ಪುಟ:Kannada-Saahitya.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ನಿಂಕೆಯ ಕಥೆ ಅತಿಶಯ ಜಿನೇಂದ್ರ ವಚನಾ ನುಪಮಂ ಸಕಿಕ ಜೀವ ಹಿತನು; ಪುಣೋ ವಿತಮಂ ಭವ್ಯ ನಿಕಾಯ | ಸ್ತುತನುಂ ನೆರೆ ಪೇಳ್ವೆನರಿಯೆ ಧರ್ಮಾಮೃತಮಂ ಜಿನಮತದೊಳೆತು ಸಾರನು ದನಿವಂ ಲೇಸಾಗಿ ತೋರ್ಪುದೀ ಕೃತಿಯೊಬ್ಬ ↑ ಜಿನೇಂದ್ರನ ವಚನಾಮೃತವು ಅತಿಶಯವಾದ್ದು ; ಸ ಕ ಜೇವಗಳಿಗನಿ ಒತವನ್ನು ಭಿಟುಮಾಡುವಂಥದು ; ಪುಣ್ಯ ದಿಂದ ದೊರಕುವಂಥದು ; ಭವ್ಯಸನ ಸವ ಸ್ತುತಿಸಿರುವಂಥ ಮ, ಆಂಘ ಜಿನ ವಚನ ರೂಪವಾದ ಧರ್ಮವೆಂಬ ಅನ್ನುತವನ್ನು ೯ ಧರ್ಮಾಮೃತವೆಂಬ ಈ ಗ್ರಂಥದಲ್ಲಿ ಚೆನ್ನಾಗಿ ತಿಳಿಯುವಂತೆ ವಿವರಿಸುತ್ತೇನೆ. ಚಿನ ಮತದಲ್ಲಿ ಸಾರ ಎಷ್ಟಿದೆಯೋ ಅ ಸ ಈ ಗ್ರಂಥದಲ್ಲಿ ತೂರಿ ಬರುತ್ತದೆ. ] ಲಲಿತಾಂಗ ಕಾಶ್ಮೀರ ದೇಶದಲ್ಲಿ ವಿಜಯಪುರವೆಂಬ ಒಂದು ಪಟ್ಟಣ. ಆದ ನ ಳುವವನು ಅರಿಮಥನನೆಂಬ ಅರಸ, ಸೌಂದರಿಯೆಂಬವಳು ಅವನ ಪಟ್ಟದರಸಿ, ಅವರಿಗೆ ಲಲಿತಾಂಗನೆಂಬ ಮಗ ಹುಟ್ಟಿದನು. ಲಲಿತಾಂಗ ಶುಕ್ಲಪಕ್ಷದ ಚಂದ್ರನಂತೆ ಬೆಳೆಯುತ್ತಿದ್ದನು. ತಾಯಿ ತಂದೆಗಳಿಗೆ ಮಗನ ಮೇಲೆ ಮೋಹ ಅತಿಯಾಯಿತು. ಶಿವನು ಕೆಟ್ಟದ್ದು ಮಾಡಿದರೆ ಕೈಯೆತ್ತಿ ಹೊಡೆಯುತ್ತಿಲ್ಲ ; “ ಆಹ್ವಾ, ದುರ್ಜನರ ಜೊತೆ ಹೋಗಬಾರದು ” ಎಂದು ಮುನಿದು ಮೃದುವಾಗಿ ಬಯ್ಯುತ್ತಲೂ ಇರ ಲಿಲ್ಲ. ಮಗ ತಾನೂ ತನ್ನ ಗೆಳೆಯರೂ ಕೂಡಿ ಪುರಜನರನ್ನೂ ಸರಿ ಜನರನ್ನೂ ಹಿಡಿದು ಅವಮಾನಿಸಿ ಬಡಿದರೆ, ಅರಸನೂ ಅರಸಿಯ