ಪುಟ:Kadaliya Karpoora.pdf/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಪೋಯಾತ್ರೆ

೧೯೫

ಕಥೆಯನ್ನು ಸ್ವಲ್ಪಮಟ್ಟಿಗೆ ಕೇಳಿಬಲ್ಲ ಶರಣರೆಲ್ಲಾ ಮನಸ್ಸಿನಲ್ಲಿಯೇ ಆಲೋಚಿಸುತ್ತಿದ್ದರು. ಪ್ರಭುದೇವನ ಮನಸ್ಸಿನಲ್ಲಿಯೂ ಅದೇ ಆಲೋಚನೆ ಸುಳಿದಿತ್ತು:

`ನಿಜ, ರಾಜನು ಇವಳನ್ನು ಬಯಸಿದುದರಲ್ಲಿ ಆಶ್ಚರ್ಯವಿಲ್ಲ. ಆದರೆ ಇಂತಹ ಏರುಜವ್ವನದ ಸುಂದರಿ ಅದನ್ನು ತಿರಸ್ಕರಿಸಿ, ತನ್ನ ವಯಸ್ಸಿಗೆ ಮೀರಿದ ಆಧ್ಯಾತ್ಮಿಕ ಆಕಾಂಕ್ಷೆಯನ್ನೇರಿ ಬಂದಿರುವುದು ಅಚ್ಚರಿಯ ಸಂಗತಿ. ಸಾಮಾನ್ಯ ಚೇತನಗಳು ನಂಬಲಾಗದ ಸಂಗತಿ. ಆದುದರಿಂದ ಇವಳ ನಿಲುವನ್ನು ಒರೆಗೆ ಹಚ್ಚಿ ನೋಡಿ ಅದನ್ನು ಲೋಕಕ್ಕೆ ಪ್ರಕಟಮಾಡಲೇಬೇಕು.

- ಹೀಗೆ ಓಡುತ್ತಿತ್ತು ಪ್ರಭುದೇವನ ಮನಸ್ಸು. ಮಿಂಚಿನಂತೆ ಭಾವನೆಗಳು ಸಂಚರಿಸಿದುವು. ಮನಸ್ಸು ಒಂದು ನಿರ್ಧಾರಕ್ಕೆ ಬಂದಿತು.

ಶರಣರೆಲ್ಲಾ ಅಲ್ಲಮನನ್ನೇ ನೋಡುತ್ತಿದ್ದರು. ಮಹಾದೇವಿಯನ್ನು ಸ್ವಾಗತಿಸಿ ಮಾತನಾಡಿಸಬೇಕೆಂಬ ಅವರ ಆಕಾಂಕ್ಷೆಗೆ ಪ್ರಭುದೇವನ ಅತಿ ಗಂಭೀರವಾದ ವರ್ತನೆ ಅಡ್ಡಿಯಾಗಿತ್ತು. ಅದನ್ನು ಮೀರಿ ಮೇಲೇಳುವ ಧೈರ್ಯ ಯಾರಿಗೂ ಇರಲಿಲ್ಲ. ಕೊನೆಗೆ ಪ್ರಭುದೇವ ಕೇಳಿದ. ಗಂಭೀರತೆಯೇ ಮೈವೆತ್ತು ಬಂದಂತಿತ್ತು ಧ್ವನಿ :

``ಉದಮದದ ಯೌವನವನೊಳಕೊಂಡ ಸತಿ ನೀನು ಇತ್ತಲೇಕೆ ಬಂದೆಯವ್ವ? ಸತಿಯೆಂದರೆ ಮುನಿವರು ನಮ್ಮ ಶರಣರು. ನಿನ್ನ ಪತಿಯ ಕುರುಹು ಹೇಳಿದರೆ ಬಂದು ಕುಳ್ಳಿರು. ಅಲ್ಲವಾದರೆ ತೊಲಗು, ತಾಯೆ. ನಮ್ಮ ಗುಹೇಶ್ವರನ ಶರಣರಲ್ಲಿ ಲಿಂಗಸುಖಸನ್ನಿಹಿತವ ಬಯಸುವವರೆ, ನಿನ್ನ ಪತಿಯಾರೆಂಬುದು ಹೇಳಾ, ಎಲೆ ಅವ್ವಾ. ಸತಿಗೆ ಪತಿಯೇ ಪರದೈವ. ನಿನ್ನ ಪತಿಯ ಹೆಸರನ್ನು ಹೇಳಿದರೆ ಇತ್ತ ಬಾ. ಇಲ್ಲವಾದರೆ ಇಲ್ಲಿ ಸ್ಥಳವಿಲ್ಲ. ಅಂತಹ ಸತಿಯರ ಸಂಗ ವಿಷ ಕಾಣವ್ವ.

ಪ್ರಭುದೇವನ ಮಾತು ಮಹಾದೇವಿಯ ಮನಸ್ಸನ್ನು ನೇರವಾಗಿ ತಾಗಿತು. ಅವಳು ಅಧೀರಳಾಗಲಿಲ್ಲ. ಅವಳಲ್ಲಿದ್ದ ಸತ್ವಶಕ್ತಿಯ ತೇಜಸ್ಸು ಜಾಗ್ರತಗೊಂಡಿತು. ಅವನ ಪ್ರಶ್ನೆಗಳನ್ನು ಎದುರಿಸುವ ದಿಟ್ಟತನ ಮನಸ್ಸನ್ನು ತುಂಬಿತು. ಕಣ್ಣುಗಳು ಮಿಂಚಿದವು. ತನ್ನ ಮುಂದಿರುವ ಕಠಿಣವಾದ ಪರೀಕ್ಷೆಯನ್ನು ಎದುರಿಸಲು ಸಿದ್ಧವಾಗಿ ಹೇಳಿದಳು :

``ಹರನೇ ಗಂಡನಾಗಬೇಕೆಂದು ಅನಂತಕಾಲ ತಪಿಸಿದ್ದೆ ನೋಡಾ. ನನ್ನ ಜನ್ಮ ಜನ್ಮಾಂತರದ ಬಯಕೆ, ಶಿವನೇ ನನ್ನ ಗಂಡನಾಗಬೇಕೆಂಬುದು. ಈ