ಪುಟ:Kannada-Saahitya.pdf/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಒcಳಯ ಕಥೆ ನುಡಿದು, ಹಿರಿಯರು ಕಿರಿಯರೆನ್ನದೆ ಎಲ್ಲರನ್ನೂ ಮನ್ನಿಸಿ ವೀಳಿಯ ಕೊಟ್ಟು ಕಳಿಸಿದನು. ಬಳಿಕ, “ಮಗ ಓದಹೊದರೆ ಬಳಲುವನೆಂದೆಣಿಸಿ ಓದಿಸದೆ ಹೋದೆ. ಅವನು ದುಷ್ಟರೊಡನೆ ಸೇರಿ ಕೆಟ್ಟನು. ನಾನೆ ಕೆಡಿಸಿದಂತಾಯಿತು ” ಎಂದು ಚಿಂತಿಸಿದನು. ಮಗನನ್ನು ಕರಸಿಕೊಂಡು ರಾಜನ ಕರ್ತವ್ಯ ಗಳೇನೆಂದು ವಿವರಿಸಿ ಬುದ್ದಿ ಹೇಳಿದನು. “ ಹೋದದ್ದು ಹೊಗಲಿ, ಇನ್ನು ಮುಂದೆ ಹೀಗೆ ಮಾಡ ಬೇಡ, ಇಂದು ಮೊದಲಾಗಿ ನೀನು ಕೊಳಲಿನಲ್ಲಿ ಸೊಕ್ಕಿನಿಂದ ಏನಾದರೂ ಬಾಧೆಯುಂಟುಮಾಡಿದರೆ ಆಗ ನೀನು ನನ್ನ ಮಗನಲ್ಲ, ನಾನು ಮುಸಿಯುತ್ತೇನೆ” ಎಂದು ಬುದ್ಧಿ ಹೇಳಿ ಎಚ್ಚರಿಸಿದನು, ಆರು ತಿಂಗಳವರೆಗೆ ಹುರಿಬಿಗಿದು ಕಂಬಿ ಕಟ್ಟಿದ್ದರೂ ಬಿಟ್ಟ ಕೂಡಲೆ ಮತ್ತೆ ಡೊಂಕೇ ಆಗುವ ನಾಯ ಬಾಲದ ಹಾಗಾಯಿತು ಅವನ ನಡತೆ, ತಂದೆಯ ಮಾತಿಗೆ ಸ್ವಲ್ಪವೂ ಮನ್ನಣೆದೋರದೆ ಅವನು ಮೊದಲಿ ಗಿಂತಲೂ ಹೆಚ್ಚಾಗಿ ಹೊಳಲನ್ನು ಕಾಡಿ ಅಳಲಿಸತೊಡಗಿದನು. ಅದನ್ನು ಕಂಡು ದೊರೆ ಕೋಪಗೊಂಡು ಲಲಿತಾಂಗನನ್ನು ಕರೆಸಿ, “ಮಗನೇ, ಮೊಹ ದಿಂದ ನಿನ್ನ ಹಲವು ಕಟ್ಟತನಗಳನ್ನು ಇದುವರೆಗೂ ಸೈರಿಸಿದ್ದೆ. ಈಗ ನೀನು ಮೊದಲಿಗಿಂತ ಹೆಚ್ಚು ಕೇಡಿಗಸಾದೆಯಲ್ಲ! ಉಳಿದ ಮಕ್ಕಳನ್ನು ಉಪೇಕ್ಷಿಸಿ ನಿನಗೆ ರಾಜ್ಯವನ್ನು ಕೊಡಬೇಕೆಂದಿದ್ದೆ ನಾನು. ನೀನು ಹೀಗೆ ಸಂತಾಪವುಂಟುಮಾಡಿದೆ. ಇನ್ನು ನನ್ನ ಮೇಲೆ ತಪ್ಪಿಲ್ಲ. ಲೇಸೆಂದು ಓಡನ್ನು ಹಿಡಿದರೆ ಕೈ ಮಸಿಯಾಗುವ ಹಾಗೆ ನಿನ್ನಂಥ ದುಷ್ಟ ನನ್ನು ಒಳಗೊಂಡಿದ್ದರೆ ನನ್ನ ಕೀರ್ತಿ ಕೆಡುವುದು ; ಸದ್ಧತಿ ಹಾಳಾಗು ವುದು. ಇನ್ನು ಮೇಲೆ ನಾನಾಳುವ ರಾಜ್ಯದಲ್ಲಿರಬೇಡ, ಹೊರಟುಹೋಗು” ಎಂದು ಗದರಿಸಿ ಮಡಿದನು. ಲಲಿತಾಂಗ ತಾಯಿಯ ಬಳಿ ಬಂದು ತನ್ನ ದೇಶಶ್ಯಾಗದ ಸುದ್ದಿ ಯನ್ನು ತಿಳಿಸಿದನು. ಆಕೆ, 14 ಕಂದಾ, ಕೆಟ್ಟತನವನ್ನು ಬಿಟ್ಟುಬಿಡು ವಂತೆ ಮಹಾರಾಜರು ನಿನ್ನನ್ನು ಕೈ ಮುಗಿದು ಕೇಳಿಕೊಳ್ಳಲಿಲ್ಲವೇ ?