ಪುಟ:Kannada-Saahitya.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕನ್ನಡ ಸಾಹಿತ್ಯ ಚಿತ್ರಗಳು

ಇತ್ತ ವಿದ್ಯುಚ್ಚೋರ ಮುನಿ ಹನ್ನೆರಡು ವರ್ಷಗಳವರೆಗು ಗುರುಗಳನ್ನ ಗಲದೆ ಸಮಸ್ತ ಆಗಮವೆಲ್ಲವನ್ನೂ ಕಲಿತರು. ಉಗ್ರೋಗ್ರ ತಪಸ್ಸು ಮಾಡಿ ಕಡೆಗೆ ಆಚಾರ್ಯರಾದರು. ಐನೂರು ಮಂದಿ ಶಿಷ್ಯರೊಡನೆ ದೇಶನಿಹಾರ ಮಾಡುತ್ತಿದ್ದರು.

    ಹೀಗೆ ವಿಹರಿಸುತ್ತಿದ್ದಾಗ ಒಮ್ಮೆ ಪೂರ್ವದೇಶದಲ್ಲಿ ಖಾಳಿಮಂಡಳವೆಂಬ ನಾಡಿನಲ್ಲಿ ತಾಮ್ರಲಿಪಿಯೆಂಬ ಪಟ್ಟಣದ ಹೊರವಳಯಕ್ಕೆ ಹೋದರು. ಅಲ್ಲಿ ವರಾಂಗಾಯಿಯೆಂಬ ಉಗ್ರದೇವತೆಗೆ ಆರಾರು ತಿಂಗಲಿಗೊಮ್ಮೆ ಜಾತ್ರೆಯಾಗುವುದು.ಅಷ್ಟಮೆಯ ದಿನ ಜಾತ್ರೆ ನೆರೆಯಿತು. ದುರ್ಗಾದೇವತೆ ಋಷಿಗಳ ಬರವನ್ನು ದೂರದಲ್ಲೆ ಕಂಡು ಎದುರು ಹೋಗಿ "ನನ್ನ ಜಾತ್ರೆ ಮುಗಿಯುವವರೆಗೂ ನೀವು ಈ ಪಟ್ಟಣವನ್ನು ಪ್ರವೇಶಿಸಬೇಡಿ" ಎಂದು ತಡೆದಳು.

ಶಿಷ್ಯರು "ನಮ್ಮನ್ನು ದೇವತೆ ಏನು ಮಾಡುತ್ತಾಳೆ? ಹೋಗೋಣ ಭಟಾರಾ!" ಎಂದು ಅವರನ್ನೊಡಗೊಂಡು ಪಟ್ಟಣವನ್ನು ಪ್ರವೀಶಿಸಿದರು.

   ರಾತ್ರಿ ಪಟ್ಟಣದ ಪಶ್ಛಿಮ ದಿಕ್ಕಿನ ಕೋಟಿಯ ಹೊರಗಡೆ ವಿದ್ಯುಚ್ಚೋರ ಭಟಾರರು ಪ್ರತಿಮಾ ಯೋಗದಲ್ಲಿ ನಿಂತರು. ದೇವತೆ ಮುನಿದು ಪಾರಿವಾಳದಷ್ಟು ದೊಡ್ಡವಾದ ಚಿಕ್ಕುಟಗಳನ್ನೂ ಸೊಳ್ಳಿಗಳನ್ನೂ ನಿರ್ಮಿಸಿ ಅವರ ಮೇಲೆ ಬಿಟ್ಟಳು. ಇರುಳು ನಾಲ್ಕು ಜಾನವೂ ಅವು ಮೈಯನ್ನೆಲ್ಲ ತಿನ್ನುತ್ತಿದ್ದು ನರಕ ವೇದನೆಗಿಂತ ಹೆಚ್ಚು ವೇದನೆಯುಂಟಾಗುವಂತೆ ಮಾಡಿದವು. ವಿದ್ಯುಚ್ಚೋರ ಮುನಿಗಳು ಅವೊಂದೂ ಇಲ್ಲವೇ ಇಲ್ಲವೋ ಎಂಬಂತೆ ಆ ವೀದನೆಗಳನ್ನೆಲ್ಲ ಸೈರಿಸಿದರು. ಸೈರಿಸಿ ಉತ್ತಮ ಧ್ಯಾನದಲ್ಲಿ ಮನಸ್ಸು ನಿಲ್ಲಿಸಿದರು. ಕಡೆಗೆ ಸಮಸ್ತ ಕರ್ಮಗಳನ್ನೂ ಕೆಡಿಸಿ ಮೋಕ್ಶಕ್ಕೆ ಹೋದರು.
     ಭವ್ಯರು ವಿದ್ಯುಚ್ಚೋರಾ ಋಷಿಗಳನ್ನು ನೆನೆದು ದುಖಗಳನ್ನೆಲ್ಲ ಸೈರಿಸಿ ರತ್ನತ್ರಯಗಳನ್ನು ಸಾಧಿಸಿ ಸ್ವರ್ಗಮೋಕ್ಶ ಸುಖಗಳನ್ನು ಪಡೆಯಲಿ.
                            ಹಿನ್ನುಡಿ

[ಇದು "ವಡ್ಡಾರಾಧನೆ" ಎಂಬ ಹಳಗನ್ನಡ ಗ್ರಂಧದಲ್ಲಿನ ಒಂದು ಕಥೆ.ಆ ಗ್ರಂಥದಲ್ಲಿ ಇಂಥವೇ ಹತ್ತಿಪ್ಪತ್ತು ಕಧೆಗಳಿವೆ.ಧರ್ಮಮಾರ್ಗದಲ್ಲಿ ನಡೆದು ತಪಸ್ಸು ಮಾಡುವಾಗ ಅನೇಕ ಬಗೆಯ ತೊಂದರೆಗಳಿಗೆ ಸಿಕ್ಕಿ, ಅವುಗಳನ್ನೆಲ್ಲ ಸಹಿಸಿ