲಿ 'ಕೊನೆಯ ಗಿರಾಕಿ' ಮೊದಲು ಬೆಳಕು
- ಕಂಡಿತು. ಸಂಪಾದಕರು: ಜಿ. ಎ. ನರಸಿಂಹಮೂರ್ತಿ.
ತಿರುಕಣ್ಣನ ಮತದಾನ
- ನಾನು ಎಷ್ಟೋ ಮಂದಿ ತಿರುಕಣ್ಣರನ್ನು ನೋಡಿದ್ದೇನೆ. ಆರೋಗ್ಯ
- ಮ್ಮಂದಿರು ಸತ್ತದ್ದೂ ಗೊತ್ತು. ಮತಗಟ್ಟೆಯಿಂದ ಮಾನಸಿಕವಾಗಿ
- ಎಷ್ಟೊಂದು ದೂರ ಅವರು!.... ಇಲ್ಲ; ಈಗ ಪರಿಸ್ಥಿತಿ ಬದಲಾಗಿದೆ ಎನ್ನು
- ತ್ತೀರಾ? ನೋಟಿಗೆ ಪ್ರತಿಯಾಗಿ ಓಟು? ಹೆಂಡವೆಂಬ ದ್ರವ ಇಂಧನದ
- ಕರಾಮತ್ತು?
ಒಂದೇ ನಾಣ್ಯದ ಎರಡು ಮೈ
- ಎಸ್. ಎನ್. ಶಿವಸ್ವಾಮಿ ಮೈಸೂರು ಆಕಾಶವಾಣಿಯ ದಕ್ಷ ಅಧಿಕಾರಿ.
- ಸಾಹಿತ್ಯವನ್ನು ಆ ಮಾಧ್ಯಮಕ್ಕಾಗಿ ಸೊಗಸಾಗಿ ದುಡಿಸಿಕೊೊಂಡವರು.
- ಅವರು ಕೇಳದೆ ಇರುತ್ತಿದ್ದರೆ, ಇದನ್ನು ನಾನು ಬರೆಯುತ್ತಲೂ ಇರಲಿಲ್ಲ,
- ಇದು ಪ್ರಸಾರವಾಗುತ್ತಲೂ ಇರಲಿಲ್ಲ. ಮುಂದೆ ಅಚ್ಚಾಗುತ್ತಲೂ ಇರ
- ಲಿಲ್ಲ ಎನ್ನುವುದು ಅಷ್ಟೇ ನಿಜ. ಕತೆಯ ಪೂರ್ವಾರ್ಧ, ನಡೆದದ್ದು.
- ನಾನೇ ಮುಖ್ಯ ಪಾತ್ರ. ಉತ್ತರಾರ್ಧ, ಕಲ್ಪನೆ.