ಪುಟ:Kannada-Saahitya.pdf/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಅಕ್ಕರೆಯಿಂದ ನೋಡಿ ನಗುವರು. ಹೀಗಾಗಿ ಲಲಿತಾಂಗನು ಅಂಕುಶ ನಿಲ್ಲದ ಮದದಾನೆಯಂತಾದನು ; ಬೇವನ್ನು ಸೇರಿದ ನೀರು ಕಹಿಯಾಗು ವಂತೆ ದುರ್ಜನರ ಸಂಗದಿಂದ ಅವನು ದುಷ್ಟನಾಗಿ ಸೊಕ್ಕಿದನು. ಅವನಿಗೆ ಯೌವನವೊದಗಿತು ದರ್ಪ, ಸೊಕ್ಕು, ಬಲ ಇವುಗಳ ಜೊತೆಗೆ ಯೌವನವೂ ಸೇರಲು ಅವನ ಕೆಟ್ಟತನಕ್ಕೆ ಕಟ್ಟಿಲ್ಲವಾಯಿತು. ಅವನು ಯಾರನ್ನೂ ಬಿಡದೆ ಎಲ್ಲರನ್ನೂ ತವುಡಿಗೂ ಆಗದಂತೆ ಕಂಡು ಬಯ್ಯುವನು ; ಹೊಯ್ಯುವನು. ಊರಿನ ತಿರುಕರನ್ನೆಲ್ಲ ಅಟ್ಟಿ ಹಿಡಿತರಿಸಿ ಸುಂಕ ಕೊಡಿರೆಂದು ಕಾಡುವನು, ಎಣ್ಣೆ ಯವರ ಕೇರಿಯನ್ನು ಸೂರೆ ಮಾಡಿ ದೇವಸ್ಥಾನದಲ್ಲಿ ದೀಪ ಹೊತ್ತಿಸುವನು. ಹೂವಿನ ಸಂತೆಯನ್ನು ಹೊಕ್ಕು ಮಾಲೆಗಾರರು ದಿಕ್ಕುಗೆಟ್ಟೋಡಲು ಮಾಲೆಗಳನ್ನು ತಾನೂ ತನ್ನ ಪರಿವಾರದ ಧೂರ್ತರೂ ಮುಡಿದು ವಿನೋದದಿಂದ ನಗುವರು. ಕಂಚು ಗಾರರು, ಮಣಿಗಾರರು, ಬಟ್ಟೆಯವರು ಮೊದಲಾದವರ ಅಂಗಡಿಗಳಿಗೆ ನುಗ್ಗಿ ಕಣ್ಣಿಗೆ ಬೇಕಾದ ವಸ್ತುಗಳನ್ನೆಲ್ಲ ಕಿತ್ತುಕೊಂಡು ತನ್ನ ಪರಿವಾರ ದವರಿಗೆ ಸಂಬಳವೆಂದು ಹಂಚುವನು, ಧನಿಕರ, ಲೋಭಿಗಳ ಹೊನ್ನನ್ನು ಒಂದುಳಿಯದಂತೆ ಕವರಿಕೊಂಡು ಸಿಕ್ಕಿದವರಿಗೆ ದಾನ ಮಾಡುವನು, ನಾಯಿ ಹಂದಿಗಳನ್ನೂ ಗಂಡು ಹೆಣ್ಣುಗಳನ್ನೂ ಬಲಾತ್ಕಾರದಿಂದ ಎಳ ತರಿಸಿ, ಕಂಡವರೆದೆ ನಡುಗುವಂತೆ ಅವರನ್ನು ಹೊರಿಸುವನು. ಅವನ ಈ ರೀತಿಯ ಹಲವು ಕಾಟಗಳಿಂದ ಹೊಳಲೆಲ್ಲ ಅಲ್ಲೋಲ ಕಲ್ಲೋಲ ವಾಯಿತು. ಜನಕ್ಕೆ ಕನಸಿನಲ್ಲೂ ಲಲಿತಾಂಗನ ಭಯವೆ ಹೆಚ್ಚಾಯಿತು. ಆಗ ಎಲ್ಲರೂ ನೆರೆದು ಒಂದಾಗಿ ಅರಮನೆಯ ಬಾಗಿಲಿಗೆ ಬಂದು ಹುಯ್ಯಲಿಟ್ಟರು. ಓಲಗದಲ್ಲಿದ್ದ ಅರಿಮಥನ ಮಹಾರಾಜನು ಅವರನ್ನು ಬರಹೇಳಿ ಹುಯ್ಯಲಿದೇನೆಂದು ಕೇಳಿದನು. ಅವರು ಅದಕ್ಕೆ 11 ದೇವಾ, ನಿಮ್ಮ ಕುಮಾರನ್ನು ಆಡುವ ಆಟ ಮಾಡುವ ಮಾಟಕ್ಕೂ ನಾವು ನಿಲ್ಲಲಾರೆವು ; ತಾಳಲಾರೆವು ಎ೦ದು ಅವನ ದುಷ್ಟತನವನ್ನೆಲ್ಲ ವಿವರಿ ಸಿದರು. ನಮಗೆ ಏನಪ್ಪಣೆ ? ” ಎಂದು ಬೆಸಗೊಂಡರು, ಕೇಳಿ ಮಹಾ ರಾಜನು, 'ನನಗೆ ಇದು ಗೊತ್ತಿರಲಿಲ್ಲ. ನೀವು ಅಂಜಬೇಡಿ ” ಎಂದು