ಪುಟ:Kannada-Saahitya.pdf/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಕನ್ನಡ ಸಾಹಿತ್ಯ ಚಿತ್ರಗಳು ಸಮಸ್ತ ಕಲೆಗಳನ್ನೂ ತಿಳಿಸಿ ಅವರು ಸಕಲ ವಿದ್ಯಾ ಪರಿಪೂರ್ಣೆಯರಾಗುವಂತೆ ಮಾಡಿದನು, ಹೀಗೆ ಮೊದಲು ಹೆಣ್ಣು ಮಕ್ಕಳಿಗೆ ವಿದ್ಯೋಪದೇಶಮಾಡಿ ಆಮೇಲೆ ಗಂಡುಮಕ್ಕಳಿಗೆ ಕಲಿಸಕೊಡಗಿದನು, ಭರತನಿಗೆ ಅರ್ಥಶಾಸ್ತ್ರ ಭರತಶಾಸ್ತ್ರ ಗಳನ್ನು ತಿಳಿಸಿದನು. ಬಾಹುಬಲಿಗೆ ಕಾಮತಂತ್ರ, ಆಯುರ್ವೇದ, ಧನು ರ್ವೇದ, ಹಸ್ತಿ ತಂತ್ರ, ಅಶ್ವತಂತ್ರ, ರತ್ನ ಪರೀಕ್ಷೆ ಮೊದಲಾದವನ್ನು ಕಲಿಸಿ ದನು. ಉಳಿದ ಮಕ್ಕಳಿಗೆಲ್ಲ ಗೀಳವಾದ್ಯಗಳ ಅರಿವನ್ನೊಳಗೊಂಡ ಗಂಧರ್ವ ಶಾಸ್ತ್ರ, ಚಿತ್ರಕಲೆ, ವಾಸ್ತು ವಿದ್ಯೆ ಮುಂತಾದ ಲೋಕೋಪಕಾರಿಗಳಾದ ಶಾಸ್ತ್ರ ಗಳು ಎಷ್ಟಿವೆಯೋ ಅಷ್ಟನ್ನೂ ಉಪದೇಶಮಾಡಿದನು. ಉತ್ತಮ ವಿದ್ಯೆಗಳಿಗೆ ನೆಲೆಯಾದ ಮಕ್ಕಳೆಲ್ಲರೂ ತಮ್ಮ ನಯ ವಿನಯಗಳಿಂದ ತಂದೆಯ ಮನಸ್ಸಿಗೆ ಆನಂದವುಂಟುಮಾಡುತ್ತಿದ್ದರು. fy. ಗಾರಂಭ ಅಷ್ಟು ಹೊತ್ತಿಗೆ ಲೋಕದಲ್ಲಿ ಜನ ಕಷ್ಟ ಪಟ್ಟು ದುಡಿಯದೆ ಸುಖವಾಗಿ ಬಾಳಬಹುದಾಗಿದ್ದ ಭೂಗಭೂವಿ) ಸಿಕ್ರಿ ಪೂರ್ತಿಯಾಗಿ ಮಾಯವಾಯಿತು, ಮೈ ಮುರಿದು ಕೆಲಸಮಾಡಿಯೇ ಬದುಕಬೇಕಾದ ಕರ್ಮಭೂಮಿ ಸ್ಥಿತಿ ಪ್ರಾರಂಭವಾಯಿತು. ಆಗ ಮೊದಲು ತಾನಾಗಿಯೇ ಹುಟ್ಟಿ ಬೆಳೆದು ಫಲ ಕೊಡುತ್ತಿದ್ದ ಸಸ್ಸಾದಿಗಳ ಸಾರ ಕುಗ್ಗಿ ಹೋಯಿತು. ಜನರಿಗೆ ರೋಗರುಜಿನ ಗಳ ಬಾಧೆಯೂ ಬಂದೊದಗಿತು, ನಗಾಣದೆ ಪ್ರಜೆಗಳೆಲ್ಲ ಒಟ್ಟುಗೂಡಿ ನಾಭಿರಾಜನ ಸಲಹೆಯಂತೆ ಆದಿನಾಥನ ಬಳಿ ಬಂದರು. ತಮ್ಮ ಹಸಿವು ಸಂಕಟಗಳನ್ನು ಪರಿಹರಿಸಿ ಬಾಳುವ ದಾವ ತೋರಬೇಕೆಂದು ಮೊರೆಯಿಟ್ಟರು, ಋಷಭಸ್ವಾಮಿಯು ಅವರ ಮೊರೆಯನ್ನು ಕೇಳಿ, ' ಅಂಜಬೇಡಿ ” ಎಂದು ಅವರನ್ನೆಲ್ಲ ಸ೦ತಯಿಸಿದನು. ಬಳಿಕ ಭೂಮಿಯನ್ನು ಅಲ್ಲಲ್ಲಿಯ ಪ್ರಕೃತಿ ಸ್ವಭಾವಕ್ಕನುಗುಣವಾಗಿ ಅನೇಕ ಬಗೆಯಾಗಿ ವಿಂಗಡಿಸಿದನು. ಆಯಾ ಪ್ರದೇಶದಲ್ಲಿ ಹೇಗೆ ಹೇಗೆ ಜೀವನ ಸೌಕಯ್ಯಗಳನ್ನು ದೊರಕಿಸಿಕೊಳ್ಳಬಹುದೆಂಬುದನ್ನು ತಿಳಿಸಿದನು. ದೇಶಗಳನ್ನು ಆಳುವುದು, ತೆರಿಗೆಯೆತ್ತುವುದು, ಜನ ನೆಮ್ಮದಿಗೆ ದಾರಿಮಾಡು