ಪುಟ:Kannada-Saahitya.pdf/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಭರತ-ಬಾಹುಬಲಿ ಕನಸಿನಲ್ಲಿ ಕೂಡ ಅದನ್ನೆ ನೆನೆಯುವರು. ಅವನು ಆ ಕಾಲದ * ಕಾಮದೇವ. ಎಂದಮೇಲೆ ಅವನ ಸೌಂದಯ್ಯಕ್ಕೆ ಬೇ೬ ವರ್ಣನೆಯೇಕೆ ? ಬೇರೆ ಮಕ್ಕಳು ಯಶಸ್ವತಿಗೆ ಭರತನಾದ ಮೇಲೆ ತೊಂಬತ್ತೊಂಭತ್ತು ಮಂದಿ ಗಂಡು ಮಕ್ಕಳೂ ಎಲ್ಲರಿಗಿಂತಲೂ ಕಿರಿಯವಳಾಗಿ ಒಬ್ಬ ಮಗಳೂ ಹುಟ್ಟಿದರು. ಬಾಹುಬಲಿ ಹುಟ್ಟಿದ ಬಳಿಕ ಸುನಂದೆ ಒಬ್ಬ ಮಗಳನ್ನು ಮಾತ್ರ ಪಡೆದಳು. ಯಶಸ್ವತಿಯ ಮಗಳು ಬ್ರಹ್ಮ ; ಸುನಂದೆಯ ಮಗಳು ಸೌಂದರಿ. ಈ ಮಕ್ಕಳೆಲ್ಲರೂ ಕುಲಭೂಷಣರಾಗಿ ಬೆಳಗುತ್ತಿದ್ದರು. ಇವರನ್ನೆಲ್ಲ ಕಂಡು ಆದಿ ಪುರುಷನ ಅಕ್ಕರೆ ಉಕ್ಕಿ ಬಂತು. ಅವರೆಲ್ಲ ರಿಗೂ ತಕ್ಕ ಭೂಷಣಗಳನ್ನು ತನ್ನ ಬುದ್ಧಿ ಬಲದಿಂದ ಹೊಸದಾಗಿ ನಿರ್ಮಿಸಿ ಕೊಟ್ಟನು, ಅವರೆಲ್ಲರೂ ಇಳೆಯೆರಚುವ ಆ ಅಲಂಕಾರಗಳನ್ನು ತೊಟ್ಟು ಬೆಳಕಿನ ಕಣಗಳಿಂದಲೇ ನಿರ್ಮಿತರಾಗಿರುವರೊ ಎಂಬಂತೆ ತೋರುತ್ತಿದ್ದರು. ವಿದ್ಯೋಪದೇಶ ಈ ಮಕ್ಕಳಿಗೆ ತಕ್ಕ ವಿದ್ಯೆಗಳನ್ನು ಕಲಿಸಬೇಕೆಂದು ಆದಿನಾಥನಿಗೆ ಮನಸ್ಸಾಯಿತು. ಆ ಹೊತ್ತಿಗೆ ಸರಿಯಾಗಿ ಬ್ರಹ್ಮ ಸೌ೦ದರಿಯರಿಬ್ಬರೂ ತಂದೆಯ ಸಮಾಸಕ್ಕೆ ಬಂದು ನಮಸ್ಕಾರ ಮಾಡಿ ದೂರ ಕುಳಿತುಕೊಂಡರು. ಋಷಭಸ್ವಾಮಿಯು ಮಕ್ಕಳಿಬ್ಬರನ್ನೂ ಹತ್ತಿರ ಕರೆದು ತೊಡೆಯ ಮೇಲೆ ಕೂರಿಸಿಕೊಂಡು, ಮಕ್ಕಳಿರಾ, ನಿಮ್ಮಿಬ್ಬರ ನಡವಳಿಕೆಯೂ ವಿನಯಕ್ಕೆ ನೆಲೆಯಾಗಿದೆ. ಈ ವಯಸ್ಸು, ಈ ಶೀಲ, ಈ ಏನಯ- ಎಲ್ಲಕ್ಕೂ ವಿದ್ಯೆ ಯನ್ನು ಸೇರಿಸಿದರೆ ಆಗ ನೀನೆ ಜಗತ್ಪಾವನೆಯರಾಗುತ್ತೀರಿ. ಎಲ್ಲರನ್ನೂ ಮಾರಿಸುತ್ತೀರಿ ?” ಎಂದು ನುಡಿದನು. ಬಳಿಕ ಅವರಿಬ್ಬರನ್ನೂ ಎರಡು ಪಕ್ಕ ಗಳಲ್ಲಿ ಕೂರಿಸಿಕೊಂಡು ಹಿರಿಯ ಮಗಳು ಬ್ರಹ್ಮಗೆ ಲಿಪಿಗಳನ್ನೂ ಸೌಂವರಿಗೆ ಗಣಿತವನ್ನೂ ಉಪದೇಶಮಾಡಿದನು. ಇದರ ಜೊತೆಗೆ ವಾಯವನ್ನೂ

  • ಜೈನಪುರಾಣಗಳು ಒಟ್ಟು ಇಪ್ಪತ್ತು ನಾಲ್ಕು ಮಂದಿ ಕಾನುದೇವರು ಬೇರೆ ಭೇರೆ ಕಾಲಗಳಲ್ಲಿದ್ದರೆಂದು ಹೇಳುತ್ತವೆ. ಅವರಲ್ಲಿ ಬಾಹುಬಲಿ ಮೊದಲನೆಯವನು,